ಪರಿಶುದ್ಧ ರಾಜಕಾರಣ, ಪರಿಶುದ್ಧ ವ್ಯಕ್ತಿತ್ವ ಮತ್ತು ಪರಿಶುದ್ಧ ಕೌಟುಂಬಿಕ ಜೀವನ ಹೊಂದಿರುವ ರಾಜಕಾರಣಿ ಸಾಧನೆ, ವ್ಯಕ್ತಿತ್ವಗಳನ್ನು ಮಾದರಿಯಾಗಿರಿಸಿಕೊಂಡು ನಮ್ಮ ಜನಾಂಗದ ಎರಡನೇ ಸಾಲಿನ ನಾಯಕರನ್ನು ಸಿದ್ಧಗೊಳಿಸುವ ಗುರಿಯನ್ನು ಹೊಂದಿ ಸಮುದಾಯದ ಸೇವೆಯೇ ಮುಖ್ಯ ಧ್ಯೇಯವನ್ನಾಗಿ ಪ್ರಾಮಾಣಿಕ ರಾಜಕಾರಣ ಮತ್ತು ಸಮುದಾಯದ ಸೇವೆಯಲ್ಲಿ ಅಗ್ರಗಣ್ಯರಾಗಿ ನಿಲ್ಲುವವರು ನಮ್ಮ ನಾಯಕರಾದ ಶ್ರೀ.ಆರ್.ಬಿ.ತಿಮ್ಮಾಪುರ ಅವರು. ಅವರ ಮೇಲೆ ಲಂಚದ ಪ್ರಕರಣವನ್ನು ದಾಖಲಿಸಿರುವುದು ನನ್ನ ಮತ್ತು ಸಮುದಯದ ಮನಸ್ಸಿಗೆ ಘಾಸಿಯನ್ನ ನೋವನ್ನೂ ಉಂಟುಮಾಡಿದೆ.ಎಂದು ಮಾಜಿ ಶಾಸಕ ಗಂಗಹನುಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಯಾವುದೇ ರಾಜ್ಯದ ಖಜಾನೆಗೆ: ಗರಿಷ್ಠ ಆದಾಯ ತರುವ ಇಲಾಖೆ ಅಬಕಾರಿ ಇಲಾಖೆ. ನಮ್ಮ ರಾಜ್ಯದಲ್ಲಿ ಈ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಲಂಚ ಪ್ರಕರಣದಲ್ಲಿ ಅಬಕಾರಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ. ಇವೆಲ್ಲ ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ, ವಾಹಿನಿಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳು. ಬಂಧನವಾಗಿದೆ,ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ,ತನಿಖೆ ನಡೆಯುತ್ತಿದೆ,ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಸುದ್ದಿಗಳು ಪ್ರಕರಣದ ನ೦ತರದ ಕ್ರಮಗಳು. ಆದರೆ, ಇದ್ದಕ್ಕಿದ್ದಂತೆ ಬಂದ ಸುದ್ದಿಯೆಂದರೆ ಅಬಕಾರಿ ಸಚಿವರು ಇದರಲ್ಲಿ ಶಾಮೀಲಾಗಿದ್ದಾರೆ. ಅವರ ಪುತ್ರನಿಗೂ ಇದರಲ್ಲಿ ಪಾಲಿದೆ, ಎಂದು ಪ್ರಕರಣ ದಾಖಲಾಗಿದೆ ಎನ್ನುವುದು ಆಘಾತಕಾರಿ ಸುದ್ದಿ.
ಈ ಪ್ರಕರಣವಾಗಲಿ ,ಆರೋಪವಾಗಲಿ ಇಲ್ಲಿ ಮುಖ್ಯವಲ್ಲ ಈ ಪ್ರಕರಣದ ಹಿನ್ನೆಲೆ ಮತ್ತು ಅದರ ಹಿಂದಿರುವ ಷಡ್ಯಂತ್ರ ಮತ್ತು ಸಂಚನ್ನು ಇನ್ನೊಂದು ಆಯಾಮದಲ್ಲಿ ನೋಡಬೇಕೆನ್ನುವುದು ಈ ಪ್ರಕಟಣೆಯ ಉದ್ದೇಶ.
ಇಲಾಖೆಗೆ ಕಾಯಕಲ್ಪ ನೀಡಿ, ಪಾರದರ್ಶಕತೆ ತಂದು, ಸನ್ನದುಗಳನ್ನು,, ಪಡೆಯಲು ಸರಳೀಕೃತ ವಿಧಾನಗಳನ್ನು ಅಳವಡಿಸಿ, ಯಾವುದೇ ಅಧಿಕಾರಿಗಳನ್ನು ಭೇಟಿಯಾಗದೇ,ಸನ್ನದು ಪಡೆಯುವ ಮಾದರಿಯನ್ನು ಜಾರಿಗೆ ತಂದು,ಆನ್‌ಲೈನ್‌ನಲ್ಲಿ ಎಲ್ಲವನ್ನೂ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತಂದ ಕೀರ್ತಿ ಶ್ರೀ.ಆರ.ಬಿ.ತಿಮ್ಮಾಪುರ ಅವರದು.
ಕೆಲವು ಸನ್ನದುಗಳನ್ನು ನೀಡವ ಸಲುವಾಗಿ ಹರಾಜು ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಪಾರದರ್ಶಕತೆ ಅಲ್ಲವೇ? ಸಾರ್ವಜನಿಕವಾಗಿ,ಬಿಡ್ಡಿಂಗ್ ಮೂಲಕ ಪರವಾನಗಿ ನೀಡುವ ಪ್ರಕ್ರಿಯೆ. ನೇರವಾಗಿ ವ್ಯಕ್ತಿ ಸಂಪರ್ಕವೇ ಇಲ್ಲದೇ,ಪಾರದರ್ಶಕವಾಗಿ ಆಡಳಿತ ನಡೆಸುತ್ತಿರುವ ಇಲಾಖೆಯ ಸಚಿವರ ಮೇಲೆ ಪ್ರಕರಣ ದಾಖಲಿಸುವ ಉದ್ದೇಶ, ಏನು?
ಕಡತಗಳ ವಿಲೇವಾರಿ,ತೀರ್ಮಾನಿಸುವ ಟಿಪ್ಪಣಿಗಳು,ಯಾವುದೂ ಸಚಿವರ ಮೇಜಿಗೆ,ಅವಲೋಕನಕ್ಕೆ ಅಂತಿಮ ಸಹಿಗೆ ಬಾರದೇ ಇರುವ ಪ್ರಕರಣದಲ್ಲಿ ಸಚಿವರ ಹೆಸರನ್ನು, ಕುಟುಂಬವನ್ನು ಎಳೆದು ತಂದು,ಪಕರಣ ದಾಖಲಿಸುವುದು ಷಡ್ಯಂತ್ರವಲ್ಲದೇ ಮತ್ತೇನು?
ಇತ್ತೀಚಿನ ದಿನಗಳಲ್ಲಿ ಸಂಪುಟದಲ್ಲಿರುವ ದಲಿತ ಸಚಿವರ ಮೇಲೆ ಅವ್ಯಾಹತವಾಗಿ ಆಪಾದನೆಗಳು,ಆರೋಪಗಳು ಅಸಹಜವೆನಿಸುವಷ್ಟು ಮಟ್ಟಿಗೇಉದ್ದೇಶಪೂರ್ವಕ ಎನಿಸುವಷ್ಟರಮಟ್ಟಿಗೆ ಕೇಳಿ ಬರುತ್ತಿವೆ. ಉದಾಹರಣೆಗೆ: ಶ್ರೀ.ಮಹದೇವಪ್ಪನವರ ಮೇಲೆ ಎಸ್‌ಟಿಪಿ/ಟಿಎಸ್‌ಪಿ ಹಣದ ದರ್ಬಳಕೆಯ ಆರೋಪ, ಶ್ರೀ.ಜಿ.ಪರಮೇಶ್ವರ ಅತ್ಯಂತ ಅಸಮರ್ಥ ಗೃಹಮಂತ್ರಿ ಎಂಬ ಆರೋಪ. ಶ್ರೀ.ಕೆ.ಹೆಚ್.ಮುನಿಯಪ್ಪ ಇಲಾಖೆಯಲ್ಲಿ ಪಡಿತರ ಅಕ್ಕಿಯ ಕಳ್ಳ ದಾಸ್ತಾನಾಗಿದೆ, ಪಡಿತರ ಅಕ್ಕಿಯನ್ನು ಇತರೇ ರಾಜ್ಯಗಳಿಗೆ. ಸಾಗಿಸಲಾಗುತ್ತಿದೆ. ಎನ್ನುವ. ಆರೋಪ, ಪ್ರಿಯಾಂಕ ಖರ್ಗೆ ಅವರ ಮೇಲೆ ವೈಯಕ್ತಿಕ ಟೀಕೆಗಳು ವ್ಯಕ್ತಿಗತ ಆಕ್ರಮಣ ಇವೆಲ್ಲವೂ ನಿಲ್ಲಬೇಕು ಶ್ರೀ.ಆಂಜನೇಯ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ,ಸಾಬೀತಾಗದಿದ್ದರೂ,ಅವರ ರಾಜಕೀಯ ಭವಿಷ್ಯ ತೂಗುಯ್ಯಲೆ ಮಾಡಲಾಗಿದೆ.
ಪರಿಶಿಷ್ಟ ಮತ್ತು ದಲಿತ ನಾಯಕರನ್ನು ಮುಗಿಸುವ ಹುನ್ನಾರದೊಂದಿಗೆ ಲಂಚ ಪ್ರಕರಣದಲ್ಲಿ ಸಿಲುಕಿಸಲು ಸಂಚು ನಡೆದಿದೆ. ಹೀಗೆ ಹೇಳುತ್ತಾ ಹೋದರೆ ದಲಿತ ನಾಯಕರನ್ನೇ ಗುರಿಯಾಗಿಸಿಕೊಂಡು ಅವರ ರಾಜಕೀಯ ಭವಿಷ್ಯವನ್ನು ನಾಶಪಡಿಸುವ ಪಡೆ ಸಕ್ರಿಯವಾಗಿರುವುದು ಸ್ಪಷ್ಟ. ಈ ಪಡೆಯ ಬಗ್ಗೆ ತನಿಖೆ ಆಗಬೇಕಿದೆ.
1998 ಕ್ಕೆಕೊನೆಗೊಂಡು ಅಬಕಾರಿ ಲೈಸೆನ್ಸ್ ಅನ್ನು ಯವುದೇ ಸರ್ಕಾರ ನೀಡಿರ್ಲಿಲ್ಲ ಆದರೆ ಬಿಜೆಪಿ ಜಂಟಿ ಸರ್ಕಾರ ಅಧಿಕಾರಕ್ಕೆ ಬಂದು ಸಂದರ್ಭದಲ್ಲಿ 2020ರಲ್ಲಿ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತಂದು ಸಿ ಎಲ್ 7 ಸನ್ನದನ್ನು ಸರಳಿಕರಣಗೊಳಿಸಿ ರಾಜ್ಯಾದ್ಯಂತ ಸಿ ಎಲ್ 7ಗಳನ್ನು ಹೆಚ್ಚು ಮಾಡಿದ್ದೆ ಬಿಜೆಪಿಯ ಸರ್ಕಾರ ಅದರ ಬಗ್ಗೆಯೂ ಸಹ ಬಿಜೆಪಿಯ ನಾಯಕರು ಸ್ಪಷ್ಟನೆ ನೀಡಬೇಕು ಮತ್ತು ಈ ಘಟನೆ ಬಗ್ಗೆ ಕುಲಂಕುಶ ತನಿಖೆ ನಡೆದು ಮಾನ್ಯ ಶ್ರೀ ತಿಮ್ಮಾಪುರ್ ರವರಿಗೆ ನ್ಯಾಯ ಸಿಗಬೇಕೆಂದು ಮತ್ತು ಯಾವುದೇ ಕಾರಣಕ್ಕೂ ಈ ಪ್ರಕರಣಕ್ಕೆ ಸಿಲುಕಿಸಿ ಸಂಪುಟದಿಂದ ಕೈ ಬಿಡಬಾರದೆಂದು ಒತ್ತಾಯಿಸುತ್ತೇನೆ.
ಒಂದು ಸುಳ್ಳನ್ನು ನೂರು ಬಾರಿ ಹೇಳಿ ಜನತೆಗೆ ಇದು ನಿಜವೇ ಎನ್ನುವಂತೆ ವರ್ಣಿಸಿ ದಲಿತ ಮಂತ್ರಿಗಳನ್ನು ತೇಜೋವದೆ ಮಾಡುತ್ತಿರುವುದು ಯಾವ ನ್ಯಾಯ? ಎಸ್ ಸಿ, ಎಸ್ ಟಿ ಹಣವನ್ನು ಆಂಧ್ರದ ಬ್ಯಾಂಕ್ ನಲ್ಲಿ ವ್ಯವಹಾರ ಮಾಡಿ ಹಣವನ್ನೆಲ್ಲ ಲೂಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೆ ಆಗಾಗ ಪ್ರಸ್ತಾಪಿಸುತ್ತಲೆ ಇರುವ ನಾಯಕರುಗಳು ಯಾವ ಅವಧಿಯಲ್ಲಿ ಆಂಧ್ರದಲ್ಲಿ ಖಾತೆ ತೆರೆದಿದೆ ಎಂದು ಪರಿಶೀಲನೆ ಮಾಡಬೇಕಲ್ಲವೇ ಇನ್ನು ಮುಂದಾದರು ಪರಿಶಿಷ್ಠ ಜಾತಿಯ ರಾಜಕೀಯ ನಾಯಕರುಗಳ ಮೇಲೆ ಅಪಾದನೆ ಮಾಡುವುದು ನಿಲ್ಲಲಿ.ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ :ಮಂಜುನಾಥ್ ಹಾಲ್ಕುರಿಕೆ
