KALPATHARU KRANTHI

ಜಿಲ್ಲಾ ಅಲೆಮಾರಿ ಅರೆಅಲೆಮಾರಿ ಒಕ್ಕೂಟದ ತಿಪಟೂರು ತಾಲ್ಲೋಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

Spread the love

ತಿಪಟೂರು:ಜಿಲ್ಲಾ ಅಲೆಮಾರಿ ಅರೆ ಅಲೆಮಾರಿ ಒಕ್ಕೂಟದ ಜಿಲ್ಲಾಗೌರವಾಧ್ಯಕ್ಷರಾದ ಚಿಕ್ಕಣ್ಣ ನವರ ಅಧ್ಯಕ್ಷತೆಯಲ್ಲಿ ತಿಪಟೂರು ತಾಲ್ಲೋಕು ಅಲೆಮಾರಿ ಅರೆಅಲೆಮಾರಿ ಒಕ್ಕೂಟದ ನಾಗರಾಜು ಶಕುನಿಗಿರಿ ರಾಜು.ಗೌರವಾಧ್ಯಕ್ಷರಾಗಿ ದಾಸನಕಟ್ಟೆ ಕರಿಯಪ್ಪ,ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎಸ್ ಚಂದ್ರಪ್ಪ, ಕಾರ್ಯದರ್ಶಿಯಾಗಿ ಲಿಂಗರಾಜು ಮಡೇನೂರು,ಉಪಾಧ್ಯಕ್ಷರಾಗಿ ಜಯಲಕ್ಷ್ಮಮ್ಮ,ಯೋಗಾನಂದ್,ಉಪಾಧ್ಯಕ್ಷರಾಗಿ ಈಶ್ವರ್,ಖಜಾಂಚಿಯಾಗಿ ಸೋಮಶೇಖರ್ ಹಾಲೇನಹಳ್ಳಿ ಆಯ್ಕೆ ಮಾಡಲಾಗಿದ್ದು, ಜಿಲ್ಲಾ ಅಲೆಮಾರಿ ಅರೆಅಲೆಮಾರಿ ಒಕ್ಕೂಟದ ಉಪಾಧ್ಯಕ್ಷ ಚಿಕ್ಕಣ್ಣ,ಮಧುಸೂಧನ್.ಕಾಡುಗೊಲ್ಲರ ಸಮಾಜದ ಮುಖಂಡ ರವೀಂದ್ರ ಉಪಸ್ಥಿತರಿದರು
ನೂತನ ಅಧ್ಯಕ್ಷರಾದ ನಾಗರಾಜು ಮಾತನಾಡಿ ತಾಲ್ಲೋಕಿನಲ್ಲಿ ಅಲೆ ಮಾರಿ ಹಾಗೂ ಅರೆ ಅಲೆಮಾರಿ ಜನಾಂಗಗಳು ಅರ್ಥಿಕವಾಗಿ ಶೈಕ್ಷಣಿಕವಾಗಿ, ಸಮಾಜಿಕವಾಗಿ ತೀರಾಹಿಂದುಳಿದಿವೆ,ಜೀವನಾಧರಕ್ಕೆ ಉಪವೃತ್ತಿ ಕೈಗೊಳ್ಳಲು ಅಲೆಮಾರಿ ಅಭಿವೃದ್ದಿ ನಿಗಮದಿಂದ ಸಾಲಸೌಲಭ್ಯ ದೊರೆಯುವಂತೆ ಮಾಡಬೇಕು,ಸರ್ಕಾರ ಕನಿಷ್ಟ 200ಕೋಟಿ ಹಣ ಮೀಸಲು ಇಡಬೇಕು ಎಂದು ಮನವಿ ಮಾಡಿದರು

Exit mobile version