ತಿಪಟೂರು: ಟೀ ಅಂಗಡಿ ಪ್ರಾರಂಭಿಸುವ ಸಡಗರದಲ್ಲಿ ಅಂಗಡಿಯಲ್ಲಿ ವಿದ್ಯುತ್ ಬಲ್ಬ್ ಹಾಕಲು ಹೋಗಿ ವಿದ್ಯುತ್ ಶಾಕ್ ಗೆ ಬಲಿಯಾಗಿರುವ ಘಟನೆ ತಿಪಟೂರು ನಗರದ ದೊಡ್ಡಯ್ಯನಪಾಳ್ಯದಲ್ಲಿ ನಡೆದಿದೆ,
ತಿಪಟೂರು ನಗರದ ದೊಡ್ಡಯ್ಯನಪಾಳ್ಯ ನಿವಾಸಿ ಸುರೇಶ್ 42 ವರ್ಷ ಮೃತ ದುರ್ದೈವಿ.
ತಿಪಟೂರು ನಗರದ ದೊಡ್ಡಯ್ಯನಪಾಳ್ಯ ನಿವಾಸಿ ತಮ್ಮ ಮನೆ ಮುಂಭಾಗದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟು ಟೀ ಅಂಗಡಿ ಪ್ರರಂಬಿಸಲು ಸಿದ್ದತೆ ನಡೆಸಿದರು,ಎಲ್ಲಾ ಅಂದುಕೊಂಡಂತೆ ಆಗಿದರೆ ಇಂದು ಬೆಳಗ್ಗೆ ನೂತನವಾಗಿ ಟೀ ಅಂಗಡಿ ಆರಂಬಿಸಿ,ವ್ಯವಹಾರ ಆರಂಭಿಸ ಬೇಕಿತ್ತು, ಆದರೇ ವಿದಿಯಾಟವೇ ಬೇರೆಯಾಗಿದೆ,ಟೀ ಅಂಗಡಿ ಆರಂಭಕ್ಕೆ ಸಿದ್ದತೆನಡೆಸುತ್ತಿದ್ದ ಸುರೇಶ್ ರಾತ್ರಿ ಅಂಗಡಿಗೆ ಬಲ್ಬ್ ಹಾಕಲು ಹೋದಾಗ ವಿದ್ಯುತ್ ಶಾಕ್ ಗೆ ಒಳಗಾಗಿದ್ದು,ಸಾವನ್ನಪ್ಪಿದ್ದಾರೆ,ತಿಪಟೂರು ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಿ :ಮಂಜುನಾಥ್ ಹಾಲ್ಕುರಿಕೆ
