KALPATHARU KRANTHI

ಏಪ್ರಿಲ್ 05ರಂದು ಶ್ರೀಕೆರೆಗೋಡಿ ರಂಗಾಪುರ ಭೂಸುಕ್ಷೇತ್ರಾಧ್ಯಕ್ಷರಾದ ಶ್ರೀಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳ 73ನೇ ಜನ್ಮವರ್ಧಂತಿ ಮಹೋತ್ಸವ

IMG-20250402-WA0031
Spread the love

ತಿಪಟೂರು ತಾಲ್ಲೋಕಿನ ಪವಾಡ ಕ್ಷೇತ್ರ ಕೆರೆಗೋಡಿ ರಂಗಾಪುರ ಭೂ ಸುಕ್ಷೇತ್ರಾಧ್ಯಕ್ಷರಾದ ಶ್ರೀಶ್ರೀ ಗುರುಪರದೇಶೀಕೇಂದ್ರ ಮಹಾಸ್ವಾಮೀಜಿಗಳ 73ನೇ ಜನ್ಮ ವರ್ಧಂತಿ ಮಹೋತ್ಸವವನ್ನ ಶ್ರೀಕ್ಷೇತ್ರ ಕೆರೆಗೋಡಿ ರಂಗಾಪುರ ಶ್ರೀಮಠದ ಆವರಣದಲ್ಲಿ ಅದ್ದೂರಿಯಾಗಿ ಶ್ರೀಮಠದ ಸಂಪ್ರದಾಯದಂತೆ ಹಮ್ಮಿಕೊಳ್ಳಲಾಗಿದೆ ಎಂದು ಯು.ಕೆ ಶಿವಪ್ಪ ತಿಳಿಸಿದರು.


ನಗರದ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ ಪತ್ರಿಕಾಘೋಷ್ಠಿಯಲ್ಲಿ ಹಿರಿಯ ವಿದ್ಯಾರ್ಥಿ ಹಾಗೂ ಶ್ರೀಕ್ಷೇತ್ರಾಭಿಮಾನಿಗಳ ಸಂಘದ ಅಧ್ಯಕ್ಷ ಯು.ಕೆ ಶಿವಪ್ಪ ಮಾತನಾಡಿ ಕೆರೆಗೋಡಿ ರಂಗಾಪುರ ಮಠದ ತ್ರಿವಿಧ ದಾಸೋಹ ಮೂರ್ತಿಗಳು ಹಾಗೂ ಮಾತನಾಡುವ ಶಂಕರ ಎಂದೇ ಖ್ಯಾತನಾಮರಾದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳ 73ನೇ ವರ್ಷದ ಜನ್ಮವರ್ಧಂತಿ ಮಹೋತ್ಸವ ಮಠದ ಪರಂಪರೆ ಹಾಗೂ ಭಕ್ತರ ಅಭಿಲಾಷೆಯಂತೆ ಏಪ್ರಿಲ್ 05ರಂದು ಶನಿವಾರ ಅದ್ದೂರಿಹಾಗೂ ಸಂಪ್ರದಾಯ ಬದ್ದವಾದ ಸಮಾರಂಭ ಆಯೋಜನೆ ಮಾಡಲಾಗಿದೆ. ಶ್ರೀಗಳ ಜನ್ಮವರ್ಧಂತಿ ಮಹೋತ್ಸವದ ಅಂಗವಾಗಿ ಕ್ಷೇತ್ರದೈವಗಳಾದ ಕೆರೆಗೋಡಿ ಶ್ರೀಶಂಕರೇಶ್ವರ ಸ್ವಾಮಿ ಹಾಗೂ ರಂಗಾಪುರ ಶ್ರೀರಂಗನಾಥಸ್ವಾಮಿಯವರಿಗೆ ರುದ್ರಭಿಷೇಕ,ವಿಶೆಷಪೂಜೆ ಏರ್ಪಡಿಸಿದು, ಆರುಜನ ಘನವಂತ ಪವಾಡಪುರುಷ ಶ್ರೀಗಳ ಗದ್ದುಗೆಗೆ ವಿಶೇಷಪೂಜೆ ಹಾಗೂ ಅಲಂಕಾರ,ಶ್ರೀಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳ ಪಾದಪೂಜೆ,ಮಾಡಾಳು ನಿರಂಜನ ಪೀಠಾಧ್ಯಕ್ಷರಾದ ಶ್ರೀರುದ್ರಮುನಿಮಹಾಸ್ವಾಮೀಜಿಗಳು ಹಾಗೂ ಶ್ರೀ ಗೋಡೇಕೆರೆ ಶ್ರೀಶ್ರೀ ಮೃತ್ಯಂಜಯದೇಶಿಕೇಂದ್ರ ಮಹಾಸ್ವಾಮೀಜಿ, ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಶ್ರೀಕ್ಷೇತ್ರಕ್ಕೆ ಬರುವ ಭಕ್ತರಿಗೆ ವಿಶೇಷ ದರ್ಶನಕ್ಕೆ ದೊರೆಯಲಿದೆ,ಕ್ಷೇತ್ರಕ್ಕೆ ಬರುವ ಭಕ್ತರ ಅನುಕೂಲಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಹಾಗೂ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.


ತಿಪಟೂರು ರೋಟರಿ ಕ್ಲಬ್,ಮಹಾಲಕ್ಷ್ಮಿ ಸೆಂಟರ್ ರೋಟರಿ ಕ್ಲಬ್ ಬೆಂಗಳೂರು,ವಿಶ್ವ ನೀಡಂ ರೋಟರಿ ಬೆಂಗಳೂರು ಹಾಗೂ ವೈಭವಿ ಮಲ್ಟಿ ಸ್ವೆಷಲಿಟಿ ಆಸ್ಪತ್ರೆ ತಿಪಟೂರು,ಸಪ್ತಗಿರಿ ಆಸ್ಪೆಟಲ್,ಬೆಂಗಳೂರು ,ತನ್ಮಯಿ ಊಂಡ್ ಕೇರ್ ಕೇರ್ ಕ್ಲೀನಿಕ್ ಬೆಂಗಳೂರು,ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಭಿರ.ಉಚಿತ ನೇತ್ರ ತಪಾಸಣೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಭಿರದ ಸದುಪಯೋಗ ಪಡೆಯಬೇಕು.ಶ್ರೀಗಳು ಶ್ರೀಮಠವನ್ನ ಅಮೂಲಾಗ್ರವಾಗಿ ಅಭಿವೃದ್ದಿ ಪಡಿಸಿದ್ದು,20ಕ್ಕೂ ಹೆಚ್ಚು ಶಾಲಾಕಾಲೇಜು ಸ್ಥಾಪನೆ ಮಾಡಿ,ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾಸೋನ ನೀಡಿದ್ದಾರೆ,ಶ್ರೀಗಳ ಪೀಠಾಧಿಕಾರ ವಹಿಸಿಕೊಂಡು 50ವರ್ಷಗಳು ಪೂರೈಸುತ್ತಿರುವ ಶುಭಸಂದರ್ಭ,ಭಕ್ತರ ಪಾಲಿಗೆ ಸಂಭ್ರಮದ ಕ್ಷಣವಾಗಿದೆ,ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಕ್ಷೇತ್ರದ ಕೃಪೆಗೆ ಪಾತ್ರರಾಗಬೇಕಾಗಿ ಮನವಿ ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಹಿರಿಯ ವಿದ್ಯಾರ್ಥಿ ಹಾಗೂ ಶ್ರೀಕ್ಷೇತ್ರಾಭಿಮಾನಿ ಸಂಘದ ಅಧ್ಯಕ್ಷ ಯು.ಕೆ ಶಿವಪ್ಪ, ಆಡಳಿತಾಧಿಕಾರಿ ಲೋಕೇಶ್ ,ಪ್ರದಾನ ಕಾರ್ಯದರ್ಶಿ ಬಸವರಾಜು,ನಿವೃತ್ತ ಶಿಕ್ಷಕರಾದ ಗಂಗಣ್ಣ, ಐಟಿಐ ಕಾಲೇಜು ಪ್ರಾಚಾರ್ಯ ಶಶಿಧರ್,ಶ್ರೀಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಭರತ್ .ಶಂಕರಪ್ಪ ಮುಂತ್ತಾದವರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version