KALPATHARU KRANTHI

ತಿಪಟೂರು ನಗರಸಭೆಯಲ್ಲಿ 1.92ಕೋಟಿ ಉಳಿತಾಯ ಬಜೆಟ್ ಮಂಡನೆ. 2025-26 ನೇ ಸಾಲಿನ ಅಂದಾಜು ಆಯ ವ್ಯಯ ಮಂಡಿಸಿದ ನಗರಸಭಾ ಅಧ್ಯಕ್ಷೆ ಯಮುನಾ ಧರಣೇಶ್

IMG-20250326-WA0057
Spread the love

.
ತಿಪಟೂರು ನಗರಸಭೆ 2025-26ನೇ ಸಾಲಿನ ಆಯ ವ್ಯಯವನ್ನ ತಿಪಟೂರು ಶಾಸಕ ಕೆ.ಷಡಕ್ಷರಿಯವರ ಸಮ್ಮುಖದಲ್ಲಿ ಅಧ್ಯಕ್ಷೆ ಯಮುನಾ ಧರಣೇಶ್ ಮಂಡಿಸಿದರು.
ಬಜೆಟ್ ಬಂದಿಸಿದ ಅಧ್ಯಕ್ಷರು ಮಾತನಾಡಿ2025 -2026 ನೇ ಸಾಲಿನ ಬಜೆಟ್ ತುಂಬ ಹರ್ಷ ಉಂಟುಮಾಡಿದೆ,ಸಮಗ್ರ ನಗರದ ಪಕ್ಷಿನೋಟದಂತ್ತಿರುವ ಬಜೆಟ್ ಸಭೆಯಲ್ಲಿ ಅನುಮೋದನೆ ಮಾಡಿದು,ಶಾಸಕರ ಮಾರ್ಗದರ್ಶನ ,ಸಹಕಾರ ಹಾಗೂ ಎಲ್ಲಾ ಸದಸ್ಯರ ನೆರವಿನೊಂದಿಗೆ ನಗರದ ಅಭಿವೃದ್ದಿ ಒತ್ತುನೀಡುವುದ್ದಾಗಿ ತಿಳಿಸಿದರು.

ಬಜೆಟ್ ಸಭೆಯಲ್ಲಿ ಉಪಸ್ಥಿತರಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ನಗರಸಭಾ ಸದಸ್ಯರ ಕೊನೆಯ ಬಜೆಟ್‌ಯಾಗಿದ್ದು, ಉತ್ತಮವಾದ ಉಳಿತಾಯದ ಬಜೆಟ್ ಮಂಡನೆಯಾಗಿದ್ದು, ಹೆಚ್ಚು ಉಳಿತಾಯ ಮಾಡುವುದು ಅಭಿವೃದ್ದಿ ದೃಷ್ಟಿಯಿಂದ ಒಳ್ಳೆಯದಲ್ಲ ಆದರೂ ಸಹ ಆಶಾದಾಯಕ ಬಜೆಟ್ ಆಗಿದೆ. ನಾವುಗಳು ತಾಲ್ಲೂಕಿನ ಜನತೆಗೆ ದಿನದ 24 ಗಂಟೆಯೂ ಸಹ ಶುದ್ದ ಕುಡಿಯುವ ನೀರನ್ನು ಒದಗಿಸುವ ಕೆಲಸ ಪ್ರಮುಖವಾಗಿದ್ದು, ಈಗಾಗಲೇ ಕುಡಿಯುವ ನೀರಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಮೂವರು ಮಂತ್ರಿಗಳ ಹಾಗೂ ಜಿಲ್ಲಾಧಿಕಾರಿಗಳ ಸಮ್ಮಖದಲ್ಲಿ ಸಭೆಯನ್ನು ಮಾಡಲಾಗಿದೆ. ನೊಣವಿನಕೆರೆಗೆ ಈಗಾಗಲೇ ಅಚ್ಚುಕಟ್ಟು ಪ್ರದೇಶದ ಬೆಳೆ ಬೆಳೆಯಲು ನೀರನ್ನು ಒದಗಿಸಲಾಗಿದ್ದು, ಅದರಂತೆ ಕುಡಿಯುವ ನೀರಿಗೂ ಅದ್ಯತೆ ನೀಡಲಾಗಿದ್ದು, ಹೆಚ್ಚುವರಿ ನೀರನ್ನು ಬಿಡುಗಡೆಗೆ ಅನುಮೋದನೆಯಾಗಿದೆ ಎಂದರು. ಖಾಸಗಿ ಬಸ್ ನಿಲ್ದಾಣದಲ್ಲಿ ಕಾಂಪ್ಲೇಕ್ಸ್ ನಿರ್ಮಾಣ, ಸುವ್ಯವಸ್ಥಿತವಾದ ಪುಡ್ ಕೋರ್ಟ್ ನಿರ್ಮಾಣಕ್ಕೆ ಅಧ್ಯತೆ ನೀಡಲಾಗುವುದು ಎಂದರು.
ತಿಪಟೂರು ನಗರಸಭೆ 2025-2026ನೇ ಸಾಲಿನ ಬಜೆಟ್ ನಲ್ಲಿ ಧೋಬಿಘಾಟ್‌ನ ಅಭಿವೃದ್ದಿಗೆ 20 ಲಕ್ಷ, ಬಸ್ ತಂಗುದಾಣ ಅಭಿವೃದ್ದಿ 50 ಲಕ್ಷ, ಜಾಹೀರಾತು ಫಲಕಗಳಿಗೆ 10ಲಕ್ಷ, ನಗರ ವ್ಯಾಪ್ತಿಯ ನಾಯಿ ಹಾವಳಿಯನ್ನು ತಪ್ಪಿಸಲು ಎಬಿಸಿ ಶಸ್ತçಚಿಕಿತ್ಸೆಗಾಗಿ 30 ಲಕ್ಷ, ನಗರಸಭಾ ಸದಸ್ಯರ ಅಧ್ಯಯನ ಪ್ರವಾಸಕ್ಕೆ 10 ಲಕ್ಷ, ಸಾರ್ವಜನಿಕ ಶೌಚಾಲಯಕ ನಿರ್ಮಾಣಕ್ಕೆ 50 ಲಕ್ಷ, ಬೀದಿ ದೀಪ, ವಿದ್ಯುತ್ ಕಂಬ, ಹೈಮಾಸ್ಕ್ ಉನ್ನತೀಕರಣಕ್ಕೆ 50 ಲಕ್ಷ, ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ 50 ಲಕ್ಷ, ಒಣತ್ಯಾಜ್ಯ ನಿರ್ವಹಣೆಗಾಗಿ ಮೆಟೀರಿಯಲ್ ರಿಕವರಿ ಫೆಸಲಿಟಿ ಸ್ಥಾಪನೆಗೆ 83 ಲಕ್ಷ, ನಗರದ ಸೌಂದರ್ಯೀಕರಣ ಹಾಗೂ ಹಸಿರೀಕರಣಕ್ಕಾಗಿ 100 ಲಕ್ಷ, ರಾಜಕಾಲುವೆಗಳ ಒತ್ತುವರಿ ತೆರವಿಗೆ 10 ಲಕ್ಷ, ಮೀಸಲಿಡಲಾಗಿದೆ.

ಬಜೆಟ್ ಕುರಿತು ಚರ್ಚೆ ವೇಳೆ ಮಾತನಾಡಿದ ನಗರಸಭಾ ಸದಸ್ಯ ರಾಮ್ ಮೋಹನ್ ನಗರದ ಹೃದಯ ಭಾಗದಲ್ಲಿ ಕಾಸಾಯಿಖಾನೆಗಳಿದ್ದು ಇದರ ಸುತ್ತಮುತ್ತಾ ಅಂಚೆಕಛೇರಿ, ಬಿಎಸ್‌ಎನ್‌ಎಲ್ ಕಛೇರಿ, ಧರ್ಮಕೇಂದ್ರಗಳು, ಶಾಲೆಗಳು, ಹಾಗೂ ಪೊಲೀಸ್ ಠಾಣೆಯಿದ್ದು ಪ್ರತಿ ನಿತ್ಯ ಸಾರ್ವಜನಿಕರು ಸಂಚಾರ ಮಾಡುತ್ತಿರುವ ಸ್ಥಳವಾಗಿದೆ, ಈಗಾಗಲೇ ಹೊಸಳ್ಳಿ ಗ್ರಾಮದ ಹತ್ತಿರ ಮಂಜೂರು ಆಗಿರುವ ಸ್ಥಳಕ್ಕೆ ಸ್ಥಳಾಂತರ ಮಾಡಬೇಕಾಗಿದೆ, ಪ್ಲಾಸ್ಟಿಕ್ ಮುಕ್ತ ಮಾಡುವಂತೆ ಬಟ್ಟೆ ಬ್ಯಾಗ್‌ಗಳ ಬಳಕೆ ಹೆಚ್ಚಿನ ಅದ್ಯತೆ ನೀಡಬೇಕು ಎಂದರು.


ನಗರಸಭಾ ಸದಸ್ಯ ಸೊಪ್ಪು ಗಣೇಶ್ ಮಾತನಾಡಿ ಜಿಲ್ಲೆಯಾಗುವ ನಗರಕ್ಕೆ ಯಾವ ಕಡೆಯಲ್ಲೂ ಸ್ವಾಗತ ಕಮಾನುಗಳು ಇಲ್ಲ ತುರ್ತಾಗಿ ಕಮಾನುಗಳನ್ನು ನಿರ್ಮಾಣ ಮಾಡಿ ನಗರದ ಸೌಂದರ್ಯೀಕರಣವನ್ನು ಹೆಚ್ಚಿಸಬೇಕು ಎಂದರು.
ಯೋಗಿಶ್ ಮಾತನಾಡಿ ಅಧ್ಯಯನ ಪ್ರವಾಸಕ್ಕೆ ಮೀಸಲಿರಿಸುವ ಹಣವನ್ನು ಹೆಚ್ಚಳ ಮಾಡಿ, ನಗರದಲ್ಲಿರುವ ಭೂಸ್ವಾಧೀನವಾಗ ಜಾಗಗಳನ್ನು ಗುರುತಿಸಿವಿಕೆ ಕಾರ್ಯ ಆಗಬೇಕು ಎಂದರು.
ಅಧ್ಯಕ್ಷೆ ಯಮುನಾ ಮಾತನಾಡಿ ಪ್ಲಾಸ್ಟೀಕ್ ಮುಕ್ತ ತಿಪಟೂರು ನಗರವನ್ನು ಮಾಡುವುದು ನಮ್ಮಲ್ಲೆರ ಜವಾಬ್ದಾರಿಯಾಗಿದ್ದು, ಸದಸ್ಯರ ಸಹಕಾರ ಪ್ರಮುಖವಾಗಿದೆ ಹಾಗೂ ಎನ್‌ಜಿಟಿ ಅನುದಾನದಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕ ಕೆ.ಷಡಕ್ಷರಿ, ಉಪಾಧ್ಯಕ್ಷೆ ಮೇಘನ ಸುಜಿತ್‌ಭೂಷಣ್, ಪೌರಯುಕ್ತ ವಿಶ್ವೇಶ್ವರ ಬದರಗಡೆ ನಗರಸಬೆಯ ಚುನಾಯಿತ ಸದಸ್ಯರು ಹಾಗೂ ನಾಮನಿರ್ಧೇಶನ ಸದಸ್ಯರು, ಅಧಿಕಾರಿ ವರ್ಗ ಹಾಜರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version