ದೇಶದ ಅಮೂಲಾಗ್ರ ಬದಲಾವಣೆಗೆ ಡಾ//ಬಿ.ಆರ್ ಅಂಬೇಡ್ಕರ್ ಸಂವಿಧಾನವೇ ದಿವ್ಯಾಔಷಧವಾಗಿದ್ದು ವಿಶ್ವಶ್ರೇಷ್ಠ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವುದು ಅವಿವೇಕದ ಮಾತು, ಮೂರ್ಖತನದ ಪರಮಾವಧಿ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ನಗರಸಭೆ ಅವರಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ//ಬಾಬೂ ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತದ ಸಂವಿಧಾನವೂ ವಿಶ್ವಶ್ರೇಷ್ಠ ಸಂವಿಧಾನವಾಗಿದ್ದು,ಡಾ//ಬಿ.ಆರ್ ಅಂಬೇಡ್ಕರ್ ರವರು ತಮ್ಮ ಜೀವನ ಪೂರ್ತಿ ಅಧ್ಯಯನದ ಮೂಲಕ ಸರ್ವಶ್ರೇಷ್ಠ ಕಾನೂನುಗಳನ್ನ ನೀಡಿದ್ದಾರೆ,ಜಾತಿಗ್ರಸ್ಥ ವ್ಯವಸ್ಥೆಯಲ್ಲಿ ದೇಶದ ಸಮಗ್ರ ಬದಲಾವಣೆಗೆ ಸಂವಿಧಾನವೇ ದಿವ್ಯಾಔಷದವಾಗಿದ್ದು, ಕೆಲವು ಕಿಡಿಗೇಡಿಗಳು ಸಂವಿಧಾನ ಬದಲಾವಣೆ ಮಾತನಾಡುತ್ತಾರೆ,ಇದು ಅವಿವೇಕದ ಪರಮಾವಧಿ, ಭಾರತದ ಸಾಮಾಜಿಕ ಸಮಸ್ಯೆಗಳಿರುವ ದೇಶದಲ್ಲಿ ಸಂವಿಧಾನ ಸಮರ್ಪಕವಾಗಿ ಕೆಲಸ ಮಾಡುತ್ತಿದೆ,ಪ್ರತಿಯೊಬ್ಬರು ಸಂವಿಧಾನದ ಮೌಲ್ಯಗಳನ್ನ ಅಳವಡಿಸಿಕೊಂಡು,ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಬೇಕು ಆಗಮಾತ್ರ,ಡಾ//ಬಿ.ಆರ್ ಅಂಬೇಡ್ಕರ್ ಹಾಗೂ ಡಾ//ಬಾಬೂ ಜಗಜೀವನ್ ರಾಮ್ ರಂತ ಮಹಾಚೇತನಗಳಿಗೆ ನಿಜವಾದ ಗೌರವ ಸಲ್ಲಿಸಿದಂತೆ.
ಜನಪ್ರತಿನಿಧಿಗಳು ಸಂವಿಧಾನಿಕ ಮೌಲ್ಯಗಳನ್ನ ಎತ್ತಿಹಿಡಿಯುವಂತೆ ಇರಬೇಕು ಆದರೆ ಕಳೆದ ವಿಧಾನ ಸಭೆಯಲ್ಲಿ ನಡೆದ ಘಟನೆ ತೀರ ನಾಚಿಕೆಗೇಡಿನ ವರ್ತನೆಯಾಗಿದ್ದು,ಶ್ರೇಷ್ಠ ಮಹಾನೀಯರು ನೀಡಿರುವ ಕಾನೂನಿನ ಅಡಿಯಲ್ಲಿ ಕೆಲಸ ಮಾಡುತ್ತಿರುವ ನಾವು ಇದೇನಾ ಅವರಿಗೆ ಕೊಡುತ್ತಿರುವ ಗೌರವ ಎನ್ನುವಷ್ಟು ಬೇಜಾರು, ಆಗಿದೆ.ಸಾಮಾಜಿಕ ಜವಾಬ್ದಾರಿ ಹೊತ್ತನಾವು ಬೇರೆಯವರಿಗೆ ಪ್ರೇರಣೆಯಾಗುವಂತ್ತೆ ಬದುಕಬೇಕು, ಇನ್ನೊಬ್ಬರು ನಮ್ಮ ಬಗ್ಗೆ ಹಗುರವಾಗಿ ಮಾತನಾಡುವಂತೆ ಇರಬಾರದು, ಎಂದ ಅವರು ನಮ್ಮಲ್ಲಿ ಈ ಹಿಂದೆ ಇದ್ದ ಜಾತಿಗ್ರಸ್ಥ ವ್ಯವಸ್ಥೆ ಹಂತಹಂತವಾಗಿ ಬದಲಾಗುತ್ತಿದ್ದೆ, ಸಮಾಜದಲ್ಲಿ ಬದಲಾವಣೆಗೆ ಮನುಷ್ಯನ ಮಾನಸಿಕ ಸ್ಥಿತಿಬದಲಾಗಬೇಕು,ಯಾರು ಇಂತಹ ಜಾತಿಯಲ್ಲಿಯೇ ಹುಟ್ಟಬೇಕು ಎಂದು ಅರ್ಜಿಹಾಕಿಕೊಂಡು ಹುಟ್ಟುವುದಿಲ್ಲ,ನಾವು ನಡವಳಿಗೆ ಸಂಸ್ಕಾರದಿಂದ ಗೌರವಗಳಿಸಬೇಕೆ ಹೊರತು ಜಾತಿಯಿಂದಲ್ಲ.ಎಲ್ಲರನ್ನು ಸಮಾನವಾಗಿ ಕಾಣುವ ಉದಾತ್ತ ಗುಣಬೆಳಸಿಕೊಳ್ಳಬೇಕು, ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಉಪಸ್ಥಿತರಿದ ಖ್ಯಾತಸಾಹಿತಿ ಡಾ//ವಡ್ಡಗೆರೆ ನಾಗರಾಜಯ್ಯ ಮಾತನಾಡಿ ಭಾರತದ ಸಂವಿಧಾನಕ್ಕೆ ವಿಶ್ವದ ಬೆಳಕು ಗೌತಮಬುದ್ದ ಹಾಗೂ ಬಸವಣ್ಣನವರ ಚಿಂತನೆಗಳೇ ಸ್ಪೂರ್ತಿ,ಡಾ//ಅಂಬೇಡ್ಕರ್ ರವರು ವಿಶ್ವದ ಹಲವಾರು ಸಂವಿಧಾನಗಳನ್ನ ಅಧ್ಯಯನ ಮಾಡಿ ನಮ್ಮ ದೇಶದ ಸಾಮಾಜಿಕ ವ್ಯವಸ್ಥೆಗೆ ಸರಿಯೊಂದುವ ಸಂವಿಧಾನ ನೀಡಿದ್ದಾರೆ,ವಿಶ್ವಗುರು ಬಸವಣ್ಣನವರು ತಮ್ಮ ಅನುಭವಮಂಟಪದ ಮೂಲಕ ಸರ್ವರನ್ನ ಸಮನಾಗಿ ಕಂಡ ಅನುಭವ ಮಂಟಪದ ಮಾದರಿಯೇ ನಾವು ಕಾಣುತ್ತಿರುವ ಸಂಸತ್,ಗೌತಮ ಬುದ್ದ ಬಸವಣ್ಣನವರ ಸ್ಪೂರ್ತಿಯೆ ನಮ್ಮ ಸಂವಿಧಾನ,ವಿಶ್ವಗುರು ಬಸವಣ್ಣನವರ ಬಗ್ಗೆ ಅಧ್ಯಯನ ಮಾಡಿರುವ ಡಾ//ಅಂಬೇಡ್ಕರ್ ಹೇಳಿರುವಂತೆ ಬಸವಣ್ಣ ಶ್ರೇಷ್ಠ ಸಮಾಜ ಸುಧಾರಕ ಸಮಾನತಾವಾದಿ,ಇಂತಹ ಶ್ರೇಷ್ಠ ಶರಣನನ್ನ ವೀರಶೈವ ಲಿಂಗಾಯಿತರು ವೈದಿಕ ಕಟ್ಟುಪಾಡಿನಲ್ಲಿ ಕಟ್ಟಿಹಾಕಿದ್ದಾರೆ,ಬುದ್ದ ಬಸವಣ್ಣ ಅಂಬೇಡ್ಕರ್ ಚಿಂತನೆಗಳಿಲ್ಲದೆ,ಸಾಮಾಜಿಕ ಚಾಲನೆ ಸಾಧ್ಯವಿಲ್ಲ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್ ಮಾತನಾಡಿ ಭಾರತದ ಸಾಮಾಜಿಕತೆ ಆರ್ಥಿಕತೆ ಸೇರಿದಂತೆ ನವಭಾರತ ನಿರ್ಮಾಣಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ, ಶಿಕ್ಷಣದಿಂದ ಬದಲಾವಣೆ ಸಾಧ್ಯ ಎಂದು ನಂಬಿದವರು ಅವರ ಆದರ್ಶಮಯ ಜೀವನ ವಿಶ್ವಕ್ಕೆ ಬೆಳಕು, ಅವರ ಚಿಂತನೆಗಳನ್ನ ಅಳವಡಿಕೊಳೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ,ಇಒ ಸುದರ್ಶನ್,ತಹಸೀಲ್ದಾರ್ ಪವನ್ ಕುಮಾರ್,ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ,ದಲಿತ ಮುಖಂಡರಾದ ಪೆದ್ದಿಹಳ್ಳಿ ನರಸಿಂಹಯ್ಯ.ಕುಪ್ಪಾಳು ರಂಗಸ್ವಾಮಿ ಕೊಪ್ಪ ಶಾಂತಪ್ಪ ಬಜಗೂರು ಮಂಜುನಾಥ್ ಸೇರಿದಂತೆ ಅನೇಕರು ಉಪನ್ಯಾಸ ನೀಡಿದರು ಸಾಹಿತಿ ಕಂಟಲಗೆರೆ ಗುರುಪ್ರಸಾದ್ ಡಾ//ಬಾಬೂ ಜಗಜೀವನ್ ರಾಮ್ ಕುರಿತು ಉಪನ್ಯಾಸ ನೀಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನ ಸನ್ಮಾನಿಸಲಾಯಿತು.