ತಿಪಟೂರು:ನಮ್ಮ ದೇಶದ ಕಾನೂನಿನಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಸಮಾನ ಸ್ಥಾನಮಾನಗಳಿವೆ,ಸಮಾಜದ ಅಭಿವೃದ್ದಿಯಲ್ಲಿ ಮಹಿಳೆಯ ಪಾತ್ರವೂ ಅತಿಮುಖ್ಯವಾಗಿದ್ದು, ಮಹಿಳೆಯನ್ನ ಗೌರವದಿಂದ ಕಾಣಬೇಕು ಎಂದು ತಿಪಟೂರು 5ನೇ ಅಧಿಕ ಜಿಲ್ಲಾ ಸತ್ರನ್ಯಾಯಾಧೀಶರಾದ ಪುಷ್ಪಾವತಿ.ವಿ ತಿಳಿಸಿದರು.
ನಗರದ ಕೆ. ಎಲ್ .ಎ .ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಹಿಳೆಗೆ ಕಾನೂನಿನಲ್ಲಿ ಸಮಾನ ಅವಕಾಶ ಹಾಗೂ ಗೌರವಗಳಿವೆ, ಹಲವಾರು ಸಾಮಾಜಿಕ ಅವಕಾಶಗಳು ದೊರೆತರೂ ತನ್ನ ಕೌಟುಂಬಿಕ ಒತ್ತಡವನ್ನು ನಿಭಾಯಿಸಿ ನಿರ್ವಹಿಸಲು ಕಷ್ಟಪಡುತ್ತಿದ್ದಳು ಆದರೆ ಇಂದು ಮಹಿಳೆಯು ಮಾನಸಿಕ ಮತ್ತು ದೈಹಿಕವಾಗಿ ಶಕ್ತಳಾಗಿದ್ದಾಳೆ,ಯಾವುದೇ ಕಾರ್ಯಗಳನ್ನ ನಿರ್ವಹಿಸುವ ಮಟ್ಟಿಗೆ ಮಹಿಳಾ ಸಾಮರ್ಥ್ಯ ಸುಧಾರಿಸಿದೆ, ಸಮಾಜದ ಬದಲಾವಣೆಯಲ್ಲಿ ಮಹಿಳೆಯ ಪಾತ್ರ ಅನನ್ಯವಾದ್ದುದು, ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿದ್ದಾರೆ, ಗ್ರಾಮೀಣ ಭಾಗದ ಮಹಿಳೆಯರು ಸಮಾಜಿಕ ಕಟ್ಟುಪಾಡುಗಳನ್ನ ಮೆಟ್ಟಿನಿಂತು ಕಾನೂನಿನ ಅರಿವು ಪಡೆಯಬೇಕು,ಕಾನೂನಿನ ಅರಿವಿದ್ದಾಗ ಮಾತ್ರ ,ಸಮಾಜದಲ್ಲಿ ಗೌರವ ಪಡೆಯಲು ಸಾಧ್ಯವಾಗುತ್ತದೆ, ಮಹಿಳೆವಕೀಲರು ವಿಚಾರಣೆ,ತನಿಖೆ ಪ್ರಕ್ರಿಯೆಗಳಲ್ಲಿ ವಿಭಿನ್ನ ರೀತಿ ನಡೆಸಬೇಕು ಇದಕ್ಕೆ ಸಿನಿಮಾ ಪೂರಕವಾಗಬಲ್ಲವು ಆ ನಿಟ್ಟಿನಲ್ಲಿ ಮುಂಬರುವ ವಕೀಲರು ಜ್ಞಾನವಂತರಾಗಬೇಕು ಎಂದು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎನ್.ಎಸ್.ಎಸ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ನಾಗೇಂದ್ರ .ಜಿ ಎನ್ ಮಾತನಾಡಿ ಪ್ರಕೃತಿಯಲ್ಲಿ ಪ್ರತಿಯೊಂದು ಹೆಣ್ಣಿನ ಪ್ರತಿರೂಪವಾಗಿದೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯು ಮುಂಚಾಣೆಯಿದ್ದಾಳೆ,ಮೇಲು ಕೀಳು ಭಾವನೆ ಬಿಟ್ಟು ಮಹಿಳೆಯನ್ನ ಸಮಾನ ಗೌರವದಿಂದ ಕಾಣುವಂತ್ತಾಗ ಬೇಕು, ಇದಕ್ಕೆ ಪೂರಕವಾಗಿ ನಮ್ಮ ಕಾಲೇಜಿನ ಬೋಧಕ ಮತ್ತು ಬೋಧಕೇತರ ಮಹಿಳಾ ಸಿಬ್ಬಂದಿಗಳು ಅತ್ಯಂತ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸನೆ ವ್ಯಕ್ತಪಡಿಸಿದರು.
ಮುಖ್ಯಾತಿಥಿಗಳಾಗಿ ಭಾಗವಹಿಸಿದ ಕಿರುತೆರೆ ಹಾಗೂ ಚಲನಚಿತ್ರ ನಟಿ ಶ್ರೀಮತಿ ಸಂಧ್ಯಾ ಶ್ರೀ ಮಾತನಾಡಿ ಪುರುಷನ ಘನತೆಗೆ ಅರ್ಥ ಬರಬೇಕಾದರೆ ಅದು ಮಹಿಳಾ ಹಕ್ಕುಗಳಿಗೆ ಗೌರವ ಬಂದಾಗ ಬರುತ್ತದೆ. ಹೆಣ್ಣಿಗೆ ಹೆಣ್ಣು ವೈರಿ ಎಂಬುದರ ಬದಲಾಗಿ ಹೆಣ್ಣಿಗೆ ಹೆಣ್ಣು ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು, ಆಗ ಮಹಿಳಾ ಶಕ್ತಿಗೆ ಮತ್ತಷ್ಟು ಗಟ್ಟಿತನ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಟ್ರಸ್ಟ್ ಸದಸ್ಯರಾದ ಶ್ರೀ ಹರೀಶ್ ಎಂ, ಪ್ರಾಂಶುಪಾಲರಾದ ಶ್ರೀಮತಿ ವಿನಿತಾ ಪಿ.ಕೆ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಶ್ರೀ ಪ್ರಸನ್ನ ಕುಮಾರ್, ಶ್ರೀ ಪುನೀತ್ ಕುಮಾರ್ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ :ಸಂತೋಷ್ ಹೋಬಳ