ತಿಪಟೂರು ನಗರದ ಕೆ.ಆರ್ ಬಡಾವಣೆ ಬಿ.ಹೆಚ್ ರಸ್ತೆ ಪಕ್ಕದ ಬೀದಿ ಬದಿಯ ಮಾಂಸಹಾರ ಅಂಗಡಿಗಳನ್ನ ಒಕ್ಕಲೆಬಿಸಲಾಗಿದೆ,ಮನುಷ್ಯನ ಆಹಾರ ಸಂಸ್ಕೃತಿಯನ್ನ ಅಪಹಾಸ್ಯ ಮಾಡಿರುವ ನಗರಸಭೆ ಅಧಿಕಾರಿಗಳ ನಡೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಮನುಷ್ಯನ ಜೀವನ ಕ್ರಮ ಆರಂಭವಾದಾಗಿನಿಂದ ಸಸ್ಯಹಾರ ಮಾಂಸಾಹಾರಗಳು ಆದಿ ಮಾನವನ ಕಾಲದಿಂದ ರೂಢಿಗತವಾಗಿಬಂದಿವೆ, ಸಸ್ಯಹಾರಿಗಳಿಗೆ,ಸಸ್ಯಹಾರ ಪ್ರಿಯವಾದರೇ ಮಾಂಸಾಹಾರಿಗಳಿಗೆ ಮಾಂಸಾಹಾರವೇ ಅತಿಪ್ರಿಯಾ, ಅವರ ಆಹಾರ ಅವರ ಹಕ್ಕು ಆದರೆ ನಗರಸಭೆ ನಡೆಮಾತ್ರ ದಲಿತರು,ಹಿಂದುಳಿದ ವರ್ಗಗಳು , ಸೇರಿದಂತೆ ಮಾಂಸಪ್ರಿಯ ತಳಸಮುದಾಯಗಳ ಆಹಾರಕ್ರಮವನ್ನೇ ತುಚ್ಚವಾಗಿ ಕಂಡಿದ್ದಾರೆ, ಭೂಮಿಯ ಮೇಲೆ ಸಸ್ಯಹಾರಿಗಳು ಶ್ರೇಷ್ಠರು ಮಾಂಸಾಹಾರಿಗಳು ಕನಿಷ್ಠರು ಅನೋ ಯಾವುದೇ ನಿಯಮವಿಲ್ಲ, ಭಾರತದಂತ ಬಹುಸಂಸ್ಕೃತಿ ದೇಶದಲ್ಲಿ ಮಾಂಸಾಹಾರಕ್ಕೆ ತನ್ನದೇ ಆದ ಪೂಜನೀಯ ಸ್ಥಾನಮಾನವಿದೆ,ಆದರೆ ತಿಪಟೂರು ನಗರದ ಕೆ.ಆರ್ ಬಡಾವಣೆ ಬಿ.ಹೆಚ್ ರಸ್ತೆ ಪಕ್ಕದಲ್ಲಿ ಹಲವಾರು ರೀತಿಯ ಅಂಗಡಿ ವ್ಯಾಪಾರ ನಡೆಯುತ್ತಿದೆ, ತಿಂಡಿ ಊಟದ ಹೋಟೆಲ್ ಗಳು ಪಾನಿಪೂರಿ ಗೋಬಿಮಂಚೂರಿ, ಚುರುಮುರಿಯಂತ ಸ್ನ್ಯಾಕ್ಸ್ ಅಂಗಡಿಗಳು ಇವೆ ಇವುಗಳ ಮಧ್ಯೆಯೆ ಪ್ರೈಡ್ ರೈಸ್, ಹೆಗ್ ರೈಸ್ ಕಬಾಬ್ ,ಮೊಟ್ಟೆ ಬೋಂಡ,ಹೆಗ್ ಬುರ್ಜಿ ಸೇರಿದಂತೆ ಚಿಕನ್ ಖಾದ್ಯಗಳ ಅಂಗಡಿಗಳು ಇದ್ದವೂ, ಅದರೆ ನಗರ ಸಭೆಯ ಅಧಿಕಾರಿಗಳ ಕಣ್ಣು,ಚಿಕನ್ ಕಬಾಬ್ ಅಂಗಡಿ . ಹೆಗ್ ರೈಸ್, ಮೊಟ್ಟೆ ಬೋಂಡದ ಅಂಗಡಿಗಳ ಮೇಲೆ ಬಿದ್ದಿದೆ.ಕೆ.ಆರ್ ಬಡಾವಣೆಯು ಮೇಲ್ಜಾತಿಯ ಜನವಾಸಮಾಡುವ ಇಲ್ಲಿ ಮಾಂಸಾಹಾರ, ಮೊಟ್ಟೆ ಹಾಗೂ ಮೊಟ್ಟೆಯ ತಿನಿಸುಗಳನ್ನ ಮಾರಾಟ ಮಾಡುವಂತ್ತಿಲ್ಲ ಎಂದು ಒಕ್ಕಲೆಬ್ಬಿಸಲಾಗಿದೆ,ಹತ್ತಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ,ಜನರನ್ನ ಒಕ್ಕಲೆಬಿಸಿ ಅವರ ಹೊಟ್ಟೆಮೇಲೆ ಹೊಡೆದಿದ್ದಾರೆ,ದಾರಿಯಲ್ಲಿ ಓಡಾಡುವ ನಾಗರೀಕರೋರ್ವರು ನಾನೂ ಮೇಲ್ಜಾತಿಯವರು ಇದೇ ರಸ್ತೆಯಲ್ಲಿ ಓಡಾಡಬೇಕು ಮೊಟ್ಟೆವಾಸನೆ ಹಾಗೂ ಕಬಾಬ್ ವಾಸನೆಯಿಂದ ಮೈಲಿಗೆಆಗುತ್ತದೆಅಂತ ಹೇಳಿದ್ದಾರಂತೆ, ಅವರ ಮಾತನೇ ಪ್ರಸಾದವೆಂದ ಕೌನ್ಸಿಲರ್ ತಮ್ಮ ಆಧಿಕಾರನ್ನ ಕೈಗೆತ್ತಿಕೊಂಡು, ಬಿ.ಹೆಚ್ ರಸ್ತೆ ಫುಡ್ ಸ್ಟ್ರೀಟ್ ಫಿಲ್ಡ್ ಗೆ ಇಳಿದಿದ್ದಾರೆ,ಇದು ಮೇಲ್ಜಾತಿಯವರು ವಾಸ ಮಾಡುವ ಪ್ರದೇಶ ಇಲ್ಲಿ ಚಿಕನ್ ಮಟನ್, ಮಾಡುವಂತ್ತಿಲ್ಲ.ಮೀನು ಮೊಟ್ಟೆ ಮಾರುವಂತ್ತಿಲ್ಲ,ಎಂದು ಪಾರ್ಮಾನು ಹೊರಡಿಸಿ, ಅಂಗಡಿಯನ್ನ ಒಕ್ಕಲೆಬಿಸಿದ್ದಾರೆ, ಅಂಗಡಿಯವರು ಮಾತ್ರ ಅಣ್ಣ ನಾವು ಯಾರಿಗೂ ತೊಂದರೆ ಮಾಡಿಲ್ಲ. ಬೀದಿ ಬದಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದೇವೆ,ಯಾರಿಗೂ ಒತ್ತಾಯ ಮಾಡಿಲ್ಲ,ಎಂದೂ ಗೋಗರೆದರೂ ಬಿಡದಂತ್ತೆ ಅಂಗಡಿ ಎತ್ತಿಸಿದರು ಎಂದೂ ಆರೋಪಿಸಿದ್ದಾರೆ, ಮಾಂಸಾಹಾರ ಇಷ್ಟೋಂದು ಅಪವಿತ್ರವೇ ಎನ್ನುವಂತ್ತಾಗಿದೆ,ನಗರಸಭೆ ಹಾಗೂ ಕೌನ್ಸಿಲರ್ ನಡೆಗೆ ಸಾರ್ವಜನಿಕರು ಆಕ್ಷೇಪಿಸಿದ್ದು,ಜಾತ್ಯಾತೀತ ಮೌಲ್ಯಗಳು ಹಿಂದುಳಿದ ವರ್ಗಗಳು ಹಾಗೂ ಅವರ ಆಹಾರ ಸಂಸ್ಕೃತಿ ಗೌರವಿಸ ಬೇಕಾದ ಕಾಂಗ್ರೇಸ್ ಪಕ್ಷದ ಮುಖಂಡರ ವರ್ತನೆ ಹಿಂಗಾದರೆ,ಬೇರೆಯವರ ಕಥೆ ಏನು..? ಎನ್ನುವಂತ್ತಾಗಿದೆ, ಬಿಜೆಪಿಯ ಮುಖಂಡರೊಬ್ಬರು ಮಾತ್ರ ನಮ್ಮ ಪಕ್ಷದಲ್ಲಿ ಹಲಾಲ್ ಕಟ್ ಜಟ್ಕಕಟ್ ಅಂತ ಹೋರಾಟ ಮಾಡಿದ್ವಿ ಆದ್ರೆ ಇವರು ಮಟನ್ ಚಿಕನ್ ಕಬಾಬ್ ಸೇರಿ, ಮೊಟ್ಟೆಯೂ ಬೇಡ ಎನ್ನುತ್ತಿದ್ದಾರೆ, ಭೇಷ್ ಎಂದು ಕುಟುಕಿದ್ದಾರೆ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಸವಿಲೇವಾರಿ ಸಮಸ್ಯೆ, ಸೇರಿ ನೂರಾರು ಸಮಸ್ಯೆಗಳು ಹಾಸುಹೊಕ್ಕಾಗಿವೆ ಇವುಗಳ ಪರಿಹಾರದ ಕಡೆಗಮನಹರಿಸಲಿ, ಅವರ ಆಹಾರ ಅವರ ಹಕ್ಕು, ಅವರಿಗೆ ಇಷ್ಟ ಇರೋ ಆಹಾರ ಅವರುತಿನ್ನುತ್ತಾರೆ. ಮಡಿಮೈಲಿಗೆ ಹೆಸರಿಲ್ಲಿ ಬಡವರ ತುತ್ತು ಕಿತ್ತುಕೊಳೋದು ಬೇಡ..
ವರದಿ :ಮಂಜುನಾಥ್ ಹಾಲ್ಕುರಿಕೆ
