KALPATHARU KRANTHI

ಜನವರಿ 11ರಂದು ಕೆ.ರಾಜಶೇಖರ್ (ರಾಜು ಬೈಯಾ)ರವರ 15ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ಶಿಭಿರ

Spread the love

ತಿಪಟೂರು:ಜಿಲ್ಲಾಪಂಚಾಯ್ತಿ ಮಾಜಿ ಸದಸ್ಯರು ಹಾಗೂ ಶಾಸಕ ಕೆ.ಷಡಕ್ಷರಿಯವರ ಸೋದರ ಕೆ.ರಾಜಶೇಖರ್ (ರಾಜು ಬೈಯಾ)ರವರ 15 ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನ ಜನವರಿ 11ರಂದು ಭಾನುವಾರ ಆಯೋಜನೆ ಮಾಡಲಾಗಿದೆ.


ನಗರದ ಎನ್.ಆರ್.ಶೆಲ್ಟರ್ ನಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿ ಉದೇಶಿಸಿ ಮಾತನಾಡಿದ ರಾಜುಬೈಯಾ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಆರ್ ಸಂಗಮೇಶ್ ಮಾತನಾಡಿ ಜನಾನುರಾಗಿ ಜನನಾಯಕ ಜಿಲ್ಲಾಪಂಚಾಯ್ತಿ ಮಾಜಿ ಸದಸ್ಯ ಕೆ.ರಾಜಶೇಖರ್ ರವರು ಜನಸೇವೆಗಾಗಿ ತಮ್ಮ ಜೀವನ ಸವೆಸಿದ್ದಾರೆ. ಅವರ ಜನಸೇವೆ ಹಾಗೂ ಆದರ್ಶಗಳನ್ನ ಉಳಿಸುವ ದೃಷ್ಠಿಯಿಂದ ಪ್ರತಿವರ್ಷ ಪುಣ್ಯಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ಶಿಭಿರ ಹಾಗೂ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬಂದಿದ್ದು 15ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಜನವರಿ 11ರಂದು ಉಚಿತ ಆರೋಗ್ಯ ಶಿಭಿರ ಆಯೋಜನೆ ಮಾಡಲಾಗಿದೆ.ನುರಿತ ತಜ್ಞರಿಂದ ಹೃದಯಪರೀಕ್ಷೆ,ಮಧುಮೇಹ,ಇಸಿಜಿ.ಹರ್ಣಿಯ ಪೆಂಡಿಕ್ಸ್ ಪರೀಕ್ಷೆ.ಮಕ್ಕಳ ಆರೋಗ್ಯಪರೀಕ್ಷೆ.ಕೀಲು ಮತ್ತು ಮೂಳೆ ಪರೀಕ್ಷೆ.ಶ್ವಾಶಕೋಶ.ಎದೆ ರೋಗ ಪರೀಕ್ಷೆ ಕಿಡ್ನಿ,ಪ್ರೋಟೆಟ್ ಮೂತ್ರಚಿಕಿತ್ಸೆ.ನೇತ್ರತಪಾಸಣೆ,ಸ್ತ್ರೀರೋಗ ಗರ್ಭಕೋಶಪರೀಕ್ಷೆ.ಚರ್ಮರೋಗ ಪರೀಕ್ಷೆ ಶಿಭಿರ ಆಯೋಜನೆ ಮಾಡಲಾಗಿದ್ದು ಸಾರ್ವಜನಿಕರು ಶಿಭಿರದ ಸದುಪಯೋಗಪಡೆಯಬೇಕು ಎಂದು ತಿಳಿಸಿದರು.


ರಾಜುಬೈಯಾ ಅಭಿಮಾನಿ ಬಳಗದ ಉಪಾಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಮಾತನಾಡಿ ರಾಜು ಬೈಯಾ ರವರು ಜನರ ಕಷ್ಟ ಸುಖಗಳಿಗಾಗಿಯೇ ಬದುಕಿದ ಧೀಮಂತ ವ್ಯಕ್ತಿ,ಹಗಲಿರುಳು ಬಡವರು ದೀನದಲಿತರು,ನೊಂದವರಿಗಾಗಿಯೇ ಶ್ರಮಿಸಿದ್ದಾರೆ.ತಾವು ಅಧಿಕಾರದಲ್ಲಿ ಇಲ್ಲವಾದರೂ ಕೆ.ಷಡಕ್ಷರಿಯವರ ಮಾರ್ಗದರ್ಶನದಲ್ಲಿ ನೊಂದವರ ಪರವಾಗಿ ಕೆಲಸಮಾಡಿ ಅಪಾರಸಂಖ್ಯೆಯ ಅಭಿಮಾನಿಗಳು ಹಾಗೂ ಸ್ನೇಹಿತರನ್ನ ಸಂಪಾದಿಸಿದ್ದಾರೆ. ಅವರು ಮಾಡಿರುವ ಸಮಾಜಸೇವೆ ಮುಂದುವರೆಸುವ ದೃಷ್ಠಿಯಿಂದ ರಾಜುಬೈಯಾ ಅಭಿಮಾನಿಗಳು ಪ್ರತಿವರ್ಷ ಪುಣ್ಯಸ್ಮರಣೆಯ ದಿನ ಸಮಾಜಮುಖಿ ಕಾರ್ಯಗಳು.ಆರೋಗ್ಯಸೇವೆಗಳನ್ನ ನಡೆಸುತ್ತಾ ಬಂದಿದ್ದು.15ನೇ ಪುಣ್ಯಸ್ಮರಣೆ ಅಂಗವಾಗಿ ಜನವರಿ 11ರಂದು ಕಲ್ಲೇಗೌಡನಪಾಳ್ಯದ ರಾಜುಬೈಯಾ ಸಮಾಧಿಗೆ ಪೂಜೆಸಲ್ಲಿಸಿ,ನಂತರ ನಗರದ ಈಡೇನಹಳ್ಳಿ ಗೇಟ್ ಬಳಿ ಇರುವ ಎಸ್.ಎನ್.ಎಸ್ ಕನ್ವೆನ್ಷನ್ ಹಾಲ್ ನಲ್ಲಿ ಉಚಿತ ಆರೋಗ್ಯ ಶಿಭಿರ ಆಯೋಜನೆ ಮಾಡಲಾಗಿದ್ದು.ಪಕ್ಷಾತೀತವಾಗಿ ಅಭಿಮಾನಿಗಳು.ಆಗಮಿಸಿ ಶಿಭಿರದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.


ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಕುಂದೂರು ಮಂಜುನಾಥ್.ಮಾಜಿ ಎಪಿಎಂಸಿ ನಿರ್ದೇಶಕ ಮಲ್ಲೇನಹಳ್ಳಿ ಕಾಂತಾರಜು.ಸಮೀಉಲ್ಲಾ.ಟಿ.ಎಪಿಎಂಸಿ ನಿರ್ದೇಶಕ ಶಂಕರಮೂರ್ತಿ.ಲೋಕನಾಥ್ ಸಿಂಗ್‌,ತಿಲಕ್ ಕುಮಾರ್.ತಾ.ಪಂ ಮಾಜಿ ಉಪಾಧ್ಯಕ್ಷ ಶಂಕರಣ್ಣ.ಲೋಕನಾಥ್ ಸಿಂಗ್.ಯುವ ಕಾಂಗ್ರೇಸ್ ಅಧ್ಯಕ್ಷ ಯತೀದ್ರ‌.ಪ್ರಕಾಶ್.ನಟರಾಜ್‌ ಮುಂತ್ತಾದವರು ಉಪಸ್ಥಿತರಿದರು..

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version