KALPATHARU KRANTHI

ರಂಗಾಪುರ ಗ್ರಾಮಪಂಚಾಯ್ತಿ ಮೇಲಿನ ಆರೋಪ ,ಪ್ರತಿಭಟನೆ ನಿರಾಧಾರ :ಅಧ್ಯಕ್ಷ ವಿಶ್ವನಾಥ್ ಸ್ಪಷ್ಟನೆ

Spread the love

ತಿಪಟೂರು:ತಾಲ್ಲೋಕಿನ ರಂಗಾಪುರ ಗ್ರಾಮಪಂಚಾಯ್ತಿ ಮುಂಭಾಗ ಮಾರ್ಚ್ 20ರಂದು ಅಧ್ಯಕ್ಷರು ಹಾಗೂ ಪಿಡಿಒ ಮೇಲೆ ಆರೋಪಹೊರಿಸಿ ಪ್ರತಿಭಟನೆ ನಡೆಸಿರುವುದು ನಿರಾಧಾರವಾಗಿದ್ದು,ನಮ್ಮ ಗ್ರಾಮಪಂಚಾಯ್ತಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ಕಳ್ಳತನ ನಡೆದಿಲ್ಲ,ಎಂದು ರಂಗಾಪುರ ಗ್ರಾಮಪಂಚಾಯ್ತಿ ಅಧ್ಯಕ್ಷ ವಿಶ್ವನಾಥ್ ತಿಳಿಸಿದರು


ನಗರದ ಖಾಸಗೀ ಹೋಟೆಲ್ ಪತ್ರಿಕಾ ಘೋಷ್ಠಿ ಉದೇಶಿಸಿ ಮಾತನಾಡಿದ ಅವರು ರಂಗಾಪುರ ಗ್ರಾಮಪಂಚಾಯ್ತಿಯಲ್ಲಿ ಯಾವುದೇ ಅಕ್ರಮ ಹಾಗೂ ಕಳ್ಳತನ ನಡೆದಿಲ್ಲ, ಸರ್ಕಾರದ ನಿಯಮದಂತೆ, ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಾರದು,ಎನ್ನುವ ಕಾರಣಕ್ಕೆ ನಿರುಪಯುಕ್ತವಾಗಿ ಉಳಿದಿದ್ದ ಬೋರ್ವೆಲ್ ನಿಂದ ಮೋಟರ್ ತೆಗೆದು,ಮೀಸಲು ಇಡುವ ಉದೇಶದಿಂದ ಪಂಚಾಯ್ತಿ ಗುತ್ತಿಗೆದಾರನಿಂದ ಮೋಟರ್ ಎತ್ತಿಸಲಾಗಿತ್ತು, ಆದರೆ ಕೆಲವರು ಆಧಾರ ರಹಿತವಾಗಿ ಸುಳ್ಳು ಆರೋಪ ಮಾಡಿ,ಪ್ರತಿಭಟನೆ ಮಾಡಿರುವುದುಸರಿಯಲ್ಲ, ನಾವು ಪ್ರಮಾಣಿಕವಾಗಿ ಕೆಲಸ ಮಾಡಿತ್ತಿದ್ದೇವೆ,ಯಾವುದೇ ಕಳ್ಳತನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು
ಬಿಜೆಪಿ ಮುಖಂಡ ಸುಗುಣೇಂದ್ರ ಪಾಟೀಲ್ ಮಾತನಾಡಿ ನಮ್ಮ ಗ್ರಾಮಪಂಚಾಯ್ತಿಯಲ್ಲಿ ಯಾವುದೇ ಕಳ್ಳತನ, ಅಧಿಕಾರ ದುರುಪಯೋಗ ನಡೆದಿಲ್ಲ, ಸುಳ್ಳು ಪ್ರತಿಭಟನೆ ನಡೆಸಿ ದೂರು ನೀಡಿರುವ ಬಗ್ಗೆ ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸತ್ಯಾಂಶ ಹೊರಬರಲಿದೆ,ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಸಿರುವುದು ಸರಿಯಲ್ಲ ಎಂದರು


ಪತ್ರಿಕಾ ಘೋಷ್ಠಿಯಲ್ಲಿ ವಿ.ಎಸ್ಎಸ್ಎನ್ ಅಧ್ಯಕ್ಷ ಕೆರೆಗೋಡಿ ದೇವರಾಜು, ಗ್ರಾಮಪಂಚಾಯ್ತಿ ಸದಸ್ಯರಾದ ಆನಂದಪ್ಪ,ಮಮತ,ಬಿಂದುಶ್ರೀ,ಇಂದ್ರಾಣಿ ದಯಾನಂದ್, ಮಾಜಿ ಅಧ್ಯಕ್ಷರಾದ ರೂಪ.ಮುಖಂಡರಾದ ಹರೀಶ್,ವಿಜಯ್ ಕುಮಾರ್,ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version