ತಿಪಟೂರು: ತಾಲ್ಲೋಕಿನ ಕಸಬಾ ಹೋಬಳಿ ಕೋಟೆನಾಯ್ಕನಹಳ್ಳಿ ಎಸ್ ಆರ್ ಎಸ್ ಕ್ರೋಮ್ ಪಿಯು ಕಾಲೇಜ್ ವಿದ್ಯಾರ್ಥಿನಿ ಸಿ.ಕೆ ಲಕ್ಷ್ಮಿ ರಾಜ್ಯಕ್ಕೆ ಹತ್ತನೇ ರ್ಯಾಂಕ್ ಪಡೆಯುವ ಮೂಲಕ ತಿಪಟೂರು ತಾಲ್ಲೋಕಿಗೆ ಕೀರ್ತಿ ತಂದಿದ್ದಾರೆ,ಎಸ್ಆರ್ ಎಸ್ ಕ್ರೋಮ್ ಪಿಯು ಕಾಲೇಜು ಶೇಕಡ 100ರಷ್ಟು ಸಾಧನೆ ಮಾಡಿದೆ.
ಕೋಟೆನಾಯ್ಕನಹಳ್ಳಿ ಎಸ್ ಆರ್ ಎಸ್ ಕ್ರೋಮ್ ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಶ್ರಿಷಡಕ್ಷರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ರುದ್ರಮುನಿಮಹಾಸ್ವಾಮೀಜಿ ನಮ್ಮ ಎಸ್ ಆರ್ ಎಸ್ ಕ್ರೋಮ್ ಪಿಯು ಕಾಲೇಜು ಫಲಿತಾಂಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ದಾಯಕವಾಗಿದೆ,ನಮ್ಮ ಕೋಟೆನಾಯ್ಕನಹಳ್ಳಿ ನಮ್ಮ ಮಠದ ಆವರಣದಲ್ಲಿ ಗುರುಕುಲ ಮಾದರಿ ಸಂಸ್ಕಾರಯುತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು,ಗ್ರಾಮೀಣ ಮಕ್ಕಳಿಗೆ ಅನುಕೂಲವಾಗ ಬೇಕು, ನಗರಭಾಗದಲ್ಲಿ ದೊರೆಯುವ ಹೈಟೆಕ್ ಶಿಕ್ಷಣ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ದೊರೆಯಬೇಕು ಎನ್ನುವ ದೃಷ್ಠಿಯಿಂದ ನುರಿತ ಬೋದಕ ವರ್ಗ ಸತತವಾಗಿ ಉತ್ತಮ ಗುಣಮಟ್ಟದ ತರಬೇತಿ ನೀಡುತ್ತಿದ್ದು, ಹಾಸ್ಟೆಲ್ ಹಾಗೂ ಕಾಲೇಜು ಒಂದೇ ಕಡೆ ಇರುವಂತಹ ಕೆಲವೇ ಶಾಲೆಗಳಲ್ಲಿ ನಮ್ಮ ಎಸ್ಆರ್ ಎಸ್ ಕ್ರೋಮ್ ಕಾಲೇಜು ಸಹ ಒಂದು,ನಮ್ಮ ಕಾಲೇಜಿನಲ್ಲಿ ಪಿಸಿಎಂಬಿ,ಪಿಸಿಎಂಸಿ ನೀಟ್ ,ಜೆಇಇ,ಕೆಸಿಇಟಿ ,ಗೆ ಅನುಕೂಲವಾಗುವಂತೆ ತರಬೇತಿ ನೀಡಲಾಗುತ್ತಿದೆ,
ನುರಿತ ಶಿಕ್ಷಕರು ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಷ್ಟಿತ ಕಾಲೇಜುಗಳಲ್ಲಿ ಸೇವೆ ಮಾಡಿರುವಂತಹ ಶಿಕ್ಷಕರೇ ಸೇರಿ ಕಾಲೇಜು ನಡೆಸುತ್ತಿದ್ದಾರೆ, 61ಮಕ್ಕಳಿರುವ ಶಾಲೆ ಶೇಕಡ 100ರಷ್ಟು ಫಲಿತಾಂಶ ಪಡೆದು, ಸಿಕೆ ಲಕ್ಷ್ಮಿ ಎನ್ನುವ ವಿದ್ಯಾರ್ಥಿನಿ ರಾಜ್ಯಕ್ಕೆ 10ನೇ ರ್ಯಾಂಕ್ ಪಡೆದಿರುವುದು, ಹೆಮ್ಮೆಯ ವಿಚಾರವಾಗಿದ್ದು ಶ್ರೀಮಠ ಶಿಕ್ಷಣಕ್ಕೆ ಅಗತ್ಯವಾದ ಎಲ್ಲಾ ನೆರವು ನೀಡುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಿ,ವಿದ್ಯಾರ್ಥಿಗಳ ಪೂರೋಭಿವೃದ್ದಿಗೆ ಪ್ರೋತ್ಸಾಹಿಸಲಾಗುತ್ತಿದೆ,ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು,ಹೆಚ್ಚು ಹೆಚ್ಚು ಮಕ್ಕಳು ದಾಖಲಾತಿ ಪಡೆಯುವ ಮೂಲಕ ಸದಾವಕಾಶ ಪಡೆದುಕೊಳ್ಳಬೇಕಾಗಿ ತಿಳಿಸಿದರು.
ಎಸ್ಆರ್ ಎಸ್ ಕ್ರೋಮ್ ಪಿಯು ಕಾಲೇಜು ಪ್ರಾಚಾರ್ಯ ಪ್ರಕಾಶ್ ವೈ,ಸಿ ಮಾತನಾಡಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದ ಶಿಕ್ಷಕರು ಸೇರಿ ಶ್ರೀ ರುದ್ರಮುನಿಮಹಾಸ್ವಾಮೀಜಿಗಳ ಸಹಕಾರ ಕೃಪಾಶೀರ್ವಾದದೊಂದಿಗೆ ಕಾಲೇಜು ಆರಂಭಿಸಿದ್ದು ನಾವೂ ಸಹ ನಗರಪ್ರದೇಶದ ಕಾಲೇಜುಗಳಿಗೆ ಪೈಪೋಟಿ ನೀಡುವಂತ್ತೆ ಗ್ರಾಮೀಣ ಮಕ್ಕಳನ್ನ ತಯಾರುಮಾಡಬೇಕು ಎನ್ನುವ ಉದೇಶದಿಂದ,ಗುಣಮಟ್ಟದ ತರಬೇತಿ ನೀಡುತ್ತಿದ್ದೇವೆ,ನಮ್ಮ ಶ್ರಮಕ್ಕೆ ಫಲವಾಗಿನಮ್ಮ ಕಾಲೇಜು 100ರಷ್ಟು ಫಲಿತಾಂಶ ಪಡೆದಿದ್ದು,ರಾಜ್ಯದಲ್ಲಿಯೇ ಉತ್ತಮ ಫಲಿತಾಂಶಗಳಿಸಿದ ಹೆಮ್ಮೆ ಇದೆ,ನಮ್ಮ ಗ್ರಾಮೀಣ ಭಾಗದ ಮಕ್ಕಳು ಸಹ ಸಿಇಟಿ ನೀಟ್,ಜೆಇಇ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದು ಇಂಜಿನಿಯರಿಂಗ್ ಮೆಡಿಕಲ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಬೇಕು ಐಎಸ್ ಎಸ್ ಕೆಎಎಸ್ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ದೇಶಕ್ಕೆ ರಾಜ್ಯಕ್ಕೇ ಕೀರ್ತಿ ಸಂಪಾದಿಸಲಿ ಎನ್ನುವ ನಿಟ್ಟಿನಲ್ಲಿ ತರಬೇತಿ ನೀಡಲಾಗಿತ್ತಿದೆ, ಎಲ್ಲಾ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣದಲ್ಲಿ ಗುಣಮಟ್ಟದ ತರಬೇತಿ ನೀಡುತ್ತಿದ್ದು, ಶಾಲೆಯಲ್ಲಿ ದೊರೆಯುವ ಸೌಲಭ್ಯಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ಬೆಳಸಿಕೊಳ್ಳ ಬೇಕು ಎಂದರು
ರಾಜ್ಯಕ್ಕೆ 10ನೇ ರ್ಯಾಂಕ್ ಪಡೆದಿರುವ ವಿದ್ಯಾರ್ಥಿನಿ ಸಿ.ಕೆ ಲಕ್ಷ್ಮಿ ಮತನಾಡಿ ನಮ್ಮ ಕಾಲೇಜಿನ ಶಿಕ್ಷಕರ ಹಾಗೂ ಶ್ರೀಮಠದ ಪರಮಪೂಜ್ಯ ಸ್ವಾಮೀಜಿಯವರ ಪ್ರೋತ್ಸಹ ಹಾಗೂ ಬೆಂಬಲ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು, ಗ್ರಾಮೀಣ ಭಾಗದಿಂದ ಬಂದರೂ ನಾನೂ ಐಎಎಸ್ ಮಾಡಬೇಕು ಎನ್ನು ಆಕಾಂಕ್ಷೆ ಹೊಂದಿದ್ದೆ .ನಮ್ಮ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ತರಬೇತಿ ಗುಣಮಟ್ಟದ ಶಿಕ್ಷಣ ನೀಡಿದರ ಪರಿಣಾಮವೇ ಈ ಫಲಿತಾಂಶ ನನ್ನ ಯಶಸ್ಸಿಗೆ ಕಾರಣರಾದ ಬೋಧಕ ಹಾಗೂ ಬೋದಕೇತರ ವೃದ್ದ ಪೋಷಕರು ಹಾಗೂ ಸ್ವಾಮೀಜಿಯವರಿಗೂ ಅಭಿನಂದನೆ ತಿಳಿಸುವುದ್ದಾಗಿ ತಿಳಿಸಿದರು
ಪತ್ರಿಕಾಘೋಷ್ಟಿಯಲ್ಲಿ ಉಪನ್ಯಾಸಕರಾದ ಸ್ವಾಮಿ ಕೆ.ಟಿ ,ದಿಲೀಪ್,ಬಿ.ಸಿ,ಪಾಂಡುರಂಗ ವಿ.ಎಲ್. ಮುಂತ್ತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ
