KALPATHARU KRANTHI

ಸಾಗುವಳಿ ಚೀಟಿಗಾಗಿ ತಿಪಟೂರು ತಾಲ್ಲೋಕು ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆ.

IMG-20250224-WA0090
Spread the love

ಸರ್ಕಾರ ರೈತರು ಸಾಗುವಳಿಮಾಡುತ್ತಿರುವ ಜಮೀನಿಗೆ ಬಗರ್ ಹುಕ್ಕುಂ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತರೈತ ಸಂಘ,ಕರ್ನಾಟಕ ರೈತ ಕೃಷಿ ಕಾರ್ಮಿಕ ಸಂಘಟನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ. ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ತಿಪಟೂರು ಆಡಳಿತ ಸೌಧದ ಮುಂಬಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು.
ತಿಪಟೂರುಉಪವಿಭಾಗಾಧಿಕಾರಿಗಳಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ರೈತರು ರಾಜ್ಯಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತರೈತ ಸಂಘ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಮಾತನಾಡಿ ರಾಜ್ಯದಲ್ಲಿ ಸರ್ಕಾರ ಬಗರ್ ಹುಕ್ಕು ಸಾಗುವಳಿ ನೀಡಲು ಅರ್ಜಿ ಆಹ್ವಾನ ಮಾಡಿ ದಶಕಗಳೆ ಕಳೆಯುತ್ತಿವೆ, ಆದರೆ ಸಾಗುವಳಿ ಚೀಟಿ ಪಡೆಯುವ ರೈತರ ಕನಸು ಮಾರೀಚಿಕೆಯಾಗಿದ್ದು, ರೈತರು ಭ್ರಮನಿರಸನಗೊಂಡಿದ್ದಾರೆ,ಸರ್ಕಾರಸಾಗುವಳಿಗೆ ಪತ್ರ ನೀಡಲು ವಿಧಿಸಿರುವ ಷರತ್ತುಗಳು ದೋಷಪೂರಿತವಾಗಿದ್ದು, ಕಳೆದ ಇಪತ್ತು ಮುವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಅನ್ಯಾಯವಾಗುತ್ತಿದೆ, ಸರ್ಕಾರ ಕೂಡಲೇ,ಸರ್ಕಾರಿಗೋಮಾಳ,ಹುಲ್ಲುಬನ್ನಿ ಖರಾಬು, ಸೇದಿವನ,ಮುಂಜೂರಿಗೆ ಅವಕಾಶ ನೀಡಬೇಕು,ಬಡರೈತರು,ಅಲ್ಪಸ್ವಲ್ಪ ಭೂಮಿ ಉಳಿಮೆಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ,ಆದರೆ ಸರ್ಕಾರ ಭೂಮಿ ಮುಂಜೂರಿಗೆ ಅವೈಜ್ಞಾನಿಕ ನಿಯಮ ಹೇರಿ ಬಡವರ ಜೀವನಕ್ಕೆ ಮಣ್ಣುಹಾಕಲು ಹೊರಟಿದೆ,ಇಪ್ಪತ್ತು ಮುವತ್ತು ವರ್ಷಗಳಿಂದ ಜಮೀನು ಉಳಿಮೆ ಮಾಡಿರುವ,ಮುಂಜೂರಿ ಇಲ್ಲದೆ ಪರದಾಡುತ್ತಿದ್ದಾರೆ,ಜಮೀನು ಇಲ್ಲ,ಜಮೀನಿಗಾಗಿ ಇಡೀ ಜೀವನ ಸವೆಸಿರುವ ರೈತ,ಬೀದಿಗೆ ಬೀಳುವಂತ್ತಾಗಿದ್ದು ಸರ್ಕಾರ ಬಡರೈತರಿಗೆ ಜಮೀನು ಮಂಜೂರು ಮಾಡಬೇಕು ಅರಣ್ಯದಂಚಿನಲ್ಲಿ ಹಲವಾರು ವರ್ಷಗಳಿಂದ ಭೂಮಿ ಉಳಿಮೆ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರನ್ನ ಒಕ್ಕಲೆಬಿಸಲು,ಅರಣ್ಯ ಇಲಾಖೆ ಮುಂದಾಗಿದ್ದು, ಜೀವನಾಧಾರಕ್ಕೆ ಜಮೀನು ಉಳಿಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡ ಬೇಕು ಎಂದು ಒತ್ತಾಯಿಸಿದರು.

ಸೌರ್ಹಾರ್ದ ತಿಪಟೂರು ವೇದಿಕೆ ಅಧ್ಯಕ್ಷ ಅಲ್ಲಾಭಕಾಷ್, ಮಾತನಾಡಿ,ಆಳುವ ಸರ್ಕಾರಗಳು ಬಡವರು ರೈತರ ಪರವಾಗಿ ಆಡಳಿತ ಮಾಡಬೇಕು, ಬಡವರಿಗೆ ಭೂಮಿ ನೀಡಿದರೆ ಇಡೀ ಅವರ ಕುಟುಂಬಕ್ಕೆ ಅನ್ನದೊರೆಯುತ್ತದೆ,ತಲೆಮಾರುಗಳಿಂದ ಭೂಮಿಯನ್ನ ನಂಬಿ ಬದುಕಿರುವ,ದಲಿತರು ಹಿಂದುಳಿದವರು,ಬಡವರು, ಭೂಮಿ ಇಲ್ಲದೆ,ಜೀವನ ಮೂರಾಬಟ್ಟೆಯಾಗಿದೆ.ನಗರ ಪ್ರದೇಶಕ್ಕೆ 5ಕಿಲೋಮಿಟರ್ ವ್ಯಾಪ್ತಿ ನಿಗದಿಪಡಿಸಿರುವುದು ಸರಿಯಲ್ಲ,ಗ್ರಾಮೀಣ ಭಾಗದಲ್ಲಿ ಬಡವರು ಉಳಿಮೆ ಮಾಡಿರುವುದು ಬಹುತೇಕ ಗೋಮಾಳ, ಸೇಂದಿವನ,ಹುಲ್ಲುಬನ್ನಿ ಖರಾಬುಗಳೆ ಜಾಸ್ತಿ, ಆದರೇ ಸರ್ಕಾರ ಮುಂಜೂರಿ ನೀಡದೆ,ಬಡವರ ವಿರೋಧಿಯಾದ ಕಾನೂನು ರೂಪಿಸಿದೆ.ಬಡವರ ಪರವಾದ ಮುಖ್ಯಮಂತ್ರಿಗಳು ಏನ್ನುವುದಾದರೆ, ಬಡವರಿಗೆ ಭೂಮಿ ಮಂಜೂರು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು
ಪ್ರತಿಭಟನೆಯಲ್ಲಿ ಪ್ರಾಂತ್ಯ ರೈತರ ಸಂಘದ ಅಧ್ಯಕ್ಷ.ಮಲ್ಲಿಕಾರ್ಜುನಯ್ಯ,ಸಂಚಾಲಕಿ ರಾಜಮ್ಮ,ರೈತ ಮುಖಂಡರಾದ
ಬಳುವನೇರಲುಸಿದ್ದಯ್ಯ.ಕಾರ್ಯದರ್ಶಿ,ಸುಧಾಕರ್,ಕೊಟ್ಟೂರಪ್ಪ,ಮಂಜುನಾಥ್ ಮೀಸೆತಿಮ್ಮನಹಳ್ಳಿ,ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version