ತಿಪಟೂರು: ತಾಲೂಕಿನ ಶಾಂತಿ ಸಮೃದ್ದಿ, ಸುಭೀಕ್ಷತೆಗಾಗಿ ಪ್ರಾರ್ಥಿಸಿ ಕೆ.ಪಿ ಸಿಸಿ ಸದಸ್ಯ ವಿ.ಯೋಗೇಶ್ ಕುಟುಂಬ ದೇವತಾ ಕಾರ್ಯ ನೆರವೇರಿಸಿದರು.

ತಾಲೂಕಿನ ಅಯ್ಯನಬಾವಿ ಬಳಿ ಇರುವ ಬೊಮ್ಮಲಾಪುರ ರಸ್ತೆ ತೋಟದ ಮನೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ದಿ.ಟಿ.ವೀರಯ್ಯ ನವರ ಸ್ಮರಣಾರ್ಥ ನಡೆದ ವಿಶೇಷ ಪೂಜೆ,ಹಾಗೂ ಉತ್ಸವದಲ್ಲಿ ತಿಪಟೂರು, ಅರಸೀಕೆರೆ, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕಿನ ಶಕ್ತಿ ದೇವರುಗಳ ಆಗಮನದೊಂದಿಗೆ ವಿಶೇಷ ಪೂಜೆ. ದೇವರುಗಳ ಉತ್ಸವ ಹಾಗೂ ದೇವತಾ ಕಾರ್ಯಕ್ರಮದಲ್ಲಿ ನೆರವೇರಿಸಿದರು. ಮಾತನಾಡಿದ ಅವರು, ಸುಮಾರು ಆರು ವರ್ಷದಿಂದ ಇಂತಹ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು, ಒಂದೇ ಕಡೆ ಸುಮಾರು 65 ಹೆಚ್ಚು ಗ್ರಾಮಗಳ ಶಕ್ತಿ ದೇವರಗಳನ್ನು ಒಂದೇ ವೇದಿಕೆಯಡಿ ಕರೆತಂದು, ಎಲ್ಲ ಗ್ರಾಮಸ್ಥರ ಸ್ನೇಹ ಸಮ್ಮಿಲನದೊಂದಿಗೆ ಇಂತಹ ದೇವತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು .ತಾಲ್ಲೋಕಿ.ಶಾಂತಿ ಸಮೃದ್ದಿ,ನೆಲೆಸಲಿ ರೈತರ ಬದುಕು ಹಸನಾಗಲಿ,ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ದೇವತಾ ಕಾರ್ಯಕ್ರಮದ ಹಿಂದಿನ ದಿನ ಎಲ್ಲಾ ದೇವರುಗಳಿಗೆ ಮಣೆವು ಕಾರ್ಯಕ್ರಮ ಮತ್ತು ಉತ್ಸವ ಹಮ್ಮಿಕೊಂಡಿದ್ದು ಮಾರನೇ ದಿನ ಸಾವಿರಾರು ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಾಸಕ ಕೆ.ಷಡಕ್ಷರಿ ಮತ್ತುಲೋಕೇಶ್ ವೀರಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಶುಭಹಾರೈಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ