
ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿಯ ತಾಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪುರ ಗ್ರಾಮದ ಎಸ್ ಸಿ ಕಾಲೋನಿಯ ಚರಂಡಿ ಅವ್ಯವಸ್ಥೆಯಿಂದ ಕೂಡಿದ್ದು ಪ್ರತಿನಿತ್ಯ ದುರ್ವಾಸನೆ ಎದುರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಅಲ್ಲದೆ ಸಂಬಂಧ ಪಟ್ಟ ಗ್ರಾಮ ಪಂಚಾಯತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಕೈಕಟ್ಟಿ ಕುಳಿತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿ ಮಾಡಿದೆ.
ಗ್ರಾಮಸ್ಥರೊಬ್ಬರು ಮಾತನಾಡಿ ಚರಂಡಿಯನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡದಿರುವ ಪರಿಣಾಮ ಚರಂಡಿಯಲ್ಲಿ ಕೊಚ್ಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ ಈ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಬದಲಾಗಿ ಎಸಿ ಕಾಲೋನಿ ಎಂದು ಮೂಲೆಗುಂಪು ಮಾಡಲಾಗುತ್ತಿದೆ ಈ ಸಮಸ್ಯೆಯನ್ನು ವರುಷಗಳಿಂದ ಎದುರಿಸುತ್ತಿದ್ದೇವೆ ಆಸ್ಪತ್ರೆಗೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ ಅಲ್ಲದೆ ಗ್ರಾಮ ಪಂಚಾಯತಿಯ ಸದಸ್ಯರಿಗೆ ಈ ಮನವಿ ಮಾಡಿದಾಗ ನಮ್ಮ ಸ್ವಂತ ಹಣದಿಂದ ಸ್ವಚ್ಛ ಮಾಡಲಾಗುತ್ತದೆಯೇ ಎಂದು ಉಡಾಫೆಯಾಗಿ ಮಾತನಾಡುತ್ತಾರೆ
ನಮ್ಮ ಸಮಸ್ಯೆ ಇದುವರೆಗೂ ಬಗೆಹರಿದಿಲ್ಲ ಎಲ್ಲರೂ ಕೂಡ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ್ತೋರ್ವ ಗ್ರಾಮಸ್ಥ ಮಾತನಾಡಿ ಚರಂಡಿ ಅವ್ಯವಸ್ಥೆಯ ಕುರಿತು ಸಂಬಂಧ ಪಟ್ಟ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದಾಗ ನಮ್ಮ ಮನೆ ಜಮೀನು ಮಾರಿ ಚರಂಡಿ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಬೇಜವಾಬ್ದಾರಿ ಇಂದ ಮಾತನಾಡುತ್ತಾರೆ ಚಿಕನ್ ಗುನ್ಯಾ ಮಲೇರಿಯಾ ಅಂತಹ ರೋಗಗಳಿಗೆ ತುತ್ತಾಗಿ ನಮ್ಮ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತ್ತೋರ್ವ ಗ್ರಾಮದ ಮಹಿಳೆಯೊಬ್ಬರು ಮಾತನಾಡಿ ನಮ್ಮ ಚರಂಡಿ ಸ್ವಚ್ಛತೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಿಳಿಸಿದಾಗ ಆಶ್ವಾಸನೆ ನೀಡುತ್ತಾರೆ ಆದರೆ ಯಾವುದೇ ಕ್ರಮವನ್ನು ಇದುವರೆಗೂ ಕೈಗೊಂಡಿಲ್ಲ ಅಲ್ಲದೆ ಮಳೆಗಾಲದಲ್ಲಿ ಚರಂಡಿ ವ್ಯವಸಿತವಾಗಿ ಇಲ್ಲದೆ ಮನೆಯ ಒಳಗೆ ನೀರು ನುಗ್ಗುತ್ತದೆ ಸ್ವಚ್ಛತೆ ಇಲ್ಲದೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ತುರ್ತಾಗಿ ನಮ್ಮ ಗ್ರಾಮದ ಚರಂಡಿಯನ್ನು ಸ್ವಚ್ಛಗೊಳಿಸಬೇಕು ಇಲ್ಲವಾದಲ್ಲಿ ಪ್ರತಿನಿತ್ಯ ನಾವು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಮುಂದಿನ ದಿನಗಳಲ್ಲಿ ಸೂಕ್ತ ಬಾಕ್ಸ್ ಚರಂಡಿ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಆಗ್ರಹಿಸಿದರು.
ವರದಿ: ಸಂತೋಷ್ ಓಬಳ. ಗುಬ್ಬಿ