KALPATHARU KRANTHI

ದಸರೀಘಟ್ಟ ಶ್ರೀ ಕ್ಷೇತ್ರಕ್ಕೆ ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಯೋಗೇಶ್ ಭೇಟಿ,ಮಠದಿಂದ ಅಭಿನಂದನೆ.

Spread the love

ತಿಪಟೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಲ್.ಯೋಗೇಶ್ ರವರು ತಾಲೂಕಿನ ಪ್ರಸಿದ್ಧ ದಸರೀಘಟ್ಟದ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶಾಖ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ರವರು ನೂತನ ಜಿಲ್ಲಾಧ್ಯಕ್ಷ ಯೋಗೇಶ್ ರವರನ್ನು ಅಭಿನಂದಿಸಿ, ಸನ್ಮಾನಿಸಿದರು.

ಜಿಜಿಲ್ಲಾಸಂಘದ ಹೆಸರಿನಲ್ಲಿ ಅರ್ಚನೆ ಪೂಜೆ ನೆರವೇರಿಸಿದ ,ಎಲ್ ಯೋಗೇಶ್,ಕಲ್ಪತರು ನಾಡಿನ ಶಕ್ತಿ ದೇವತೆ ಶ್ರೀ ಚೌಡೇಶ್ವರಿ ದೇವಿ ಎಲ್ಲಾ ಪತ್ರಕರ್ತರಿಗೂ ಶುಭ ಉಂಟುಮಾಡಲಿ,ಕಲ್ಪತರು ನಾಡಿಗೆ ಶಾಂತಿ ಸುಭೀಕ್ಷೆ ಉಂಟಾಗಲಿ ಎಮನದು ಪ್ರಾರ್ಥನೆ ಸಲ್ಲಿಸಿರುವುದ್ದಾಗಿ ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ದೊಡ್ಡಗುಣಿ,ನಿರ್ದೇಶಕರುಗಳಾದ ಸುರೇಶ್ ವತ್ಸ, ಮತ್ತು ಯೋಗೀಶ್ ಮಳೆಕಲ್ಲಳ್ಳಿ ಹಾಗೂ ಹಿರಿಯ ಪತ್ರಕರ್ತ ಎನ್.ಭಾನುಪ್ರಶಾಂತ್ ಹಾಜರಿದ್ದರು.

Exit mobile version