KALPATHARU KRANTHI

ಪ್ರಜಾವಾಣಿ ಉಪಸಂಪಾದಕ ಕೆ.ಜೆ ಮರಿಯಪ್ಪ ನವರಿಗೆ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದಿಂದ ಸನ್ಮಾನ.

Spread the love

ತಿಪಟೂರು: ಬೆಂಗಳೂರು ಪ್ರಸ್ ಕ್ಲಬ್ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಪ್ರಜಾವಾಣಿ ಉಪಸಂಪಾದಕ ಕೆ.ಜೆ ಮರಿಯಪ್ಪ ನವರಿಗೆ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ತಿಪಟೂರು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ತುಮಕೂರಿನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಜೆ ಮರಿಯಪ್ಪ ನವರು ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನ ನಡೆಸುತ್ತ 25ವರ್ಷ ಪೂರೈಸಿರುವುದು ಸಂತೋಷದ ವಿಷಯ,ನಾಡಿನ ಹೆಸರಾಂತ ಸಾಹಿತಿಗಳಾದ ಕೆ.ಎಸ್ ನಿಸಾರ್ ಅಹಮದ್ ,ಹೆಚ್.ಎಸ್ ವೆಂಕಟೇಶ್ ಮೂರ್ತಿ.ನಾ.ಡಿಸೋಜ ಸೇರಿದಂತೆ ಖ್ಯಾತ ರಂಗಕರ್ಮಿ, ಹುಣಸನ್ವಾಡಿ ರಾಜನ್ ರಂತಹ.ಖ್ಯಾತನಾಮರನ್ನ ಕರೆಸಿ ,ಸಮಾಜದ ಬೆಳವಣಿಗೆಗೆ ಪೂರಕವಾದ ವಿಚಾರಗಳನ್ನ ಬಿತ್ತುತ್ತಿರುವುದು ಶ್ಲಾಘನೀಯ,ಸಂಘ ಉತ್ತಮ ದಾರಿಯಲ್ಲಿ ನಡೆಯಲಿ ಎಂದು ತಿಳಿಸಿದರು.


ಸಂಸ್ಥಾಪಕ ಎನ್. ಬಾನುಪ್ರಶಾಂತ್ ಹಿರಿಯ ಪತ್ರಕರ್ತರಾದ ಕೆ.ಜೆ ಮರಿಯಪ್ಪನವರು ತಮ್ಮ ಸುಧೀರ್ಘ ಪತ್ರಕರ್ತ ಜೀವನದ ಮೂಲಕ ಸಮಾಜದ ಮುಖವಾಣಿಯಂತೆ ಕೆಲಸ ಮಾಡುತ್ತಿದ್ದು.ಅವರ ಸೇವೆ ಗುರ್ತಿಸಿ,ಬೆಂಗಳೂರು ಪ್ರಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿರುವುದು.ಅತ್ಯಂತ ಹರ್ಷ ಉಂಟುಮಾಡಿದ್ದು.ಅವರ ವೃತ್ತಿ ಜೀವನ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಾಗರಾಜು.ಸಂಘದ ಸದಸ್ಯರಾದ ಬ್ಯಾಂಕ್ ಕುಮಾರಸ್ವಾಮಿ.ಸದಣ್ಣ ಹಳೇಪಾಳ್ಯ.ಚಿನ್ನಬೆಳ್ಳಿ ಸ್ವಾಮಿ.ಪತ್ರಕರ್ತ ಡಿ.ಕುಮಾರ್ ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version