KALPATHARU KRANTHI

ತಿಪಟೂರು ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ

IMG-20250310-WA0057
Spread the love

ತಿಪಟೂರು ನಗರಕ್ಕೆ ಕುಡಿಯುವ ನೀರಿ ಪೂರೈಸಲು ನಗರಸಭೆ ವಿಫಲವಾಗಿದ್ದು, ಕುಡಿಯುವ ನೀರಿಗೆ ಜನಪರದಾಡುವಂತ್ತಾಗಿದೆ, ಸರ್ಕಾರ ಕೂಡಲೇ ಕುಡಿಯುವ ನೀರು ಪೂರೈಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.


ಪ್ರತಿಭಟನಾನಿರತರು ಸರ್ಕಾರ ಹಾಗೂ ನಗರಸಭೆ ಪೌರಾಯುಕ್ತರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ಮಾತನಾಡಿ ಶಾಸಕರ ಆಡಳಿತ ವೈಫಲ್ಯದ ಪರಿಣಾಮ ನಗರದ ಜನ ಕುಡಿಯುವ ನೀರಿಗೂ ಪರದಡುವಂತ್ತಾಗಿದೆ,ನಗರಸಭೆ ಯುಜಿಡಿ ನೀರು ಈಚನೂರು ಕೆರೆ ಸೇರದಂತೆ ಕ್ರಮವಹಿಸದ ಪರಿಣಾಮ ನಗರದ ಜನ ಕಲೂಷಿತ ನೀರು ಕುಡಿಯುವ ದುಸ್ಥಿತಿ ಒದಗಿದೆ,ನಗರಸಭೆ ಆಡಳಿತ ಸಂಪೂರ್ಣವಾಗಿ ವಿಫಲವಾಗಿದ್ದು, ನಗರದ ಸಮಸ್ಯೆಗಳ ಅರಿವಿಲ್ಲದೆ ಆಡಳಿತ ನಡೆಸುತ್ತಿದೆ,ಪ್ರತಿವರ್ಷ ಸಾವಿರಾರು ರೂಪಾಯಿ ತೆರಿಗೆ ಪಡೆಯುವ ನಗರಸಭೆಗೆ ಕುಡಿಯುವ ನೀರು ಹಾಗೂ ಮೂಲಸೌಕರ್ಯ ಒದಗಿಸಲು ವಿಫಲವಾಗಿದೆ,ಮಾರ್ಚ್ ನಲ್ಲಿ ಇಷ್ಟೊಂದು ನೀರಿನ ಸಮಸ್ಯೆ ಉಂಟಾದರೆ ಮೇ.ಜೂನ್ ತಿಂಗಳಿನಲ್ಲಿ ಜನಜಾನುವಾರುಗಳು ಕುಡಿಯುವ ನೀರಿಲ್ಲದ ಜೀವಕಳೆದುಕೊಳ್ಳುವ ಸ್ಥಿತಿ ಬರಬಹುದು, ಶಾಸಕರು ಈ ವರ್ಷದ ಬಜೆಟ್ ನಲ್ಲಿ ಒಂದೂ ನಯಾಪೈಸೆಯನ್ನು ತಾಲೋಕಿಗೆ ತಂದಿಲ್ಲ.ತೆಂಗುಬೆಳೆಗಾರರು ಸಾಯುತ್ತಿದ್ದಾರೆ,ಕನಿಷ್ಟ ಜನರ ಬಗ್ಗೆ ಕಾಳಜಿ ಇದ್ದರೆ,ನಗರದ ಜನಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆಗೆ ಕ್ರಮವಹಿಸಲಿ ಎಂದು ತಿಳಿಸಿದರು


ಮಾಜಿ ನಗರಸಭಾ ಸದಸ್ಯ ಪ್ರಸನ್ನ ಕುಮಾರ್ ಮಾತನಾಡಿ ವೈ.ಕೆ ರಾಮಯ್ಯನವರ ಶ್ರಮದ ಪರಿಣಾಮ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ದೊರೆತ್ತಿದೆ,ನಮ್ಮ ಪಾಲಿನ ನೀರನ್ನ ಸಮರ್ಪಕವಾಗಿ ಬಳಸಿಕೊಳ್ಳಬೇಕು. ತಿಪಟೂರು ನಗರಕ್ಕೆ ಕುಡಿಯುವ ನೀರುವಪೂರೈಸುವ ಈಚನೂರು ಕೆರೆ ಯೂಜಿಡಿ ಕೊಳಚೆ ನೀರು ಕಲೂಷಿತವಾಗಿದ್ದು, ಬಹುತೇಕ ನೀರು ಕುಡಿಯಲು ಯೋಗ್ಯವಾಗಿಲ್ಲ,ತಿಪಟೂರು ನಗರದ ಜನಕುಡಿಯುವ ನೀರಿಗೆ ಪರದಾಡುವಂತ್ತೆ ಆಗಿರುವುದು ಪೌರಾಯುಕ್ತರ ಮುಂದಾಲೋಚನೆ ಇಲ್ಲದೆ ಇರುವುದರ ಪರಿಣಾಮ ಎನ್ನಬಹುದು, ನಗರಸಭೆ ಕೂಡಲೇ ನಗರಕ್ಕೆ ಕುಡಿಯುವ ನೀರುಪೂರೈಕೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲ್ಲೋಕು ಅಧ್ಯಕ್ಷ ಮತ್ತಿಘಟ್ಟ ಶಿವಸ್ವಾಮಿ, ಯುವಘಟಕದ ಅಧ್ಯಕ್ಷ ಸುದರ್ಶನ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಕೆ.ಕೆ.ಮುಖಂಡರಾದ ನಟರಾಜು, ಕೆ.ಎಂ ತಾತಯ್ಯ,ನಾಗರಾಜು,ಗುರುಮೂರ್ತಿ ಮುಂತ್ತಾದವರು ಉಪಸ್ಥಿತರಿದರು


ಪ್ರತಿಭಟನೆಗೆ ಪ್ರಮುಖ ನಾಯಕರ ಗೈರು:

ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಜೆಡಿಎಸ್ ಪ್ರಭಾವಿ ನಾಯಕರಾದ ಜಕ್ಕನಹಳ್ಳಿ ಲಿಂಗರಾಜು,ನೊಣವಿನಕೆರೆ ಎನ್ ಸಿ ರಾಮೇಶ್, ರಾಕೇಶ್ ,ತಡಸೂರು ಗುರುಮೂರ್ತಿ,ಹುಣಸೇಘಟ್ಟ ಪ್ರಕಾಶ್, ಸೇರಿದಂತೆ ಬಹುತೇಕ ನಾಯಕರ ಗೈರು ಗಮನಸೆಳೆಯಿತು,
ನಿರೀಕ್ಷೆಯಂತೆ ಪ್ರತಿಭಟನೆಗೆ ಬಾರದ ನಗರದ ನಾಗರೀಕರು:

ನಗರಕ್ಕೆ ಕುಡಿಯುವ ನೀರು ಪೂರೈಕೆಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಕೆ.ಟಿ ಶಾಂತಕುಮಾರ್ ನಿರೀಕ್ಷೆಯಂತೆ ನಗರದ ಜನ ಆಗಮಿಸದೆ ಇರುವುದು ಪ್ರತಿಭಟನಾಕಾರರಲ್ಲಿ ಸ್ಪಲ್ಪ ಬೇಸರ ಮೂಡಿಸಿತ್ತು, ಆದರು ಪ್ರತಿಭಟನೆ ನಡೆಸಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version