KALPATHARU KRANTHI

ವೈಭವವಾಗಿ ಜರುಗಿದ ಶ್ರೀ ಕರಿಯಮ್ಮ ದೇವಿ ರಥೋತ್ಸವ.

Spread the love

ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹೆಚ್.ಬೈರಾಪುರ ಗ್ರಾಮದ ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ಪ್ಲೇಗಿನಮ್ಮ ದೇವಿ ಜಾತ್ರೆ ಅಂಗವಾಗಿ ದಿವ್ಯ ರಥೋತ್ಸವ ಮಧ್ಯಾಹ್ನ ಅಪಾರ ಭಕ್ತರ ಹರ್ಷೋದ್ಗಾರ ಮತ್ತು ಇಷ್ಟಾರ್ಥ ಸಿದ್ಧಿಸಲೆಂದು ಭಕ್ತಾದಿಗಳು ರಥಕ್ಕೆ ಬಾಳೆಹಣ್ಣು ಎಸೆಯುವುದರ ಮತ್ತು ರಥದ ಗಾಲಿಗೆ (ಚಕ್ರಕ್ಕೆ) ಶ್ರೀ ಧೂತರಾಯ ಸ್ವಾಮಿ ತೆಂಗಿನಕಾಯಿ ಇಡುಗಾಯಿ ಹಾಕುವುದರ ಮೂಲಕ ವೈಭವವಾಗಿ ಜರುಗಿತು.

ರಥೋತ್ಸವದ ಅಂಗವಾಗಿ ಬೆಳಿಗ್ಗೆ ರಥಕ್ಕೆ ವಿಶೇಷ ಪೂಜೆ ನೆರವೇರಿಸಿ,ರಥವನ್ನು ವಿವಿಧ ಹೂವು,ಹಾರ ಮತ್ತು ಬಣ್ಣ ಬಣ್ಣದ ಬಾವುಟದಿಂದ ಅಲಂಕರಿಸಲಾಗಿತ್ತು. ದೇವಾಲಯದಲ್ಲಿ ಶ್ರೀ ದೇವರುಗಳಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಮಧ್ಯಾಹ್ನ ವೇಳೆಗೆ ಪುಷ್ಪಾಲಂಕೃತಗೊಂಡ ಶ್ರೀ ಕರಿಯಮ್ಮ ಮತ್ತು ಶ್ರೀ ಪ್ಲೇಗಿನಮ್ಮ ದೇವಿಯನ್ನು ಜಾನಪದ ಕಲಾತಂಡಗಳ ಮೆರವಣಿಗೆಯ ಮೂಲಕ ಸಿದ್ದಗೊಂಡಿದ್ದ ರಥೋತ್ಸವದಲ್ಲಿ ಕುಳ್ಳಿರಿಸಿ, ಸಾವಿರಾರು ಭಕ್ತರ ಹರ್ಷದ್ಗಾರದೊಂದಿಗೆ ತೇರನ್ನು ಎಳೆದರು.

ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಶ್ರೀ ದೇವರುಗಳಿಗೆ ಉಯ್ಯಾಲೋತ್ಸವ, ಭಂಡಾರ ಸೇವೆ, ಸಂಜೆ ಸಿಡಿ ಉತ್ಸವ ನಂತರ ಶ್ರೀ ಧೂತರಾಯ ಸ್ವಾಮಿಯವರ ಅದ್ದೂರಿ ಮಣೇವುನೊಂದಿಗೆ ಸುಮಾರು 5 ದಿನದಿಂದ ನಡೆಯುತ್ತಿದ್ದ ಜಾತ್ರೆಗೆ ತೆರೆ ಬಿದ್ದಿತ್ತು.

Exit mobile version