KALPATHARU KRANTHI

ಹಾಲ್ಕುರಿಕೆ ಸೋಲಾರ್ ಪವರ್ ಪ್ಲಾಂಟ್ ನಿಂದ ಉಪಸ್ಥಾವರಕ್ಕೆ ವಿದ್ಯುತ್ ಲೈನ್ ಎಳೆಯಲು ರೈತರ ವಿರೋಧ,ಬೆಸ್ಕಾಂ ಸಿಬ್ಬಂದಿ ಹಾಗೂ ರೈತರ ನಡುವೆ ವಾಗ್ವಾದ

Spread the love

ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದ ಮುಜರೆ ಹೆಚ್ ಮುದ್ದೇನಹಳ್ಳಿ ಪ್ರಸಿದ್ದ ಕ್ಷೇತ್ರ ಶ್ರೀ ರೇವಣ ಸಿದ್ದೇಶ್ವರ ಬೆಟ್ಟದಲ್ಲಿ ಸರ್ಕಾರ ಮಹತ್ವಾಕಾಂಕ್ಷೇಯ ಸೋಲಾರ್ ಪವರ್ ಪ್ರಾಜೆಕ್ಟ್ ಪೂರ್ಣಗೊಳ್ಳುವ ಹಂತದಲ್ಲಿದೆ, ಶ್ರೀ ರೇವಣಸಿದ್ದೇಶ್ವರ ಬೆಟ್ಟದಿಂದ ಸೋಲಾರ್ ಕೇಂದ್ರದಿಂದ ಹಾಲ್ಕುರಿಕೆ ಗ್ರಾಮದ ಉಪಸ್ಥಾವರಕ್ಕೆ ವಿದ್ಯುತ್ ಲೈನ್ ಎಳೆಯಲು ರೈತರು ಭಾರೀ ವಿರೋಧ ವ್ಯಕ್ತಪಡಿಸಿದ್ದು, ರೈತರು ಹಾಗೂ ಬೆಸ್ಕಾಂ ಸಿಬ್ಬಂದಿಯ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ವಿದ್ಯುತ್ ಕಂಬ ನೆಡಲು ವಿರೋಧ ವ್ಯಕ್ತಪಡಿಸಿದ ರೈತರು ಬೆಸ್ಕಾಂ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.


ಬೆಸ್ಕಾಂ ಇಲಾಖೆ ಶ್ರೀ ರೇವಣಸಿದ್ದೇಶ್ವರ ಬೆಟ್ಟದ ಸೋಲಾರ್ ಪವರ್ ಪ್ಲಾಂಟ್ ನಿಂದ ಹಾಲ್ಕುರಿಕೆ ಉಪಸ್ಥಾವರಕ್ಕೆ ವಿದ್ಯುತ್ ಲೈನ್ ಎಳೆಯುವುದರಿಂದ ಸಣ್ಣ ಪುಟ್ಟ ರೈತರ ತುಂಡು ಭೂಮಿಗಳು, ವ್ಯವಸಾಯ ಮಾಡದಂತ್ತಾಗುತ್ತದೆ, ಶ್ರೀ ರೇವಣ ಸಿದ್ದೇಶ್ವರ ಬೆಟ್ಟದಿಂದ ಹಾಲ್ಕುರಿಕೆ ವರೆಗೆ ಹತ್ತಾರು ಜನ ಬಡ ರೈತರ ಜಮೀನಿನಲ್ಲಿ ರೈತರಿಗೆ ಯಾವುದೇ ಮಾಹಿತಿ ನೀಡದೇ ಲೈನ್ ಎಳೆಯುತ್ತಿದ್ದಾರೆ,ಇದರಿಂದ ನಮ್ಮ ಭೂಮಿ ಹಾಳಾಗುತ್ತದೆ, ಅಲ್ಲದೇ ತೋಟ ತುಡಿಕೆ ಮಾಡಲು ಸಾಧ್ಯವಾಗುವುದಿಲ್ಲ, ಹಾಗೂ ನಮ್ಮ ಜಮೀನುಗಳು ಹಾಲ್ಕುರಿಕೆ ಗ್ರಾಮಕ್ಕೆ ಹೊಂದಿಕೊಂಡಂತ್ತಿದ್ದು ಇದರಿಂದ ಭೂಮಿಯ ಬೆಲೆ ಕಡಿಮೆಯಾಗುತ್ತದೆ, ಯಾವುದೇ ಕಾರಣಕ್ಕೂ ವಿದ್ಯುತ್ ಕಂಬ ಹಾಕಲು ಬಿಡುವುದಿಲ್ಲ. ಸೋಲಾರ್ ಪವರ್ ಪ್ಲಾಂಟ್ ಗೆ ನಮ್ಮ ವಿರೋಧವಿಲ್ಲ, ಪ್ಲಾಂಟ್ ಸ್ಥಳದಲ್ಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳ ಬೇಕು, ಒಂದುವೇಳೆ ರೈತರ ಜಮೀನಿನಲ್ಲೇ ವಿದ್ಯುತ್ ಲೈನ್ ತೆಗೆದುಕೊಂಡು ಹೋಗಬೇಕು ಎನ್ನುವುದ್ದಾರೆ, ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.


ಯೋಜನೆಯಿಂದ ತೊಂದರೆಗೊಳಗಾದ ರೈತ ಪರಮೇಶ್ವರಯ್ಯ ಹೆಚ್.ಇ ಮಾತನಾಡಿ ನಾವೂ ಇಲ್ಲಿ ನಮ್ಮ ಪಿತ್ರಾರ್ಜಿತವಾಗಿ ಬಂದ ತುಂಡುಭೂಮಿ ಹೊಂದಿದ್ದೇವೆ ಇರುವ 20ಗುಂಟೆ ಜಾಗದಲ್ಲಿ ಮೂರ್ನಾಲ್ಕು ವಿದ್ಯುತ್ ಲೈನ್ ಎಳೆದರೆ,ನಾವೂ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ, ಅಲ್ಲದೆ ಮನೆ ನಿರ್ಮಾಣೈ೬ಯ ಮಾಡಲು ಉದೇಶಿಸಿದ್ದು ಬೆಸ್ಕಾಂ ಇಲಾಖೆ ಕಂಬ ನೆಟ್ಟು ಲೈನ್ ಎಳೆದು ಕೈ ತೊಳೆದುಕೊಳ್ಳುತ್ತಾರೆ, ಮನೆ ನಿರ್ಮಿಸಿದ್ದಾಗ ,ಲೈನ್ ಅಡ್ಡ ಬಂದರೆ, ನಮಗೆ ತೊಂದರೆಯಾಗುತ್ತದೆ,ಆಗ ನಮಗಾಗುವ ನಷ್ಟಕ್ಕೆಯಾರು ಜವಾಬ್ದಾರರು, ಇರುವ ಭೂಮಿ ಕಳೆದುಕೊಂದು ಬೀದಿಗೆ ಬೀಳಬೇಕ್ಕಾಗುತ್ತದೆ, ಆದರಿಂದ ನಮ್ಮ ಜಮೀನಿನಲ್ಲಿ ಲೈನ್ ಎಳೆಯಲು ಅವಕಾಶ ನೀಡುವುದಿಲ್ಲ, ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು,
ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಇಲಾಖೆ ಕಿರಿಯ ಅಭಿಯಂತರರಾದ ಮಂಜುನಾಥ್ ಮಾತನಾಡಿ ಸೋಲಾರ್ ಪವರ್ ಪ್ರಜೆಕ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ,ಸರ್ಕಾರದ ನಿರ್ದೇಶನದಂತೆ ಕಾಮಗಾರಿ ಮಾಡುತ್ತೇವೆ,ವಿದ್ಯುತ್ ಲೈನ್ ನಿಂದ ರೈತರು ತೊಂದರೆಯಾಗುವುದಾಗಿ ಹೇಳಿದ್ದಾರೆ, ರೈತರು ನೀಡುವ ಮಾಹಿತಿಯನ್ನ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version