ತಿಪಟೂರು :ತಾಲ್ಲೋಕಿನ ಪ್ರಸಿದ್ದ ಯಾತ್ರೆ ಕ್ಷೇತ್ರ ಹಾಲ್ಕುರಿಕೆ ಗ್ರಾಮದೇವತೆ ಶ್ರೀಕೆಂಪಮ್ಮ ದೇವಿ ಹಾಗೂ ಶ್ರೀ ಪ್ಲೇಗಿನಮ್ಮ ದೇವಿಯವರ ಜಾತ್ರಾಮಹೋತ್ಸವದ ಅಂಗವಾಗಿ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಮಹಾರಥದಲ್ಲಿ ಶ್ರೀ ಕೆಂಪಮ್ಮ ದೇವಿ ಹಾಗೂ ಶ್ರೀ ಪ್ಲೇಗಿನಮ್ಮ ದೇವಿಯವರನ್ನ ಕೂರಿಸಿ ರಥೋತ್ಸವ ನಡೆಸಲಾಯಿತು,ಹರಕೆ ಹೊತ್ತ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಪೂಜೆಸಲ್ಲಿಸಿದರು.
ನಂತರ ಭಕ್ತರ ಮೈ ಜುಮ್ಮೆನಿಸುವಂತ್ತ ಬನ್ನಿಮರಹತ್ತಿಸುವ ಕಾರ್ಯಕ್ರಮದಲ್ಲಿ ದೇವರು ಆವಾಹನೆಗೊಂಡ ಅರ್ಚಕ,ಕಾರ್ಕೋಟಕ ಈಚಲು ಮುಳ್ಳುಗಳಿಂದ ತುಂಬಿದ ಬನ್ನಿಮರ (ಈಚಲಮರ) ಹತ್ತುವ ಮೂಲಕ ಭಕ್ತರನ್ನ ಭಕ್ತಿಯ ಪಾರಕಾಷ್ಟೆಯಲ್ಲಿ ಮಿಂದೇಳುವಂತ್ತೆ ಮಾಡಿತು, ಸುಮಾರು ಅರ್ಧ ಗಂಟೆಗಳ ಕಾಲ ಬನ್ನಿಮರದ ಮುಳ್ಳುಗಳ ನಡುವೆ ಮಲಗಿದ್ದ, ಅರ್ಚಕ ಮರದಿಂದ ಕೆಳಗೆ ಇಳಿಯುತ್ತಿದ್ದಂತೆ ಜಾತ್ರೆಯಲ್ಲಿ ಸೇರಿದ ಭಕ್ತರ ಭಾವಪರವಷೆಯಜಯಘೋಷ ಮುಗಿಲು ಮುಟ್ಟಿತು,
ನಂತರ ಶ್ರೀಕೆಂಪಮ್ಮ ದೇವಿ ಶ್ರೀ ಪ್ಲೇಗಿನಮ್ಮ ದೇವಿ ಶ್ರೀ ಧೂತರಾಯಸ್ವಾಮಿ ಉತ್ಸವ ಧೂಳುಮೆರವಣಿಗೆ ನೆರವೇರಿಸಿ,ಉಯ್ಯಾಲೆ ಉತ್ಸವ ನೆರವೇರಿಸಲಾಯಿತು ರಥೋತ್ಸವದ ಅಂಗವಾಗಿ ಅನ್ನಸಂತರ್ಪಣೆ ನೆರವೇರಿಸಲಾಯಿತು, ಸಾವಿರಾರು ಜನ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಪೂಜೆಸಲ್ಲಿಸಿದರು
ವರದಿ :ಮಂಜುನಾಥ್ ಹಾಲ್ಕುರಿಕೆ