ತಿಪಟೂರು :ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಕೆರೆ ಜೀರ್ಣೋದಾರ ಕಾಮಗಾರಿಯ ಗುದ್ದಲಿಪೂಜೆಯನ್ನುನೆರವೇರಿಸಲಾಯಿತು.

ತುಮಕೂರು ಹಾಲು ಒಕ್ಕೂಟದ ತಿಪಟೂರು ತಾಲ್ಲೂಕು ನಿರ್ದೇಶಕರಾದ ಮಾದಿಹಳ್ಳಿ ಪ್ರಕಾಶ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕೆರೆ ಕಾಮಗಾರಿಗಳನ್ನು ನೆಡಿಸಿ ರಾಜ್ಯದ ಅನೇಕ ರೈತರಕೃಷಿಚಟುವಟಿಕೆಗಳಿಗೆ,ಜೀವಜಂತುಗಳ ಕುಡಿಯುವ ನೀರಿನ ಸೌಕರ್ಯಗಳನ್ನು ಮಾಡಿಕೊಡುವ ಅತ್ಯಂತ ಪುಣ್ಯ ಕೆಲಸವನ್ನು ಮಾಡುತ್ತಿದೆ.ತಾಲ್ಲೂಕಿನಲ್ಲಿ ಯೋಜನೆಯ ವತಿಯಿಂದ ಇದುವರೆಗೂ 9 ಕೆರೆ ಕಾಮಗಾರಿಗಳನ್ನು ಪುನಶ್ಚೇತನಗೊಳಿಸಿದ್ದು ಪ್ರಸ್ತುತ ಮತ್ತಿಹಳ್ಳಿ ಕೆರೆಯು 10 ನೇ ಕೆರೆಯಾಗಿದ್ದು ಎಲ್ಲಾ ಕೆರೆಗಳು ಮಾದರಿ ಕೆರೆಗಳಾಗಿವೆ.ಪೂಜ್ಯ ವೀರೇಂದ್ರ ಹೆಗ್ಗಡೆಯವರ ಇಂತಹ ನಿಸ್ವಾರ್ಥ ಸೇವೆ ನಿಜಕ್ಕೂ ಅತ್ಯದ್ಬುತ ಎಂದು ಶ್ಲಾಘಿಸಿದರು.ಮತ್ತಿಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಾದ ಶಿವರಾಜ್ ರವರು ಮಾತನಾಡಿ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಕಾರ್ಯಗಳು ಅತ್ಯುತ್ತಮವಾಗಿದ್ದು ಗ್ರಾಮಸ್ಥರು ಯಾವುದೇ ರಾಜಕೀಯಕ್ಕೆ ಆಸ್ಪದ ಕೊಡದೆ ಒಗ್ಗಟ್ಟಿನಿಂದ ಸಹಕಾರ ನೀಡಿದರೆ ಕೆರೆ ಅಭಿವೃದ್ದಿ ಶತಸಿದ್ದ ಎಂದು ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತುಮಕೂರು-1 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ಮಾತನಾಡಿ ಯೋಜನೆಯ ಕೆರೆ ಅಭಿವೃದ್ದಿಕಾಮಗಾರಿಯ ಕಾರ್ಯವೈಖರಿ ಹಾಗೂ ಕೆರೆ ಸ್ವಚ್ಛತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.ಕೆರೆ ಕಾಮಗಾರಿ ಗುದ್ದಲಿಪೂಜಾ ಕಾರ್ಯಕ್ರಮದಲ್ಲಿ ಮತ್ತಿಹಳ್ಳಿ ಗ್ರಾ.ಪ.ಅದ್ಯಕ್ಷರಾದ ಜ್ಯೋತಿ,ಗ್ರಾ.ಪ.ಸದಸ್ಯರಾದ ಹರೀಶ್ ಗೌಡ,ರೇಣುಕಮ್ಮ,ಹರೀಶ್,ರೂಪ,ಯೋಜನಾಧಿಕಾರಿ ಉದಯ್.ಕೆ,ಕೆರೆ ಸಮಿತಿ ಅದ್ಯಕ್ಷರಾದ ಹರೀಶ್,ಪಟೇಲ್ ಜಯಣ್ಣ,ಕೃಷಿ ಮೇಲ್ವಿಚಾರಕ ಪ್ರಮೋದ್,ಮೇಲ್ವಿಚಾರಕಿ ಅನಿತ,ಜನಜಾಗೃತಿ ವೇದಿಕೆ ಸದಸ್ಯರಾದ ಶ್ಯಾಮ್ ಸುಂದರ್,ಮಲ್ಲಿಗಪ್ಪಾಚಾರ್,ಸೇವಾಪ್ರತಿನಿಧಿ ಕಮಲಮ್ಮ ಹಾಗೂ ಮತ್ತಿಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ