ತಿಪಟೂರು,:ಭಾಗದಯುವಜನತೆಯ ಉದ್ಯೋಗಾರ್ಹತೆಹೆಚ್ಚಿಸಲು ಇಲ್ಲಿನ ಸತ್ಯಕುಮಾರ್ ರಿಲೀಫ್
ಫೌಂಡೇಷನ್ ವತಿಯಿಂದ ಇಲ್ಲಿ ಸ್ಥಾಪಿಸಲಾಗಿರುವ ಸಂಪೂರ್ಣ ಉಚಿತ ಕೌಶಲತರಬೇತಿ ಕೇಂದ್ರ ಕಾರ್ಯಾರಂಭಗೊಂಡಿದ್ದು.ಮೊದಲ ಬ್ಯಾಚಿನ ತರಬೇತಿ ಕಾರ್ಯಗಾರಕ್ಕೆ ತಿಪಟೂರು ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು.
ಶ್ರೀಸತ್ಯಕುಮಾರ್ ರಿಲೀಫ್ ಫೌಂಡೇಷನ್,ಎಂ.ಜಿ.ಎಸ್.ಪಿ ಆರ್ .ಹಾಗೂ ಉನ್ನತಿ ಪ್ರತಿಷ್ಠಾನ, ರಾಷ್ಟ್ರೀಯ ಸ್ಕಿಲ್ ಡೆವಲಪ್ ಮೆಂಟಲ್ ಕೌನ್ಸಿಲ್ ಸಹಯೋಗದಲ್ಲಿ ಉದ್ಯೋಗ ಕೌಶಲ್ಯ ತರಬೇತಿನೀಡುತ್ತಿದ್ದು,ಶೇಕಡ ನೂರರಷ್ಟು ಉದ್ಯೋಗ ಗ್ಯಾರಂಟಿಯೊಂದಿಗೆ ರೂಪಿಸಿರುವ 35 ದಿನಗಳಉಚಿತ ತರಬೇತಿ ಕಾರ್ಯಕ್ರಮವಾಗಿದೆ.ಎಸ್‌ಎಸ್‌ಎಲ್‌ಸಿ, ಡಿಪ್ಲೊಮಾ ಮತ್ತು ಪದವಿ
ಪಾಸ್ ಅಥವಾ ಫೇಲ್ ಆದವರಿಗೆ,ತರಬೇತಿಯಲ್ಲಿ ಪಾಲ್ಗೊಳ್ಳಲು,ಅವಕಾಶವಿದೆ.
ಟ್ಯಾಲಿ, ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್,ಜಿಎಸ್‌ಟಿ, ಜೀವನ ಕೌಶಲ್ಯಗಳು, ಆಪ್ತಸಮಾಲೋಚನೆ ಹಾಗೂ ಆತ್ಮವಿಶ್ವಾಸವೃದ್ಧಿಗೆ ಆದ್ಯತೆ ನೀಡುವ ಮೂಲಕಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಸಜ್ಜುಗೊಳಿಸ
ಲಾಗುತ್ತದೆ ಎಂದು ಖ್ಯಾತ ವೈದ್ಯರು ಹಾಗೂ ಶ್ರೀ ಸತ್ಯಕುಮಾರ್ ರೀಲಿಫ್ ಫೌಂಡೇಷನ್ ಮುಖ್ಯಸ್ಥರಾದ ಶ್ರೀಧರ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಕ್ಷೇತ್ರದ ಶಾಸಕ ಕೆ.ಷಡಕ್ಷರಿ ಅವರು
ಮಾತನಾಡಿ, “ಸತ್ಯಕುಮಾರ್ ಪ್ರತಿಷ್ಠಾನವ,ಎಂಜೆ ಎಸ್‌ಪಿ ಮತ್ತು ಉನ್ನತಿಸಂಸ್ಥೆಯ ಸಹಯೋಗದಲ್ಲಿ ಈ ಕೌಶಲ್ಯಕೇಂದ್ರ ಸ್ಥಾಪಿಸಿ ಶ್ಲಾಘನೀಯ ಕಾರ್ಯಮಾಡಿದೆ. ಪ್ರಸ್ತುತ ಉದ್ದಿಮೆಗಳ ನಿರೀಕ್ಷೆಗಳಿಗೆ ಅನು ಗುಣವಾಗಿ ಯುವಜನತೆಯಲ್ಲಿಕೌಶಲ ಗಳನ್ನು ಮೈಗೂಡಿಸಬೇಕೆಂಬುದೇಈ ಉಪಕ್ರಮದ ಉದ್ದೇಶವಾಗಿದ್ದು, ಇಲ್ಲಿನಯುವಜನತೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಉನ್ನತಿ ಪ್ರತಿಷ್ಠಾನವು ರಾಷ್ಟ್ರೀಯಕೌಶಲಾಭಿವೃದ್ಧಿ ಮಂಡಳಿಯಿಂದ(ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟಲ್ಕೌನ್ಸಿಲ್) ಮಾನ್ಯತೆ ಹೊಂದಿದ್ದು, ದೇಶದಾದ್ಯಂತ 38 ಕೌಶಲ ಕೇಂದ್ರಗಳನ್ನು ಸ್ಥಾಪಿಸಿದೆ.ಸಂಸ್ಥೆಯು ವಿವಿಧ ಮುಂಚೂಣಿ ಕಂಪನಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು,ಈವರೆಗೆ 70,000ಕ್ಕೂಹೆಚ್ಚುಜನರನ್ನುತರಬೇತಿಯೊಂದಿಗೆ ಸಜ್ಜುಗೊಳಿಸಿಉದ್ಯೋಗಲಭ್ಯವಾಗಿಸಿದೆ ಎಂದು ಎಂ ಜೆ ಎಸ್ಪಿ ಆರ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಎಂ ಜೆ ಶ್ರೀಕಾಂತ್ ಹೇಳಿದರು.ಶಂಕರ ಕಿಯೋನಿಕ್ಸ್ ಸಂಸ್ಥೆಯ ಶಿವಪ್ರಕಾಶ್,,ಉನ್ನತಿತರಬೇತುದಾರರಾದ ತೃಪ್ತಿ, ಚೇತನಾಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ