KALPATHARU KRANTHI

ಜಲಜೀವನ್ ಮಿಷಿನ್ ಯೋಜನೆ ಅಡಿ 4ಕೋಟಿ ವೆಚ್ಚದ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಶಾಸಕ ಕೆ.ಷಡಕ್ಷರಿ ಗುದ್ದಲಿ ಪೂಜೆ.

Spread the love

ತಿಪಟೂರು:ತಾಲ್ಲೋಕಿನ ಅರಳಗುಪ್ಪೆ,ಬಜಗೂರು ಗಂಗನಘಟ್ಟ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿ ಕುಡಿಯುವ ನೀರು ಪೂರೈಕೆ ಮಾಡುವ 4ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಕೆ.ಷಡಕ್ಷರಿ ಗುದ್ದಲಿಪೂಜೆ ನೆರವೇರಿಸಿದರು.
ಗಂಗನಘಟ್ಟ ಗ್ರಾಮದಲ್ಲಿ ಆಯೋಜಿಸಿದ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ತಾಲ್ಲೋಕಿನಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ವೇಗವಾಗಿ ನಡೆಯುತ್ತಿದು.ಏಪ್ರಿಲ್ ವೇಳೆಗೆ ಬಹುತೇಕ ಕಾಮಗಾರಿ ಪೂರ್ಣಗೊಳ್ಳಲ್ಲಿದು,ಮನೆಮನೆಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು, ನಾವು ಬಳಸುವ ನೀರಿಗೆ ಸರ್ಕಾರ ನಿಗಧಿಗೊಳಿಸುವ ಶುಲ್ಕ ಪಾವತಿ ಮಾಡಿ ನೀರು ಪೂರೈಕೆ ಮಾಡಿಕೊಳ್ಳ ಬೇಕು ಎಂದ ಅವರು ಗಂಗನಘಟ್ಟ ಗ್ರಾಮದಲ್ಲಿ ಅನೇಕ ಹಿರಿಯ ಹಾಗೂ ಕಿರಿಯ ಮುಖಂಡರು ನಮಗಾಗಿ ಕೆಲಸ ಮಾಡಿದ್ದಾರೆ ,ಅವರ ಆಶಯಗಳಿಗೆ ತಕ್ಕಂತೆ ಗ್ರಾಮದ ಅಭಿವೃದ್ದಿಗೆ ಬೇಕಾದ ಕೆಲಸ ಕಾರ್ಯಗಳನ್ನ ಮಾಡಿಕೊಟ್ಟಿದ್ದೇನೆ.ಗ್ರಾಮಕ್ಕೆ ಹೆಚ್ಚಿನ ಅಗತ್ಯವಿರುವ ಕೆಲಸ ಮಾಡಿಕೊಡಲಾಗುವುದು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ತಾಲ್ಲೋಕು ಪಂಚಾಯ್ತಿ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ. ಸುರೇಶ್ .ಮಾಜಿ ತಾ.ಪಂ ಅಧ್ಯಕ್ಷ ಶಿವಸ್ವಾಮಿ. ಗುತ್ತಿಗೆದಾರರಾದ ಹೇಮಂತ್ ಕುಮಾರ್.ಗೋವಿಂದಪ್ಪ.ಶೇಖರಪ್ಪ .ಅರಳಗುಪ್ಪೆ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಜ್ಯೋತಿ ತಿಮ್ಮಯ್ಯ.ತ್ರಿವೇಣಿ.ನೇತ್ರಾನಂದ‌್ ರುದ್ರೇಶ್ ,ಶಂಕರಮೂರ್ತಿ.ಜಿಪಂ ಎಇಇ ನಾಗೇಂದ್ರ ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ.

Exit mobile version