ತಿಪಟೂರು:ಗ್ರಾಮೀಣ ಭಾಗದಲ್ಲಿ ಶಾಲಾ ಕಾಲೇಜುಗಳನ್ನ ತೆರೆದು ಶಿಕ್ಷಣ ಕ್ರಾಂತಿ ಮಾಡಿದ ತರಳುಬಾಳು ಮಠದ ಸೇವೆ ಅನನ್ಯವಾಗಿದ್ದು,ಸಾವಿರಾರು ಬಡಮಕ್ಕಳಿಗೆ ಅಕ್ಷರ ಅನ್ನ ದಾಸೋಹ ನೀಡುವ ಮೂಲಕ ಬೆಳಕಾಗಿದ್ದಾರೆ ಎಂದು ಖ್ಯಾತ ಕ್ರೀಡಾಪಟು ಶ್ರೀಮತಿ ಜೈ ಶೀಲ ತಿಳಿಸಿದರು

ತಾಲ್ಲೋಕಿನ ಹಾಲ್ಕುರಿಕೆ ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಿದ ತರಳಬಾಳು ಕಲಾ ಸೌರಭ 2026 ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾಪಟು ಜೈ ಶೀಲ ಮಾತನಾಡಿ ತರಳಬಾಳು ಶಿಕ್ಷಣಕ್ಕೆ ಆಧ್ಯತೆ ನೀಡದೆ ಸಂಸ್ಕಾರ,ಹಾಗೂ ಸಂಸ್ಕೃತಿಯ ಕಲಿಸಲು ಆಧ್ಯತೆ ನೀಡುತ್ತಿದೆ,ಮಕ್ಕಳ ಅಭಿವೃದ್ದಿಗೆ ಅಗತ್ಯವಾದ ಶಿಕ್ಷಣ ನೀಡುತ್ತಿದೆ ಮಠದವಾತಾವರಣದಲ್ಲಿ ಬೆಳೆದ ಮಕ್ಕಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಯುತ್ತಾರೆ,ಶ್ರೀ ಮಠ ಗ್ರಾಮೀಣ ಭಾಗದಲ್ಲಿ ಶಾಲಾ ಕಾಲೇಜು ಸ್ಥಾಪಿಸಿ ಜ್ಞಾನದ ಬೆಳಕು ನೀಡಿದ್ದಾರೆ,ಹಾಲ್ಕುರಿಕೆಯಂತಹ ಹಳ್ಳಿಗೆ ನಗರದಿಂದ ಮಕ್ಕಳು ಶಿಕ್ಷಣ ಅರಸಿ ಬರುತ್ತಿರುವುದು ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ನ ಗುಣಮಟ್ಟಕ್ಕೆ ಸಾಕ್ಷಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೊನ್ನವಳ್ಳಿ ಸಬ್ ಇನ್ಪೆಕ್ಟರ್ ರಾಜೇಶ್ ಮಾತನಾಡಿ ಸೈಬರ್ ವಂಚಕರು ಸಾರ್ವಜನಿಕರ ಅಮಾಯಕತೆಯನ್ನ ಅರಿತು, ಅವರ ಗಮನಬೇರೆಡೆ ಸೆಳೆದು ವಂಚನೆ ಮಾಡುತ್ತಾರೆ ಯಾವುದೇ ಅಪರಿಚಿತ ಕರೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ತಂತ್ರಜ್ಞಾನ ಬೆಳೆದಂತೆ,ಯಾವುದೇ ಶ್ರಮವಿಲ್ಲದೆ ಹೆಚ್ಚು ಹಣಗಳಿಸಬೇಕು ಅನೋ ಉದೇಶದಿಂದ ಸೈಬರ್ ವಂಚಕರು ಜಾಲರಚಿಸಿಕೊಂಡು,ವಂಚಿಸುತ್ತಾರೆ, ಸಾರ್ವಜನಿಕರು ಅಪರೀಚಿತರೊಂದಿಗೆ ಎಚ್ಚರವಹಿಸಬೇಕು.ಶಾಲಾ ಕಾಲೇಜುಗಳಲ್ಲಿ ಅಪಘಾತ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಹೆಚ್.ವಿ ನಾಗರಾಜು,ಉಪಾಧ್ಯಕ್ಷರಾದ ಗೆದ್ಲೇಹಳ್ಳಿ ದಿನೇಶ್,ಮರುಳಯ್ಯ,ಹೆಚ್.ಸಿ ಎಂ.ಜಿ ಪಿಯು ಕಾಲೇಜು ಪ್ರಾಚಾರ್ಯ ದೇವೇಂದ್ರ ನಾಯಕ್. ಮುಖ್ಯೋಪಧ್ಯಾಯರಾದ ವೀರಣ್ಣಗೌಡ,ಸಾಧು ವೀರಶೈವ ಸಮಾಜದ ಅಧ್ಯಕ್ಷ ನಂಜುಂಡಪ್ಪ ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ಮುಖ್ಯೋಪಧ್ಯಾಯ ವಿಜಯ್ ಹೆಚ್.ಬಿ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ