KALPATHARU KRANTHI

ರಸ್ತೆ ಬದಿ ಆಲದ ಮರಕ್ಕೆ ಬೆಂಕಿಹಚ್ಚಿದ ಕಿಡಿಗೇಡಿಗಳು, ವಾಹನ ಸವಾರರ ಜೀವಕ್ಕೆ ಕಂಟಕವಾಗುತ್ತಿರುವ ಬೆಂಕಿಹೊತ್ತಿಕೊಂಡಿರುವ ಮರ.

20250411_092223
Spread the love

ತಿಪಟೂರು:ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ತಿಪಟೂರು -ಹಾಲ್ಕುರಿಕೆ ರಸ್ತೆಯ ಮಣಕಿಕೆರೆ ಗೇಟ್ ಬಳಿ ಕೆಲದಿನಗಳ ಹಿಂದೆ ರಸ್ತೆ ಬದಿ ಮರವೊಂದರ ಕೊಂಬೆ ಮುರಿದು ಬಿದ್ದಿದ್ದು, ಇದನ್ನ ನೆಪವಾಗಿಸಿಕೊಂಡ ,ಮರಕುಯ್ಯುವವರು , ಜೀವಂತ ಮರ ಕೊಂಬೆಗಳನ್ನೆಲ್ಲ ಕಡಿದು ಹಾಕಿದ ಪರಿಣಾಮ ಇಡೀ ಮರವೇ ಬೋಳಾಗಿದೆ, ಇದನ್ನೆ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ಸುಮಾರು 20ಅಡಿ ಎತ್ತರದ ಮರದ ಬುಡಕ್ಕೆ ಬೆಕ್ಕಿಹಚ್ಚಿದ್ದಾರೆ

ಬೆಂಕಿಯ ಕೆನ್ನಾಲಿಗೆ ಇಡೀ ಮರದ ಬುಡವನ್ನೇ ದಹಿಸುತ್ತಿದ್ದು, ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಸಂಚಾಕಾರ ತಂದೊಂಡಿದೆ,ಬೆಂಕಿಯಿಂದ ಬೆಂದು ಹುರಿದು ಬಿದ್ದರೆ, ರಸ್ತೆಗೆ ಬೀಳುತ್ತದೆ ಇದರಿಂದ ವಾಹನ ಸವಾರರು, ದಾರಿಹೋಕರು ಪ್ರಾಣಾಪಾಯ ಎದುರಿಸುವ ಅಪಾಯವಿದೆ ಅರಣ್ಯ ಇಲಾಖೆ, ಅಥವಾ ಪಿಡಬ್ಲ್ಯಡಿ ಇಲಾಖೆ ತುರ್ತಾಗಿ ಸಂಭವನೀಯ ಅವಘತ ತಪ್ಪಿಸಬೇಕಿದೆ ಅಲ್ಲದೆ ಜೀವಂತ ಮರಕ್ಕೆ ಬೆಂಕಿಹಚ್ಚಿರುವ ಕಿಡಿಗೇಡಿಗಳನ್ನ ಪತ್ತೆಹಚ್ಚಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version