KALPATHARU KRANTHI

ಒಳಮೀಸಲು ಜಾತಿ ಗಣತಿವೇಳೆ ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದಿಸಲು ದಲಿತ ಮುಖಂಡರ ಮನವಿ

IMG-20250410-WA0057(1)
Spread the love

ತಿಪಟೂರು :ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಒಳಮೀಸಲು ವರದಿ ನೀಡುವ ಕುರಿತು ಪರಿಶಿಷ್ಟ ಜಾತಿದತ್ತಾಂಶ ಸಂಗ್ರಹಕ್ಕಾಗಿ ಜಾತಿ ಸಮೀಕ್ಷ ನಡೆಸುತ್ತಿದ್ದು,ರಾಜ್ಯದಾದ್ಯಂತ ನಡೆಯುವ ಜಾತಿಗಣತಿ ವೇಳೆ ಗಣತಿದಾರರು ನಿಮ್ಮ ಬಳಿ ಬಂದಾಗ ಉಪಜಾತಿ ಕಲಂ ನಲ್ಲಿ ಪ್ರತಿಯೊಬ್ಬ ಮಾದಿಗ ಬಂಧುಗಳು ಸಹ ಮಾದಿಗ ಎಂಬುದಾಗಿ ನಮೂದಿಸಬೇಕು.ಇದರಿಂದ ಸರ್ಕಾರಕ್ಕೆ ನಿಖರವಾದ ಜಾತಿ ಅಂಕಿ ಸಂಖ್ಯೆಯ ದತ್ತಾಂಶದೊರೆಯಲಿದೆ ಎಂದು ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ ತಿಳಿಸಿದರು
ನಗರದ ಪ್ರವಾಸಿ ಮಂದಿರದಲ್ಲಿ ಪರಿಶಿಷ್ಟಜಾತಿ ಮಾದಿಗ ಸಂಘಟನೆಗಳ ಸಭೆ ನಡೆಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿ ಶೋಷಿತ ಸಮುದಾಯಗಳಿಗೆ ಸಂವಿಧಾನದ ಆಶಯದಂತೆ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಹಾಗೂ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ, ಮೀಸಲಾತಿ ಸೌಲಭ್ಯ ಕೆಲವೇ ಕೆಲಸ ಸ್ಪೃಷ್ಯ ಪರಿಶಿಷ್ಟ ಜಾತಿಗಳ ಪಾಲಾಗುತ್ತಿದ್ದೆ,ಎಂದು ಕಳೆದ ಮೂರು ದಶಕಗಳಿಂದ ದಲಿತಪರ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿವೆ, ನಮ್ಮ ನ್ಯಾಯಯುತ ಹೋರಾಟಕ್ಕೆ ಬೆಂಬಲವಾಗಿ ಘನ ಸುಪ್ರೀಂ ಕೋರ್ಟ್ ಒಳಮೀಸಲಾತಿ ಅಗತ್ಯಕುರಿತು ನಿರ್ದೇಶನ ನೀಡಿದ್ದು,ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯಸರ್ಕಾರ ಒಳಮೀಸಲಾತಿ ಜಾರಿ ಮಾಡಲು. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚನೆ ಮಾಡಿದ್ದು, ಆಯೋಗವೂ ಸಹ ಪರಿಶಿಷ್ಟ ಜಾತಿಗಳ ನಿಖರ ಅಂಕಿಅಂಶ ಸಂಗ್ರಹಿಸುವ ಉದೇಶದಿಂದ ಜಾತಿಗಣತಿಗೆ ಮುಂದಾಗಿದೆ, ತಿಪಟೂರು ತಾಲ್ಲೋಕಿನ ಮಾದಿಗ ಬಂಧುಗಳು ಗಣತಿದಾರರು ನಿಮ್ಮ ಮನೆಬಳಿ ಬಂದಾಗ ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದಿಸುವ ಮೂಲಕ,ಜನಸಂಖ್ಯೆಯ ಸರಿಯಾದ ಮಾಹಿತಿ ಸಂಗ್ರಹಿಸಲು ಸಹಕರಿಸಿ, ಅಲ್ಲದೇ ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದು ಮಾಡುವುದರಿಂದ ಸರ್ಕಾರದ ಸೌಲಭ್ಯಗಳನ್ನ ಪಡೆಯಲು ಸಾಧ್ಯವಾಗುತ್ತದೆ,ನಗರ ಪ್ರದೇಶದಲ್ಲಿ ವಾಸಮಾಡುವ ಮಾದಿಗ ಬಂಧುಗಳು ಕೀಳಿರಿಮೆ ಬಿಟ್ಟು ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದಿಸಿ, ನೀವು ಜಾತಿಗಣತಿ ವೇಳೆ ಸರಿಯಾದ ಮಾಹಿತಿ ನೀಡದೆ,ಗಣತಿಮುಗಿದ ನಂತರ ಸರಿಪಡಿಸಲು ಸಾಧ್ಯವಿಲ್ಲ ಇದರಿಂದ ಮುಂದಿನ ನಿಮ್ಮ ಪೀಳಿಗೆಗೆ ನೀವೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು
ಸಭೆಯಲ್ಲಿ ಉಪಸ್ಥಿತರಿದ ಡಿಎಸ್ ಎಸ್ ಮುಖಂಡ ಟಿ.ಕೆ ಕುಮಾರ್ ಮಾತನಾಡಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಸೌಲಭ್ಯ ಕಲ್ಪಿಸಲು.ಜಾತಿಪದ ಬಳಕೆಯಲ್ಲಿ ಹಲವಾರುಗೊಂದಲಗಳಿವೆ ಮಾದಿಗ ಸಂಬಂದಿತ ಜಾತಿಗಳುಮಾದಿಗರೆ ಆದಿಕರ್ನಾಕ ಆದಿದ್ರಾವಿಡ ಆದಿ ಆಂದ್ರ .ಹರಿಜನ. ಆದಿಜಾಂಬವ ,ಸೇರಿದಂತೆ ಹಲವಾರು ಹೆಸರುಗಳನ್ನ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಹೆಸರುಗಳು ಇರುವ ಕಾರಣ ಪರಿಶಿಷ್ಟ ಜಾತಿಯಲ್ಲಿಯೇ ಮಾದಿಗರು ಅತಿಹೆಚ್ಚು ಸಂಖ್ಯೆಯಲ್ಲಿ ಇದ್ದರೂ ಸಹ,ಕೆಲವ್ಯಕ್ತಿಗಳು ಗೊಂದಲ ಸೃಷ್ಠಿಮಾಡಿ,ಸರ್ಕಾರದ ದಿಕ್ಕುತಪ್ಪಿಸುವ ಕೆಲಸಗಳಾಗಿವೆ ಆದರಿಂದ ಮಾದಿಗ ಸಮುದಾಯ ಎಚ್ಚರಿಕೆಯಿಂದ ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದು ಮಾಡಬೇಕು,ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ ಜಾತಿಕೀಳಿರಿಮೆಯಿಂದ ಉಪಜಾತಿ ಕಲಂ ನಲ್ಲಿ ತಪ್ಪು ಮಾಹಿತಿ ನೀಡಿ,ನಿಮ್ಮ ಭವಿಷ್ಯದ ಪೀಳಿಗೆಗೆ ಅನ್ಯಾಯ ಮಾಡಬೇಕು ನಿಮಗಾಗಿ ಒದಗಿಬಂದಿರುವ ಸದಾವಕಾಶ ಬಳಸಿಕೊಳ್ಳಿ ಎಂದು ತಿಳಿಸಿದರು.
ಸಭೆಯಲ್ಲಿ ಮುಖಂಡರಾದ ಕುಪ್ಪಾಳು ರಂಗಸ್ವಾಮಿ.ಹರೀಶ್ ಗೌಡ,ಪೆದ್ದಿಹಳ್ಳಿ ನರಸಿಂಹಯ್ಯ,ಶಿವಕುಮಾರ್ ಮತ್ತಿಘಟ್ಟ ರಾಘವೇಂದ್ರ ಯಗಚೀಕಟ್ಟೆ,ಕಲ್ಲೇಶ್ ಶೆಟ್ಟಿಹಳ್ಳಿ ಗಾಂಧಿನಗರ ಬಸವರಾಜು,ರಮೇಶ್ ಮಾರನಗೆರೆ,ಮಂಜುನಾಥ್ ಗುರುಗದಹಳ್ಳಿ,ಲಕ್ಕಿಹಳ್ಳಿ ತಿಮ್ಮಯ್ಯ,ಲೋಕೇಶ್ ಉಮೇಶ್ ,ಗೌಡನಕಟ್ಟೆ ಬಸವರಾಜು,ಸೇರಿದಂತೆ ಅನೇಕರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version