ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಗೆ ಒಳಪಡುವ ಬಾಡೇನಹಳ್ಳಿ ಗ್ರಾಮದ ತಿಗಳ ಸಮುದಾಯದವರಿಂದ 5ನೇ ವರ್ಷದ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಸದರಿ ಕಾರ್ಯಕ್ರಮದಲ್ಲಿ ತಿಗಳ ಸಮುದಾಯದ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಮುನೇಶ್ ಮಾತನಾಡಿ ನಮ್ಮ ಗ್ರಾಮದಲ್ಲಿ 250 ಜನ ತಾಲೂಕಿನಲ್ಲಿ 20,000 ಜನ ತಿಗಳ ಸಮುದಾಯದರಾದ್ದೇವೆ ಈ ಬಾರಿ 5ನೇ ವರ್ಷದ ಅಗ್ನಿ ಬನ್ನಿರಾಯ ಸ್ವಾಮಿಯ ಜಯಂತಿಯನ್ನು ಆಚರಿಸಿದ್ದು, ನಮ್ಮ ಗ್ರಾಮದಲ್ಲಿ ಪ್ರತಿವರ್ಷವೂ ಸದರಿ ಜಯಂತಿ ಆಚರಿಸಲಾಗುತ್ತದೆ ನಮ್ಮ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸುತ್ತಿದೆ, ಈ ಹಿನ್ನಲೆಯಲ್ಲಿ ಹಿಂದಿನ ಸರ್ಕಾರ ನಮ್ಮ ಸಮುದಾಯಕ್ಕೆ ಕರ್ನಾಟಕ ತಿಗಳ ಅಭಿವೃದ್ಧಿ ನಿಗಮವನ್ನು ನಾಮಕಾವಸ್ಥೆಗೆ ರಚಿಸಲಾಗಿದೆ ಆದರೆ ನಮ್ಮ ಸಮುದಾಯಕ್ಕೆ ಯಾವುದೇ ಸೌಲಭ್ಯ ಇನ್ನೂ ದೊರೆತಿಲ್ಲ ಈಗಿನ ಆಡಳಿತ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಅಲ್ಲದೆ ನಮ್ಮ ಸಮುದಾಯಕ್ಕೆ ಒಂದು ಸಮುದಾಯ ಭವನ ನಿರ್ಮಾಣ ಮಾಡಲು ಹಾಲಿ ಶಾಸಕರಿಗೆ ಮನವಿ ಮಾಡಿದ್ದೇವೆ ಅದನ್ನು ಅನುಷ್ಠಾನಕ್ಕೆ ತರಬೇಕಿದೆ ನಮ್ಮ ಸಮುದಾಯದ ಜನ ಜೀವನ ನಡೆಸಲು ಯಾವುದೇ ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರದಲ್ಲಿ ಹೆಚ್ಚು ಅವಲಂಬಿತವಾಗಿಲ್ಲ ಬದಲಾಗಿ 10 ಕುಂಟೆ ಜಮೀನಿದ್ದರೂ ಅದರಲ್ಲಿ ತರಕಾರಿ ಕೃಷಿ ಮಾಡಿ ಸ್ವಾವಲಂಬಿ ಬದುಕು ನಡೆಸುತ್ತಾ ಬಂದಿದೆ, ನಮ್ಮ ಅಗ್ನಿ ಬನ್ನಿರಾಯ ಸ್ವಾಮಿಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಸಮಾಜವನ್ನು ಕಟ್ಟಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ತಿಗಳ ಸಮುದಾಯದ ಶ್ರೀ ಲಕ್ಷ್ಮಯ್ಯ ಶ್ರೀ ರೇವಣಸಿದ್ದಯ್ಯನವರು, ಕುಲ ಯಜಮಾನರಾದ ಶ್ರೀ ಯರೇಗೌಡ ಮುದ್ರೆಯವರಾದ ಶ್ರೀ ನಟರಾಜು ದೇವಸ್ಥಾನದ ಅರ್ಚಕರಾದ ಶ್ರೀ ಶ್ರೀನಿವಾಸ್ ದೇವಸ್ಥಾನದ ಕನ್ವಿನಿಯರ್ ಮತ್ತು ವಕೀಲರಾದ ಶ್ರೀ ಶಾಂತಕುಮಾರ್ ಉಪಸಿತರಿದ್ದರು. ತಿಗಳ ಸಮುದಾಯದ ಮುಖಂಡರು, ಹಿರಿಯರು, ಗ್ರಾಮಸ್ಥರು ಸದರಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.
ವರದಿ: ಸಂತೋಷ್ ಓಬಳ. ಗುಬ್ಬಿ