: ದಾವಣಗೆರೆಯ ಬಳಿ ಇರುವ ಐಕಾಂತಿಕ ಪ್ರಕೃತಿ ಧಾಮದಲ್ಲಿ ಸಹಜ ಕೃಷಿಯನ್ನು ಅಳವಡಿಸಿಕೊಂಡಿರುವ ಶ್ರೀ ರಾಘವ ಅವರ ಕನಸಿನ ಕೂಸಾದ ಅಚ್ಚರಿ ಗಡಿಗೆ ಕಾರ್ಯಗಾರವನ್ನು ತಿಪಟೂರಿನಲ್ಲಿರುವ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀಯುತ ಶ್ರೀ ಆರ್ ಎಂ ಕುಮಾರಸ್ವಾಮಿಯವರ ಮನೆಯ ಆವರಣದ ತೋಟದಲ್ಲಿ ನೆರವೇರಿಸಲಾಯಿತು.

ಕಾರ್ಯಗಾರದಲ್ಲಿ ಅಣ್ಣಪ್ಪನ ಹಳ್ಳಿಯ ಸೊಪ್ಪಿನ ತಜ್ಞರಾದ ಶ್ರೀ ಉಮೇಶ್ ನೈಸರ್ಗಿಕವಾಗಿ ಬೆಳೆದ ಸೊಪ್ಪುಗಳನ್ನು ಪರಿಚಯ ಮಾಡಿದ್ದಲ್ಲದೆ, ಅವುಗಳ ಉಪಯೋಗ ಮತ್ತು ಆರೋಗ್ಯದ ಬಗ್ಗೆ ಪ್ರಾತ್ಯಕ್ಷಿತವಾಗಿ ವಿವರಣೆ ನೀಡಿದರು .
ತುಮಕೂರಿನ ನಿವೃತ್ತ ಪ್ರೊಫೆಸರ್ ಹಾಗೂ ಸಿದ್ದ ಕೃಷಿ ತಜ್ಞರಾದ ಶ್ರೀ ಡಾಕ್ಟರ್ ರಂಗನಾಥ್ ಮಾತನಾಡುತ್ತಾ ಬ್ರಹ್ಮಾಂಡದಲ್ಲಿರುವ ಶಕ್ತಿಯನ್ನು ನಾವು ಧ್ಯಾನದ ಮುಖಾಂತರ ಪಡೆದು ಅದನ್ನು ಬೆಳೆಯುವ ಸಸ್ಯಗಳಿಗೆ ವರ್ಗಾಯಿಸಿದಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂದು ತಿಳಿಸಿದರು.
ಕೇವಲ 15*3 ಅಡಿ ವಿಸ್ತೀರ್ಣದಲ್ಲಿ62 ರೀತಿಯ ವಿವಿಧ ತಳಿಗಳ ತರಕಾರಿ ಹಾಗೂ ಸೊಪ್ಪುಗಳನ್ನು ಒಟ್ಟ್ಟೋಟ್ಟಿಗೆ ಬೆಳೆಯುವ ವಿಧಾನವನ್ನು ಶಿರಾ ತಾಲೂಕಿನ ಸಹಜ ಕೃಷಿಕರಾದ ಶ್ರೀ ರವಿವರ್ಮ ಪ್ರಾತ್ಯಕ್ಷಿತವಾಗಿ ತೋರಿಸಿಕೊಟ್ಟರು.
ಸಾವಯವ ಕೃಷಿಕರಾದ ಮೂಗತ್ತಿಹಳ್ಳಿ ಯೋಗಾನಂದ, ಆಲ್ಪೂರ್ ಶಾಲೆಯ ಉಪಾಧ್ಯಾಯರಾದ ಬಸವರಾಜು, ಆಲದಹಳ್ಳಿ ಪ್ರಸಾದ್ , ತಿಪಟೂರು ಜಾಗೃತಿ ಹಾಗೂ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ರೇಣುಕರಾದ್ಯ, ದಿಬ್ಬದಳ್ಳಿ ಶಾಮಸುಂದರ್, ವಿನಾಯಕ ಪ್ರಸಾದ್ ಗೊರಗೊಂಡನಹಳ್ಳಿ ಮಹೇಶ್ , ಎಚ್ .ಡಿ .ಎಫ್. ಸಿ .ಮಧುರಾಜ್ ದೊಡ್ಡ ಮನೆ ಮುಂತಾದವರು ಉಪಸ್ಥಿತರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ