KALPATHARU KRANTHI

ರಾಜ್ಯಸರ್ಕಾರದ ಜನವಿರೋಧಿ ಆಡಳಿತ ಹಾಗೂ ದಲಿತವಿರೋಧಿ ನೀತಿ ಖಂಡಿಸಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

IMG-20250405-WA0099
Spread the love

ಕರ್ನಾಟಕ ರಾಜ್ಯಸರ್ಕಾರದ ಜನವಿರೋಧಿ ಆಡಳಿತ, ಬೆಲೆಏರಿಕೆ, ದಲಿತವಿರೋದಿ ಆಡಳಿತ ಅಲ್ಪಸಂಖ್ಯಾತರ ತುಷ್ಠಿಕರಣ ಖಂಡಿಸಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಿಪಟೂರು ಉಪವಿಭಾಗಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಪತ್ರಸಲ್ಲಿಸಲಾಯಿತು.


ಪ್ರತಿಭಟನಾ ನಿರತರನ್ನ ಉದೇಶಿಸಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ ರಾಜ್ಯಸರ್ಕಾರದ ಜನವಿರೋಧಿ ಆಡಳಿತದಿಂದ ಜನಬೇಸತ್ತಿದ್ದಾರೆ,ಸರ್ಕಾರ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿಹಾಕುತ್ತಿದ್ದಾರೆ,ಅಗತ್ಯವಸ್ತಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು,ಸರ್ಕಾರ ಅರ್ಥಿಕವಾಗಿ ದಿವಾಳಿಯಾಗುತ್ತಿದೆ,ಸರ್ಕಾರಿ ನೌಕರರಿಗೆ ಸಂಬಳ ಕೊಡುವುದು ಕಷ್ಟವಾಗಿದೆ, ತಿಪಟೂರಿನಲ್ಲಿ ಕುಡಿಯುವ ನೀರಿಗೂ ಸಹ ಜನ ಪರದಾಡುವಂತಾಗಿದೆ ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ತಡೆಮಾಡುತ್ತಿದ್ದಾರೆ ತಮ್ಮ ಬೆಂಬಲಿಗರಿಗೆ ಮಾತ್ರ ಕಾಮಗಾರಿ ಮಾಡಲು ಅವಕಾಶ ನೀಡಿದ್ದು, ಕೆಲ ಗುತ್ತಿಗೆದಾರರಿಗೆ ಅನಾಗತ್ಯ ತೊಂದರೆ ನೀಡುತ್ತಿದ್ದಾರೆ, ಈಗ ನಾವು ನಡೆಸುತ್ತಿರುವ ಪ್ರತಿಭಟನೆ ಸಾಂಕೇತಿಕವಾಗಿದ್ದು ಸರ್ಕಾರ ಎಚ್ಚೆತ್ತುಕೊಂಡು ಜನಪರವಾಗಿ ಆಡಳಿತ ನಡೆಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು,

ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಮುಖಂಡ ಗಂಗರಾಜು ಮಾತನಾಡಿ ರಾಜ್ಯ ಸರ್ಕಾರ ಹಿಂದೂ ವಿರೋಧಿಯಾಗಿ ವರ್ತಿಸುತ್ತಿದೆ ದಲಿತರ ಮೀಸಲು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತರಿಗೆ ಅನ್ಯಾಯ ಮಾಡಿದೆ. ದಲಿತಪರ ಹಿಂದುಳಿದ ವರ್ಗಗಳ ಪರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತ ವಿರೋಧಿಯಾಗಿ ವರ್ತಿಸುತ್ತಿದ್ದಾರೆ ಅವರ ನಿಜವಾದ ಮುಖವಾಡ ಕಳಸಿ ಬಿದ್ದಿದೆ ,ಸಂವಿಧಾನ ವಿರೋಧಿಯಾದ ಮೀಸಲಾತಿ ಮೂಲಕ ಮುಸಲ್ಮಾನರಿಗೆ ನಾಲ್ಕು ಪರ್ಸೆಂಟ್ ಗುತ್ತಿಗೆ ಮೀಸಲಾತಿಯನ್ನ ನೀಡುವ ಮೂಲಕ ಅಲ್ಪಸಂಖ್ಯಾತರ ತುಷ್ಟಿಕರಣಕ್ಕೆ ಮುಂದಾಗಿದೆ,ತಾಲ್ಲೋಕಿನಲ್ಲಿ ಅಭಿವೃದ್ದಿ ಶೂನ್ಯವಾಗಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಪ್ರಸನ್ನ ಕುಮಾರ್,ಹಾಲ್ಕುರಿಕೆ ನಾಗರಾಜು,ಸುರೇಶ್ ಬಳ್ಳೆಕಟ್ಟೆ ,ಬಿಸ್ಲೇಹಳ್ಳಿ ಜಗದೀಶ್,ಗುಲಾಬಿ ಸುರೇಶ್,ಶಶಿಕಿರಣ್,ಪದ್ಮತಿಮ್ಮೆಗೌಡ,ಹರಿಸಮುದ್ರ ಗಂಗಾಧರ್,ಆಯರಹಳ್ಳಿ ಶಂಕರಪ್ಪ ,ನಗರಸಭಾ ಸದಸ್ಯ ಮೋಹನ್ ಕುಮಾರ್, ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version