ತಿಪಟೂರು ತಾಲ್ಲೋಕಿನ .ನೊಣವಿನಕೆರೆ ಕೆರೆ ವ್ಯಾಪ್ತಿಯ ಅಚ್ಚುಕಟ್ಟುದಾರ ರೈತರ ತುತ್ತಿಗೆ ಕನ್ನಹಾಕಿ ತಿಪಟೂರು ನಗರಕ್ಕೆ ಕುಡಿಯವ ನೀರು ತೆಗೆದುಕೊಂಡು ಹೋಗಲು ಹೊರಟಿರುವಿದು,ಖಂಡನೀಯ ಎಂದು ನೊಣವಿನಕೆರೆ ಅಚ್ಚುಕಟ್ಟು ರೈತರು ಅಕ್ರೋಶ ವ್ಯಕ್ತಪಡಿಸಿದರು.
ನಗರದ ಖಾಸಗೀ ಹೋಟೆಲ್ ನಲ್ಲಿ ಪತ್ರಿಕಾ ಘೋಷ್ಠಿ ಉದೇಶಿಸಿ ಮಾತನಾಡಿದ ಎಸ್ ವಿ, ಸ್ವಾಮಿ ನೊಣವಿನಕೆರೆ ಪುರಾತನ ಕಾಲದಿಂದಲ್ಲೂ ಕೃಷಿ ಮತ್ತು ಮೀನುಗಾರಿಕೆರೆ ಮೀಸಲಾಗಿರುವ ಕೆರೆ,ತಿಪಟೂರಿಗೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ,ಅಚ್ಚುಕಟ್ಟು ಪ್ರದೇಶ ಸಾವಿರಾರು ಜನ ರೈತರು ಬೈಲನ್ನೆ ಆಶ್ರಯಿಸಿದ್ದೇವೆ,ಆದರೆ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯ ಪರಿಣಾಮ ಸೂಕ್ತ ನಿರ್ವಹಣೆ ಕೊರತೆಯಿಂದ,ಎಸ್.ಟಿ.ಪಿ ಘಟಕದ ನೀರು ಈಚನೂರು ಕೆರೆ ಸೇರಿ ನೀರು ಮಲೀನವಾಗಿದೆ,ತಿಪಟೂರು ಜನ ಕುಡಿಯುವ ಈಚನೂರು ಜಲಸಂಗ್ರಹಗಾರ ಕಲೂಷಿತದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮವಹಿಸಿ, ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ತಿಪಟೂರು ಜನರಿಗೆ ನೀರು ಪೂರೈಕೆ ಕಡೆ ಗಮನಹರಿಸಬೇಕು,ಅಥವಾ ತಿಪಟೂರಿಗೆ ನೀರು ಪೂರೈಸಲು ಹಲವಾರು ನೈಸರ್ಗಿಕಮಾರ್ಗೋಪಾಯಗಳಿದರು,ನೊಣವಿನಕೆರೆಯಿಂದ ತಿಪಟೂರಿಗೆ ನೀರು ತೆಗೆದುಕೊಂಡು ಹೋಗುತ್ತೇವೆ ಎಂದು ಹೊರಟಿರುವ ಶಾಸಕರ ನಡೆ ಸರಿಇಲ್ಲ, ಕೂಡಲೇ ನೊಣವಿನಕೆರೆ ಕೆರೆ ಹೊರತುಪಡಿಸಿ ,ಪರ್ಯಾಯ ಮಾರ್ಗಗಳ ಬಗ್ಗೆ ಪರಿಶೀಲನೆಮಾಡಬೇಕು,ನೊಣವಿನಕೆರೆ ಬೈಲು ಪ್ರದೇಶದ ಬಲದಂಡೆ ಹಾಗೂ ಎಡದಂಡೆ ಭಾಗದಲ್ಲಿ 4.5 ಮತ್ತು 6.6 ಕಿಲೋಮೀಟರ್ ಕಾಲುವೆಗಳಲ್ಲಿ 540.98 ಪ್ರದೇಶಕ್ಕೆ ನೀರು ಹರಿಸಿ ಭತ್ತಬೆಳೆಯಲು ಸಾಧ್ಯವಾಗಿದೆ,ನೊಣವಿನಕೆರೆ ಒಟ್ಟು ವಿಸ್ತೀರ್ಣ499.30 ಹೆಕ್ಟೇರ್, ನೀರು ಸಂಗ್ರಹಣ ಸಾರ್ಮರ್ಥ್ಯ349.91 ಎಂಸಿಎಫ್ಟಿ ,ಒತ್ತುವರಿ ಹಾಗೂ ಹೂಳುತುಂಬಿ ಸಂಗ್ರಹಣ ಸಾರ್ಮರ್ಥ್ಯ ಕುಸಿದಿದೆ,ತಿಪಟೂರು ನಗರಕ್ಕೆ ನೀರು ತೆಗೆದುಕೊಂಡು ಹೋದರೆ ನೊಣವಿನಕೆರೆ ಕೆರೆಯನ್ನೇ ಆಶ್ರಯಿಸಿರುವ,1600 ಹೆಕ್ಟೆರ್ ಅಚ್ಚುಕಟ್ಟು 1900 ಬಾಗಾಯ್ತು ಪ್ರದೇಶ ಹಾಗೂ ಅರೆಕಾಲಿಕ ಕೃಷಿ ಬೆಳೆಗಳಿಗೆ ನೀರು ಇಲ್ಲದಂತ್ತಾಗುತ್ತದೆ, ಸರ್ಕಾರ ಯಾವುದೇ ಕಾರಣಕ್ಕು ನೊಣವಿನಕೆರೆ ಕೆರೆಯಿಂದ ನೀರು ತೆಗೆದುಕೊಂಡು ಹೋಗುವ ನಿರ್ಧಾರ ಕೈ ಬಿಡಬೇಕು, ರೈತರ ಅನ್ನಕ್ಕೆ ಕಲ್ಲುಹಾಕುವ ಕೆಲಸಬಿಡಬೇಕು,ಹನಿ ನೀರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ತಿಳಿಸಿದರು.
ರೈತಮುಖಂಡ ಬಸ್ತಿಹಳ್ಳಿ ರಾಜಣ್ಣ ರೈತರ ಬಾಯಿಗೆ ಮಣ್ಣುಹಾಕಿ ತಿಪಟೂರಿಗೆ ನೀರು ತೆಗೆದುಕೊಂಡು ಹೋಗುವ ಜಿಲ್ಲಾಡಳಿತದ ನಿರ್ಧಾರಕ್ಕೆ ರೈತರು ಅಚ್ಚುಕಟ್ಟುದಾರರ ಸಂಪೂರ್ಣ ವಿರೋಧವಿದೆ, ನಮ್ಮ ರಕ್ತಕೊಡುತ್ತೇವೆ ಹನಿ ನೀರುಕೊಡುವುದಿಲ್ಲ,ನಮ್ಮ ನೀರು ನಮ್ಮ ಹಕ್ಕು , ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ದಬ್ಬಾಳಿಕೆಗೆ ಮುಂದಾದರೆ ಸರ್ಕಾರ ಪರಿಣಾಮ ಎದುರಿಸಬೇಕಾಗುತ್ತದೆ, ಹಿಂದಿನ ಸರ್ಕಾರ ಈಚನೂರು ಕೆರೆ ನೀರು 2030 ಇಸವಿ ವರೆಗೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಈಚನೂರು ಕೆರೆ ನವೀಕರಣಗೊಳಿಸಿ ಕುಡಿಯುವ ನೀರು ಪೂರೈಸುತ್ತೇವೆ, ಯಾವುದೇ ಕಾರಣಕ್ಕೂ ನೊಣನಿನಕೆರೆ ಯೋಜನೆಗೆ ಕೈ ಹಾಕುವುದಿಲ್ಲ ಎಂದು ಕೋರ್ಟ್ ಗೆ ಅಫಿಡವಿಟ್ ನೀಡಿದೆ, ಆದರೆ ಈ ಸರ್ಕಾರ ಕುಡಿಯುವ ನೀರು ಪೂರೈಕೆ ಹೆಸರಿನಲ್ಲಿ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ರೈತ ಮುಖಂಡರಾದ ನೇತ್ರಾನಂದ,ವೃಷಬೇಂದ್ರ,ಜಯಶರ್ಮ,ಮುಂತ್ತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ