KALPATHARU KRANTHI

ಅದ್ದೂರಿಯಾಗಿ ಜರುಗಿದ ಶ್ರೀ ಕೆಂಪಮ್ಮ ಮತ್ತು ಶ್ರೀ ಕೆಂಚರಾಯ ಸ್ವಾಮಿಯ ಜಾತ್ರಾ ಮಹೋತ್ಸವ

Spread the love

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಸುಂಕಾಪುರ ಗ್ರಾಮದ ಶ್ರೀ ಆದಿಶಕ್ತಿ ಕೆಂಪಮ್ಮ ದೇವಿ ಮತ್ತು ಶ್ರೀ ಕೆಂಚರಾಯ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು ಮೂರು ದಿನಗಳ ಕಾಲ ನಡೆಯುವ ಸದರಿ ಜಾತ್ರೆಯು ಮೊದಲ ದಿನದಲ್ಲಿ ಮುತ್ತೈದೆರಿಂದ ಮಹಾ ಮಂಗಳಾರತಿ ಅಮ್ಮನವರಿಗೆ ಮಡಿ ಮಾಡಲಾಗುತ್ತದೆ ಎರಡನೆಯ ದಿನ ಅಮ್ಮನವರಿಗೆ ಆರತಿ, ಅಗ್ನಿಕೊಂಡ ಶ್ರೀ ಕೆಂಚರಾಯ ಸ್ವಾಮಿಯ ಅದ್ದೂರಿ ಉತ್ಸವ ಇರುತ್ತದೆ ಮೂರನೇ ದಿನವಾಗಿ ದಿಂಡುರುಳು ಸೇವೆ ಹಾಗೂ ಶ್ರೀ ಕೆಂಚರಾಯಸ್ವಾಮಿ ಮತ್ತು ಶ್ರೀ ಕೆಂಪಮ್ಮ ದೇವರುಗಳ ಉತ್ಸವ ನಡೆಯುತ್ತದೆ.

ಸದರಿ ಜಾತ್ರಾ ಮಹೋತ್ಸವವನ್ನು ಉದ್ದೇಶಿಸಿ ಮಾರುಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ಕಲಾವತಿ ತಿಮ್ಮಯ್ಯ ಮಾತನಾಡಿ ನಮ್ಮ ಗ್ರಾಮದಲ್ಲಿ ಹಿಂದಿನಿಂದಲೂ ಶ್ರೀ ಕೆಂಪಮ್ಮ ಮತ್ತು ಶ್ರೀ ಕೆಂಚರಾಯ ಸ್ವಾಮಿಯ ಆರಾಧನೆ ಮಾಡುತ್ತಿದ್ದಾರೆ ಅಂತೆಯೇ ನಾವುಗಳು ಈ ದೇವರುಗಳ ಕೃಪೆಗೆ ಪಾತ್ರರಾಗುತ್ತಿದ್ದೇವೆ. ಸದರಿ ಜಾತ್ರಾ ಮಹೋತ್ಸವಕ್ಕೆ ಗ್ರಾಮದ ಭಕ್ತಾದಿಗಳು ಸೇರಿದಂತೆ ಜಿಲ್ಲೆಯಾದ್ಯಂತ ಸಾವಿರಾರು ಭಕ್ತಾದಿಗಳು ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಾರೆ ಮೂರು ದಿನಗಳ ಕಾಲ ನಿರಂತರವಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸದರಿ ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು, ಗುಡಿ ಗೌಡರು ಹಾಗೂ ಸಹಸ್ರಾರು ಭಕ್ತಾದಿಗಳು ಆಗಮಿಸಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

Exit mobile version