KALPATHARU KRANTHI

ರಾಮನವಮಿ ಅಂಗವಾಗಿ ತಿಪಟೂರಿನಲ್ಲಿ ರಾಮನಾಮ ಧ್ಯಾನ.ರಾಮಭಕ್ತರಿಂದ ಪಾನಕ ಫಲಹಾರ ಮಜ್ಜಿಗೆ ಕೋಸಂಬರಿ ವಿತರಣೆ

IMG-20250406-WA0062
Spread the love

ತಿಪಟೂರು : ಶ್ರೀರಾಮ ನವಮಿ ಪ್ರಯುಕ್ತ ತಿಪಟೂರಿನ ವಿವಿದೆಡೆ ರಾಮಸ್ಮರಣೆಯ ಸಂಭ್ರಮ ಜೋರಾಗಿತ್ತು ವ್ಯಾಸರಾಜ ಪ್ರತಿಷ್ಠಾಪಿತ ಕೋಟೆ ಶ್ರೀ ಆಂಜನೇಯಸ್ವಾಮಿ, ದೊಡ್ಡಪೇಟೆ ಗಾಣಿಗರ ಶ್ರೀರಾಮದೇವಾಲಯ ಇಂದಿರಾ ನಗರ ಶ್ರೀ ಆಂಜನೇಯಸ್ವಾಮಿ ದೇವಾಲಯ.ಅಣ್ಣಾಪುರ ಶ್ರೀ ಆಂಜನೇಯ ದೇವಾಲಯ ಗಾಯಿತ್ರಿ ನಗರ ಶ್ರೀ ರಾಮಮಂದಿರ ಸೇರಿದಂತೆ ಹೊನ್ನವಳ್ಳಿ ಶ್ರೀ ಆಂಜನೇಯಸ್ವಾಮಿ ಕರೀಕೆರೆ ಬೈರಾಪುರ ಕಂಬದಹಳ್ಳಿ ಹಾಲ್ಕುರಿಕೆ ನೊಣವಿನಕೆರೆ ಕೆ.ಬಿಕ್ರಾಸ್ ಸೇರಿದಂತೆ ತಾಲ್ಲೋಕಿನಾಧ್ಯಂತ ರಾಮಭಕ್ತ ಆಂಜನೇಯನ ದೇವಾಲಯ ಹಾಗೂ ಶ್ರೀರಾಮಮಂದಿರಗಳಲ್ಲಿ ರಾಮಭಕ್ತರು ಅಭಿಷೇಕ,ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಿ,ಪಾನಕ ಫಲಹಾರ,ಮಜ್ಜಿಗೆ ಕೋಸಂಬರಿ ವಿತರಣೆ ಮಾಡಲಾಯಿತು,

ಕೆಲವೆಡೆ ರಾಮಭಜನೆ ನೆರವೇರಿಸಿ ಪೂಜೆಸಲ್ಲಿಸಲಾಯಿತು, ನಗರ ಹೆಬ್ಬಾಗಿಲನ ಮುಂದೆಯಿರುವ ಅರಳೀಕಟ್ಟೆಯ ಬಳಿ ತೆಂಗಿನಗರಿಗಳಿಂದ ಹಸಿರು ಚಪ್ಪರವನ್ನು ಹಾಕಿ ವಿವಿಧ ಬಗೆ ಹೂವುಗಳಿಂದ ಅಲಂಕಾರ ಮಾಡಿ ಸಗಣಿ ಹಾಗೂ ಗೋಮೂತ್ರದಿಂದ ನೆಲವನ್ನು ಶೃಂಗರಿಸಿ ಅರಳೀಕಟ್ಟೆಯ ಮೇಲೆ ಗ್ರಾಮದ ಉತ್ಸವ ಮೂರ್ತಿ ದೇವರುಗಳನ್ನು ಹಾಗೂ ಶ್ರೀಸೀತಾರಾಮ ಅಂಜನೇಯ ಪೋಟೋವಿಟ್ಟು ಪೂಜಿಸಿ ನೆರೆದಿರುವ ಎಲ್ಲಾ ಭಕ್ತರಿಗೆ ಪಾನಕ, ಫಲಾಹಾರ, ಕೋಸಂಬರಿ, ಮಜ್ಜಿಕೆ, ಕಡಲೆಕಾಳು ಉಸಲಿ, ವಿತರಿಸುವ ದೃಶ್ಯಗಳು ಪ್ರತಿ ಹಳ್ಳಿ ಹಳ್ಳಿಯಲ್ಲೂ ಕಂಡು ಬಂದಿತು.
ರಾಮನವಮಿ ವಿಶೇಷವಾದ ರಾಮರಸವನ್ನ ನಗರದ ಕೆಲ ರಾಮದೇವಾಲಯದಲ್ಲಿ ನೈವೇದ್ಯ ಅರ್ಪಿಸಿ ಉತ್ಸವ ಭಜನೆ ಪಾರಾಯಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು.

ನಗರದ ಕೋಟೆಯಲ್ಲಿ ವ್ಯಾಸರಾಜ ಪ್ರತಿಷ್ಟಾಪಿತ ಅಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ.
ನಗರದ ಶ್ರೀರಾಮ ಭಜನಾ,ಅಯೋದ್ಯ ರಾಮಪಾದುಕೆ ಪೂಜೆ ನೆರವೇರಿಸಲಾಯಿತು.ನಗರದಾದ್ಯಂತ ರಾಮಭಕ್ತರು ರಾಮನಾಮದಲ್ಲಿ ಸಂಭ್ರಮಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version