ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಯಾತ್ರೀಕೃತ ಭತ್ತ ನಾಟಿ ಕಾರ್ಯಕ್ರಮ ನಡೆಸಲಾಯಿತು,
ದಿವ್ಯ ಸಾನಿಧ್ಯವಹಿಸಿದ ವಹಿಸಿದ ನೊಣವಿನಕೆರೆ ಶ್ರೀಕಾಡಸಿದ್ದೇಶ್ವರ ಮಠದ ಅಭಿನವ ಶ್ರೀಕಾಡಸಿದ್ದೇಶ್ವರ ಮಹಾಸ್ವಾಮೀಜಿ ಭತ್ತದ ಪೈರನ್ನು ರೈತರಿಗ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ತುಮಕೂರು ಜಿಲ್ಲೆಯ ನಿರ್ದೇಶಕರಾದ ಯುತ ಸತೀಶ್ ಸುವರ್ಣ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಕಾರ್ಯಕ್ರಮಗಳು ಸಿರಿ ಧಾನ್ಯ ಬೇಸಾಯ ಮತ್ತು ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು, ಗ್ರಾಮ ಅಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದ ಯೋಜನಾಧಿಕಾರಿಗಳದ ಶ್ರೀಯುತ ಸುಧೀರ್ ಜೈನ್ ಮಾತನಾಡಿ ನೊಣವಿನಕೆರೆ ಭಾಗದ ರೈತರು ಹಲವಾರು ವರ್ಷಗಳಿಂದ ಭತ್ತ ಬೇಸಾಯ ಮಾಡುವುದನ್ನು ಬಿಟ್ಟಿದ್ದರು 2023ರಲ್ಲಿ ಪ್ರಾಯೋಗಿಕವಾಗಿ 20 ರೈತರಲ್ಲಿ 32 ಯಾಂತ್ರಿಕೃತ ಭತ್ತ ಬೇಸಾಯ ಮಾಡಲಾಗಿತ್ತು 2024ರಲ್ಲಿ 450 ಎಕರೆ ಭತ್ತ ಬೇಸಾಯ ಮಾಡಲಾಗಿದ್ದು 2025ರಲ್ಲಿ 650ಕ್ಕೂ ಹೆಚ್ಚಿನ ಎಕ್ರೆಗಳಲ್ಲಿ ಬತ್ತ ಬೇಸಾಯ ಮಾಡಲಾಗುತ್ತಿದೆ, ಆಧುನಿಕ ಕೃಷಿಯತ್ತ ರೈತರು ಒಲವನ್ನು ತೋರಿಸುತ್ತಿರುವುದು. ಒಳ್ಳೆಯ ಬೆಳವಣಿಗೆ ಆಗಿದೆ ಎಂದು ಅಭಿಪ್ರಾಯಪಟ್ಟರು., ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ್ ಪಂಚಾಯತ್ ಅಧ್ಯಕ್ಷ ರಾದ ಶ್ರೀಮತಿ ಜಯಮ್ಮ ಅವರು ವಹಿಸಿದ್ದರು , ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಮತಿ ದಿವ್ಯ ಪ್ರಗತಿಪರ ಕೃಷಿಕರಾದ ಶ್ರೀಯುತ ಸ್ವಾಮಿ ಜಮೀನಿನ ಮಾಲೀಕರಾದ ಶ್ರೀಯುತ ಪ್ರಕಾಶ್ ವಲಯದ ಮೇಲ್ವಿಚಾರಕರಾದ ಶ್ರೀಯುತ ಮುನಿಕೃಷ್ಣ JVKಸಮನ್ವಯಾಧಿಕಾರಿ ಶ್ರೀಮತಿ ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು ಯೋಜ ನಾಧಿಕಾರಿ ಶ್ರೀಯುತ ಸುರೇಶ್ ಸ್ವಾಗತಿಸಿದರು
ವರದಿ :ಮಂಜುನಾಥ್ ಹಾಲ್ಕುರಿಕೆ