KALPATHARU KRANTHI

ತಿಪಟೂರಿನ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

DSC01399

ಕಾರ್ಯಕ್ರಮದಲ್ಲಿ ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ ವಿ ಸದರಿ ಕಾಲೇಜಿನ ಎನ್ಎಸ್ಎಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ನಾಗೇಂದ್ರ ಜಿ ಎನ್, ಸದಸ್ಯರಾದ ಶ್ರೀ ಹರೀಶ್ ಎಂ, ಪ್ರಾಂಶುಪಾಲರಾದ ಶ್ರೀಮತಿ ವಿನಿತಾ ಪಿ.ಕೆ, ಕಿರುತೆರೆ ಮತ್ತು ಸಿನಿಮಾ ನಟಿಯಾದ ಶ್ರೀಮತಿ ಸಂಧ್ಯಾ ಶ್ರೀ ಉಪಸ್ಥಿತರಿದ್ದರು ಹಾಗೂ ಸದರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಶ್ರೀ ಪ್ರಸನ್ನ ಕುಮಾರ್, ಶ್ರೀ ಪುನೀತ್ ಕುಮಾರ್ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Spread the love

ತಿಪಟೂರು: ನಗರದ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು,ಸದರಿ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ ವಿ ಮಹಿಳೆಗೆ ಹಲವಾರು ಸಾಮಾಜಿಕ ಅವಕಾಶಗಳು ದೊರೆತರೂ ತನ್ನ ಕೌಟುಂಬಿಕ ಒತ್ತಡವನ್ನು ನಿಭಾಯಿಸಿ ನಿರ್ವಹಿಸಲು ಕಷ್ಟಪಡುತ್ತಿದ್ದಳು ಆದರೆ ಇಂದು ಮಹಿಳೆಯು ಮಾನಸಿಕ ಮತ್ತು ದೈಹಿಕವಾಗಿ ಶಕ್ತಳಾಗಿದ್ದಾಳೆ,ಯಾವುದೇ ಬಹು ಕಾರ್ಯಗಳನ್ನ ನಿರ್ವಹಿಸುವ ಮಟ್ಟಿಗೆ ಮಹಿಳಾ ಸಾಮರ್ಥ್ಯ ಸುಧಾರಿಸಿದೆ, ವಕೀಲರು ವಿಚಾರಣೆಯ ತನಿಖೆ ಪ್ರಕ್ರಿಯೆಗಳಲ್ಲಿ ವಿಭಿನ್ನ ರೀತಿ ನಡೆಸಬೇಕು ಇದಕ್ಕೆ ಸಿನಿಮಾ ಪೂರಕವಾಗಬಲ್ಲವು ಆ ನಿಟ್ಟಿನಲ್ಲಿ ಮುಂಬರುವ ವಕೀಲರು ಜ್ಞಾನವಂತರಾಗಬೇಕು ಎಂದು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು‌. ಸದರಿ ಕಾಲೇಜಿನ ಎನ್ಎಸ್ಎಸ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ನಾಗೇಂದ್ರ ಜಿ ಎನ್ ಮಾತನಾಡಿ ಪ್ರಕೃತಿಯಲ್ಲಿ ಪ್ರತಿಯೊಂದು ಹೆಣ್ಣಿನ ಪ್ರತಿರೂಪವಾಗಿದೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯು ಮುಂಚಾಣೆಯಿದ್ದಾಳೆ, ಇದಕ್ಕೆ ಪೂರಕವಾಗಿ ನಮ್ಮ ಕಾಲೇಜಿನ ಬೋಧಕ ಮತ್ತು ಬೋಧಕೇತರ ಮಹಿಳಾ ಸಿಬ್ಬಂದಿಗಳು ಅತ್ಯಂತ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸನೆ ವ್ಯಕ್ತಪಡಿಸಿದರು.ವಿಶೇಷ ಆಹ್ವಾನಿತರಾದ ಕಿರುತೆರೆ ಮತ್ತು ಸಿನಿಮಾ ನಟಿಯಾದ ಶ್ರೀಮತಿ ಸಂಧ್ಯಾ ಶ್ರೀ ಮಾತನಾಡಿ ಪುರುಷನ ಘನತೆಗೆ ಅರ್ಥ ಬರಬೇಕಾದರೆ ಅದು ಮಹಿಳಾ ಹಕ್ಕುಗಳಿಗೆ ಗೌರವ ಬಂದಾಗ ಬರುತ್ತದೆ ಹೆಣ್ಣಿಗೆ ಹೆಣ್ಣು ವೈರಿ ಎಂಬುದರ ಬದಲಾಗಿ ಹೆಣ್ಣಿಗೆ ಹೆಣ್ಣು ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು ಆಗ ಮಹಿಳಾ ಶಕ್ತಿಗೆ ಮತ್ತಷ್ಟು ಗಟ್ಟಿತನ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ ವಿ ಸದರಿ ಕಾಲೇಜಿನ ಎನ್ಎಸ್ಎಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ನಾಗೇಂದ್ರ ಜಿ ಎನ್, ಸದಸ್ಯರಾದ ಶ್ರೀ ಹರೀಶ್ ಎಂ, ಪ್ರಾಂಶುಪಾಲರಾದ ಶ್ರೀಮತಿ ವಿನಿತಾ ಪಿ.ಕೆ, ಕಿರುತೆರೆ ಮತ್ತು ಸಿನಿಮಾ ನಟಿಯಾದ ಶ್ರೀಮತಿ ಸಂಧ್ಯಾ ಶ್ರೀ ಉಪಸ್ಥಿತರಿದ್ದರು ಹಾಗೂ ಸದರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಶ್ರೀ ಪ್ರಸನ್ನ ಕುಮಾರ್, ಶ್ರೀ ಪುನೀತ್ ಕುಮಾರ್ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

Exit mobile version