KALPATHARU KRANTHI

ಅಚಲ ಶ್ರದ್ದೆಯಿಂದ ಮಾತ್ರ ಜ್ಞಾನವಂತರಾಗಲು ಸಾಧ್ಯ:ಶ್ರೀಶ್ರೀ ಇಮ್ಮಡಿ ಕರಿಬಸವ ದೇಶೀಕೇಂದ್ರ ಮಹಾಸ್ವಾಮೀಜಿ

IMG-20250222-WA0009
Spread the love

ತಿಪಟೂರು.ವಿದ್ಯಾರ್ಥಿಗಳು ಆಚಲ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು ಆಗ ಮಾತ್ರ ಜ್ಞಾನವಂತರಾಗಲು ಸಾಧ್ಯ ಆಧುನಿಕ ಸೌಲಭ್ಯಗಳಿಂದ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಏಕಾಗ್ರತೆ ಕಡಿಮೆಯಾಗುತ್ತಿದೆ. ವಿಕಾಗ್ರತೆಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ಶ್ರೀ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರತಿಭೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿಡ್ಲೆಹಳ್ಳಿ ಮಹಾಸಂಸ್ಥಾನ ಮಠ ಶ್ರೀ ಗುರುಕುಲಾನಂದಾಶ್ರಮದ ಸದ್ಗುರು ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳು ಕರೆ ನೀಡಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಲೇಖಕರೂ, ಸ್ವದೇಶಿ ಜಾಗರಣಾ ವೇದಿಕೆ, ಬಿಳಿಗೆರೆಯ ಪ್ರತಾಪ್ ಸಿಂಗ್‌, ಮಾತನಾಡಿ ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳಿಗೆ ಯಾರುಆದರ್ಶಪ್ರಾಯರಾಗುತ್ತಿದ್ದಾರೆ ಅವರ ಆಲೋಚನೆಗಳು ಯಾವ ದಿಕ್ಕಿನಲ್ಲಿಸಾಗಿವೆಎಂಬವಿಚಾರವಾಗಿ ವಿಶೇಷ ಉಪನ್ಯಾಸ ನೀಡಿ ಸರ್ಕಸ್ ಹುಲಿಗಳನ್ನು ಕಾಡಿಗೆ ಬಿಟ್ಟಾಗ ಅವುಗಳ ದಾರುಣ ಅಂತ್ಯದ ಪ್ರಸಂಗವನ್ನು ವಿವರಿಸಿ. ಈ ದೇಶಕ್ಕಾಗಿ ದುಡಿದ, ನಮ್ಮ ಇಂದಿನ ಸುಖಕ್ಕಾಗಿ ತ್ಯಾಗ ಮಾಡಿದ, ತಮ್ಮ ಬದುಕನ್ನು ರಾಷ್ಟ್ರಸೇವೆಗೆ ಮುಡುಪಾಗಿಟ್ಟ ಮಹನೀಯರು ಅಬ್ದುಲ್ ಕಲಾಂರಂತಹ ರಾಷ್ಟ್ರನಾಯಕರು ಇಂದಿನ ಯುವ ವಿದ್ಯಾರ್ಥಿಗಳ ಪ್ರೇರಣೆಯಾಗಬೇಕೆಂದು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಸಂಯೋಜನಾಧಿಕಾರಿಗಳಾದ ಶ್ರೀ ಎಂ. ಮಂಜುನಾಥ್ ಗುರುಕುಲ ಪರಂಪರೆಯಲ್ಲಿ ವಿದ್ಯಾಭ್ಯಾಸ ಹೊಂದಿದ ವಿದ್ಯಾರ್ಥಿಗಳಲ್ಲಿ ವಿಶೇಷ ಸಂಸ್ಕಾರ, ಸೇವಾಗುಣ, ಸಾಧನೆಯ ಭಲವನ್ನು ಕಾಣಬಹುದು ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಮಾಡಿ ಮಾತನಾಡಿದ ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾದ ಟಿ.ಎಸ್.ದಯಾನಂದ್‌ರವರು ಪೋಷಕರು ಮಕ್ಕಳಿಗೆ ಅಂಕಗಳಿಸುವಂತೆ ಒತ್ತಡ ಹೇರಬಾರದು ಅವರಿಗೆ ಕುಳಿತು ಓದುವ ಒಳ್ಳೆಯ ವಾತಾವರಣ ನಿರ್ಮಾಣಮಾಡಿ ವಿಧ್ಯಾರ್ಥಿಗಳಲ್ಲಿ ಸಾಧಿಸುವ ಛಲವನ್ನು ಉಂಟುಮಾಡಬಹುದು ತಮ್ಮ ಪುತ್ರ ಇಡೀರಾಜ್ಯಕ್ಕೆ ಪಿ.ಯು.ಸಿ ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್‌ ಗಳಿಸಿದ್ದನ್ನು ಈ ಸಂದರ್ಭದಲ್ಲಿ ಉದಾಹರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದ ಹಿರಿಯ ಕೃಷಿಕರೂ ಹಾಗೂ ತಾಲ್ಲೋಕಿನ ಪಾರಂಪರಿಕ ನಾಟಿ ವೈದ್ಯರಾಗಿರುವ, ಅಸ್ತಮಾ ಕಾಯಿಲೆಗೆ ಸಹಸ್ರಾರು ಜನರಿಗೆ ಉಚಿತ ಔಷದೋಪಚಾರ ನೀಡುತ್ತಿರುವ ವಿ. ಮಲ್ಲೇನಹಳ್ಳಿಯ ಶ್ರೀ ಎಂ.ಎನ್. ಮಲ್ಲಿಕಾರ್ಜುನಯ್ಯನವರನ್ನು ಗೌರವಿಸಲಾಯಿತು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಸಿ.ಎನ್. ಸಿದ್ದೇಶ್ವ‌ರ ರವರು ಮಾತನಾಡಿ ಶ್ರೀ ಗುರುಕುಲಾನಂದಾಶ್ರಮವು ಶತಮಾನಗಳಿಂದ ಸರ್ಕಾರದ ಯಾವುದೇ ಹಣಕಾಸಿನ ನೆರವು ಪಡೆಯದೇ ಯಾವುದೇ ಜಾತಿ ಬೇಧವಿಲ್ಲದೇ, ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಸೇವೆ ಸಲ್ಲಿಸುತ್ತಿದ್ದು ಇಲ್ಲಿ ವಿದ್ಯಭ್ಯಾಸ ಹೊಂದಿದ ವಿದ್ಯಾರ್ಥಿಗಳ ವ್ಯಕ್ತಿತ್ವ ಉನ್ನತದರ್ಜೆಯದ್ದಾಗಿರುತ್ತದೆ ಎಂದರು.ಮುಖ್ಯ ಶಿಕ್ಷಕಿ ಶ್ರೀಮತಿ ಲತಾಮಣಿ ಸ್ವಾಗತಿಸಿ ಕಾರ್ಯಕ್ರಮವನ್ನು ಶ್ರೀಮತಿ ಶಾಂತಲಕ್ಷ್ಮಿ ನಿರೂಪಿಸಿ, ಓಂಕಾರಮೂರ್ತಿ ವಂದನಾರ್ಪಣೆ ಮಾಡಿದರು. ಆಡಳಿತಾಧಿಕಾರಿ ವಿ.ಬಿ. ಮಹಾಲಿಂಗಯ್ಯ ಮತ್ತಿತರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೇರವೇರಿದವು.

Exit mobile version