KALPATHARU KRANTHI

ತಿಪಟೂರು ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಮಾರ್ಚ್ 08. “ರಾಷ್ಟ್ರೀಯ ಲೋಕ ಅದಾಲತ್, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಲು ನ್ಯಾಯಮೂರ್ತಿ ಶ್ರೀಮತಿ ಪುಷ್ಪವತಿ ಕರೆ

IMG-20250304-WA0019
Spread the love

ತಿಪಟೂರು ಮಾರ್ಚ್ 8 ರಂದು “ರಾಷ್ಟ್ರೀಯ ಲೋಕ ಅದಾಲತ್” ಅನ್ನು ಏರ್ಪಡಿಸಲಾಗಿದ್ದು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಗೌರವಾನ್ವಿತ ತಿಪಟೂರು ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ ತಿಳಿಸಿದರು


‌ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕ ಪ್ರಕಟಣೆ ನೀಡಿದ ಅವರು ದಿನಾಂಕ: 08.03.2025 ರಂದು “ರಾಷ್ಟ್ರೀಯ ಲೋಕ ಅದಾಲತ್” ಅನ್ನು ಹಮ್ಮಿಕೊಳ್ಳಲಾಗಿದ್ದು, ರಾಜಿ ಸಂಧಾನದ ಮೂಲಕ ಯಾವುದೇ ನ್ಯಾಯಾಲಯದ ಶುಲ್ಕವಿಲ್ಲದೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಇದು ಬೃಹತ್ ಆಂದೋಲನ ಹಮ್ಮಿಕೊಂಡಿದ್ದು, ನ್ಯಾಯಾಲಯ ನೀಡಿರುವ ಸುವರ್ಣ ಅವಕಾಶವನ್ನ ಸಾರ್ವಜನಿಕರು,ಹಾಗೂ ಕಕ್ಷೀದಾರರು ಬಳಸಿಕೊಳ್ಳ ಬೇಕುಎಂದು ತಿಳಿಸಿದರು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ತಿಪಟೂರು ಅಧ್ಯಕ್ಷರಾದ ಶ್ರೀ ಮಹಮದ್ ಆರಿಪುಲ್ಲ.ಸಿ.ಎಫ್ ಮಾತನಾಡಿ ಈ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಪ್ರಕರಣಗಳು ಹೆಚ್ಚು ಕಾಲಾವಕಾಶ ತೆಗೆದುಕೊಳ್ಳದೆ, ಸೌಹಾರ್ದಯುತವಾಗಿ ಮುಗಿಯಬೇಕು. ಪ್ರಕರಣಗಳನ್ನು ವಕೀಲರ ಮೂಲಕವಾಗಲಿ ಹಾಗೂ ವೈಯಕ್ತಿಕವಾಗಿ ಆಗಲಿ ಬಗೆಹರಿಸಿಕೊಳ್ಳಬಹುದು ಹಾಗೂ ಈ ಲೋಕ ಅದಾಲತ್ ನಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳನ್ನು ಯಾವುದೇ ಶುಲ್ಕವಿಲ್ಲದೆ ಕಡಿಮೆ ಕಾಲಾವಕಾಶದಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದು,ಕಾನೂನಿನ ಮೂಲಕ ಸಾರ್ವಜನಿಕರು ನ್ಯಾಯದಾನ ಪಡೆಯಬಹುದುಎಂದು ತಿಳಿಸಿದರು.
ಗೌರವಾನ್ವಿತ ಅಧಿಕ ಸಿವಿಲ್ ನ್ಯಾಯಾಧೀಶರು ಹಾಗೂ, ತಾಲೂಕು ಕಾನೂನು ಸೇವಾ ಸಮಿತಿ, ತಿಪಟೂರು ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಮಧುಶ್ರೀ ಜಿ.ಎನ್ ರವರು ಮಾತನಾಡಿ ಸದರಿ ಲೋಕ ಅದಾಲತ್ನಲ್ಲಿ ಕೌಟುಂಬಿಕ ಪ್ರಕರಣಗಳು, ಅಪಘಾತ ಪ್ರಕರಣಗಳು, ವಿಮೆ ಸಂಬಂಧಿತ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಸ್ತ್ರೀಶಕ್ತಿ ಸಂಘದವರು ಬ್ಯಾಂಕುಗಳಿಂದ ಪಡೆದ ಸಾಲದ ಪ್ರಕರಣಗಳು, ಎಂ.ಎಂ.ಡಿ.ಆರ್ ಪ್ರಕರಣಗಳು, ಪಾಲು ವಿಭಾಗ ಪ್ರಕರಣಗಳು, ಎಲ್.ಎ.ಸಿ ಹಾಗೂ ಇನ್ನಿತರ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು. ಈಗಾಗಲೇ ಸದರಿ ಇತ್ಯರ್ಥ ಪಡಿಸಿಕೊಳ್ಳಬಹುದು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್ ಗಳು ನಡೆಯುತ್ತಿದ್ದು ತಮ್ಮ ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಸದರಿ ಲೋಕ ಅದಾಲತ್ನಲ್ಲಿ ಪರಿಹರಿಸಿಕೊಳ್ಳುವಂತೆಯೂ ಹಾಗೂ ಹೆಚ್ಚಿನ ಮಾಹಿತಿಗಾಗಿ ತಮ್ಮ ತಮ್ಮ ವ್ಯಾಪ್ತಿಯ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
ಸಭೆಯಲ್ಲಿ ಶ್ರೀ ಬಿ.ಎನ್ ಅಜಯ್., ಅಧ್ಯಕ್ಷರು, ತಾಲೂಕು ವಕೀಲರ ಸಂಘ, ಶ್ರೀ ಬಿ ಮಲ್ಲಿಕಾರ್ಜುನಯ್ಯ., ಕಾರ್ಯದರ್ಶಿಗಳು, ತಾಲೂಕು ವಕೀಲರ ಸಂಘ, ತಿಪಟೂರು ರವರು ಮತ್ತು ವಕೀಲರ ಸಂಘದ ಎಲ್ಲಾ ಸದಸ್ಯ ವಕೀಲರು ಹಾಜರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version