ತಿಪಟೂರು: ತೀವ್ರ ಕುತೂಹಲ ಕೆರಳಿಸಿದ್ದ ತಿಪಟೂರು ಶಾಸಕರು ಹಾಗೂ ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾದ ಕೆ. ಷಡಕ್ಷರಿರವರ ಸ್ವ ಕ್ಷೇತ್ರ ಬೆನ್ನಾಯಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ಶಾಸಕ ಕೆ.ಷಡಕ್ಷರಿ ರವರ ಮಾರ್ಗದರ್ಶನದಂತೆ, ಚುನಾವಣೆ ನಡೆಯದೆ,ಯಾರು ಕೂಡ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೆ ಈ ಹಿಂದೆ ಇದ್ದ ನಿರ್ದೇಶಕರಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು, ಕುತೂಹಲ ಚುನಾವಣೆಗೆ ತೆರೆ ಬಿದ್ದಂತಾಗಿದೆ. ನೂತನ ನಿರ್ದೇಶಕರುಗಳಾಗಿ ಸಾಲಗಾರರ ಕ್ಷೇತ್ರದಿಂದ ಶಾಸಕರು ಹಾಗೂ ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾದ ಕೆ.ಷಡಕ್ಷರಿ,ಯವರು ಅವಿರೋಧವಾಗಿ ಆಯ್ಕೆಯಾದರು
ಅದೇ ರೀತಿ,ಬಿ.ಜಿ. ಉಮೇಶ್,ಕೆ.ಆರ್.ಮೋಹನ್ ಮಹದೇವಯ್ಯ,ಜವರಪ್ಪ, ಮಹಾಲಿಂಗಯ್ಯ,ಎಸ್. ಗುರುಸ್ವಾಮಿ,ಶಶಿಕಲಾ, ಸಿದ್ದಲಿಂಗಮ್ಮ,ಚಂದ್ರಕುಮಾರ್ ಮತ್ತು ಬಿ.ಆರ್.ಶೇಖರಯ್ಯ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಬಿ.ಎನ್. ಮಂಜುನಾಥ್ ಅವಿರೋಧವಾಗಿ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ತಿಳಿಸಿದ್ದಾರೆ.
ಹುಚ್ಚಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಬಿ.ಬಸವರಾಜ್, ಮಾಜಿ ಪ್ರಧಾನರಾದ ಎಂ.ಸಿ. ಮಂಜುನಾಥ್ ಮತ್ತು ಕಾರ್ಯದರ್ಶಿ ಮರುಳಪ್ಪ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.
ನೂತನ ನಿರ್ದೇಶಕರು ಆಯ್ಕೆ ವೇಳೆ ಪ್ರತ್ಯಕ್ಷವಾದ ಕೋತಿ ದೇವರ ದರ್ಶನವೆಂದು ಹಣ್ಣು ಹಾಗೂ ಸಿಹಿ ಅರ್ಪಿಸಿದ ಸದಸ್ಯರು:
ಬೆನ್ನಾಯ್ಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಪ್ರಕ್ರಿಯೆ ನಡೆದ ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಸದಸ್ಯರು ಸಂಭ್ರಮಾಚರಣೆ ನಡೆಸಿ ಪೂಜೆಸಲ್ಲಿಸುವ ವೇಳೆಗೆ ಅಚಾನಕ್ಕಾಗಿ ಕೋತಿಯೊಂದು ಸಹಕಾರ ಸಂಘದ ಕಚೇರಿ ಪ್ರವೇಶ ಮಾಡಿತು.ಪೂಜೆಸಲ್ಲಿಸುತ್ತಿದ್ದ ಟೇಬಲ್ ಬಳಿ ತೆರಳಿ ಪೂಜೆಗೆ ಇಟ್ಟದ ಬಾಳೆಹಣ್ಣು ಹಾಗೂ ಸಿಹಿಯನ್ನ ತಿಂದಿದೆ,ಸಹಕಾರ ಸಂಘದ ಬಳಿ ಇದ್ದ ಸದಸ್ಯರು ಹಾಗೂ ಸಿಬ್ಬಂದಿ ದೇವರ ದರ್ಶನವಾಗಿದೆ ಎಂದು ಬಾಳೆಹಣ್ಣು ಹಾಗೂ ಸಿಹಿಯನ್ನ ನೀಡಿದ್ದಾರೆ. ಹಣ್ಣು ತಿಂದ ಕೋತಿ ಅಲ್ಲಿಂದ ತೆರಳಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ