ತಿಪಟೂರು:ಬೆಂಗಳೂರು ನಗರದಲ್ಲಿ ಸಂವಿಧಾನ ಶಿಲ್ಪಿ ಡಾ// ಬಿ.ಆರ್. ಅಂಬೇಡ್ಕರ್ ಮ್ಯೂಸಿಯಂ ಹಾಗೂ ದೇಶದಲ್ಲೇ ಎತ್ತರವಾದ ಅಂಬೇ ಡ್ಕರ್ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಘೋಷಿಸಿರುವುದರಿಂದ ಸ್ವಾಗತರ್ಹ ಅನುಭವ ಮಂಟಪದ ಚಿಂತನೆ ಹಾಗೂ ಮೌಲ್ಯಗಳನ್ನ ಒಳಗೊಂಡ ಸಂವಿಧಾನಿಕ ಚಿಂತನೆಗೆ ನಿಜವಾದ ಶಕ್ತಿ ಈ ಮೂಲಕ ಸಿಕ್ಕಂತಾಗುತ್ತದೆ ಎಂದು ಕಂಚಾಘಟ್ಟ ಶ್ರೀ ಷಡಕ್ಷರ ಮಠದ ಶ್ರೀ ಶ್ರೀ ರುದ್ರಮುನಿ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಮೈಸೂರು ವಿಶ್ವವಿದ್ಯಾ ಲಯದಲ್ಲಿ ಸಂವಿಧಾನ ಪೀಠ ಸ್ಥಾಪನೆ ಮಾಡುವುದು ಹಾಗೂ
ಆಂಧ್ರದ ವಿಜಯವಾಡದಲ್ಲಿ ದೇಶ ಹಾಗೂ ವಿಶ್ವದ ಅತಿ ದೊಡ್ಡ ಅಂಬೇಡ್ಕರ್ ಪ್ರತಿಮೆಯಾಗಿದ್ದು
ಆ ಪ್ರತಿಮೆ ಒಟ್ಟು ಎತ್ತರ 206 ಅಡಿಯಾಗಿದ್ದು ಈಗ ಕರ್ನಾಟಕದಲ್ಲಿ ಇದಕ್ಕಿಂತ ಹೆಚ್ಚು ಎತ್ತರದ ಪ್ರತಿಮೆ ನಿರ್ಮಾಣ ಸ್ವಾಗತರ್ಹ, ಸಂವಿಧಾನವು ಅನುಭವ ಮಂಟದ ಶಿವಶರಣರ ಚಿಂತನೆಗಳ ಸಾರವನ್ನ ಒಳಗೊಂಡಿದ್ದು ಸಮಸಮಾಜದ ನಿರ್ಮಾಣ ಹಾಗೂ ಸರ್ವರಿಗೂ ಶಾಂತಿ ಸಮಾನತೆ ಬಯಸುವ ಆಶಯಹೊಂದಿದೆ, ಡಾ//ಅಂಬೇಡ್ಕರ್ ಚಿಂತನೆಗಳು ಬಸವಣ್ಣನವರ ಕಾಯಕ ನಿಷ್ಠೆ,ಸಮಾನತೆ,ಮಹಿಳಾಸ್ವಾತಂತ್ರ್ಯ ಹಾಗೂ ಸರ್ವರ ಹಿತಚಿಂತನೆ ಒಳಗೊಂಡಿರುವ ಕಾರಣ,ಸರ್ಕಾರದ ಚಿಂತನೆಗೆ ನಾವು ಅಭಿನಂದನೆಸಲ್ಲಿಸುತ್ತೇವೆ ಎಂದು ತಿಳಿಸಿದರು
ಕರ್ನಾಟಕ ಭೀಮಸೇನೆ ತಾಲೂಕು ಅಧ್ಯಕ್ಷ ಮಂಜುನಾಥ್ ಆಂಜಿನಪ್ಪ ಮಾತನಾಡಿ • ಆಂಧ್ರದ ಮಾದರಿಯಲ್ಲೇ ಬೆಂಗಳೂರಲ್ಲಿ ಅಂಬೇಡ್ಕರ್ ಮ್ಯೂಸಿಯಂ ನಿರ್ಮಾಣಕ್ಕೆ ಪಣ ತೊಟ್ಟಿರುವ ಮುಖ್ಯಮಂತ್ರಿ ಗಳಿಗೆ ಅಭಿನಂದನೆಗಳು. ಈ ಕಾರ್ಯದಲ್ಲಿ ರಾಜ್ಯಾದ್ಯಂತ ಕರ್ನಾಟಕ ಭೀಮಸೇನಿಯು ಪ್ರತಿ ಜಿಲ್ಲಾವಾರು ಜಿಲ್ಲಾಧಿಕಾರಿಗಳಿಗೆ ರಾಜ್ಯದಲ್ಲಿ ಅತ್ಯಂತ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಈಗಾಗಲೇ ಹೋರಾಟ ನಡೆಸಿದ ಫಲವಾಗಿ ಮುಖ್ಯಮಂತ್ರಿಗಳು ಡಾ// ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದಂದೆ ಘೋಷಣೆ ಮಾಡಿರುವುದು ಖುಷಿಯ ವಿಚಾರವೆಂದು ಇದೇ ವೇಳೆ ಅವರು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಕರ್ನಾಟಕ ಭೀಮಸೇನೆಯ ಗೌರವಾಧ್ಯಕ್ಷ ರೇಣುಕ್ ಮೂರ್ತಿ.
ಕಾರ್ಯದರ್ಶಿ ಮೋಹನ್ ಕುಮಾರ್. ಡಾ ಪುನೀತ್ ರಾಜಕುಮಾರ್ ಜನಸೇವಾ ಟ್ರಸ್ಟ್ ಅಧ್ಯಕ್ಷ ಎಸ್ ಜಗದೀಶ್ ಕರ್ನಾಟಕ ಭೀಮಸೇನೆಯ ಬಾಲಾಜಿ ಸುಮಂತ್ ಮೊದಲಾದವರು ಹಾಜರಿದ್ದರು
