ತಿಪಟೂರು : ನಗರದ ಸಾರ್ವಜನಿಕ ಆಸ್ವತ್ರೆಯ ತಾಯಿ ಮತ್ತು ಮಕ್ಕಳ ಆಸ್ವತ್ರೆಗೆ ಭೇಟಿ ಮತ್ತು ಪರೀಶೀಲನೆ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸಮಸ್ಯೆಗಳ ಸುರಿಮಳೆಯನ್ನೇ ಎದುರಿಸ ಬೇಕಾಯಿತು. ಆಸ್ಪತ್ರೆಯ ಸಿಬ್ಬಂದಿಗಳು
ಸಾರ್ವಜನಿಕ ಆಸ್ವತ್ರೆಯಲ್ಲಿ ಸಿಬ್ಬಂದಿಗಳ ಕೊರತೆ, ವೈದ್ಯರ ಕೊರತೆ, ರಕ್ಷಣೆ ಕೊರತೆ, ರೋಗಿಗಳ ಸಂಬಂಧಿಕರಿಗೆ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ವಿಶ್ರಾಂತಿ ಸ್ಥಳ, ಬಿಸಿ ನೀರಿನ ಸಮಸ್ಯೆಗೆ ಸೋಲಾರ್ ವ್ಯವಸ್ಥೆ, ಆಧುನಿಕತೆ ಸೌಲಭ್ಯವುಳ್ಳ ಡಾರ್ಮಿಂಟರಿ ಕಟ್ಟಡದ ವ್ಯವಸ್ಥೆ, ಎಕ್ಸರೇ ಯಂತ್ರ, ಸಿಟಿ ಸ್ಕಾನಿಂಗ್ ಎಮ್‌ಆರ್‌ಐ ಯಂತ್ರಗಳ ತುರ್ತಾಗಿ ಬೇಕಾಗಿದೆ,ಎಂದು ಆಸ್ವತ್ರೆಯ ಆಡಳಿತಾಧಿಕಾರಿ ಶಿವಕುಮಾರ್ ತಿಳಿಸಿದರು,
ಕಣ್ಣಿಗೆ ಸಂಬಂಧಿಸಿದ ರೇಸರ್ ಚಿಕಿತ್ಸೆಗೆ ಅವಶ್ಯಕ ಸಾಧನಗಳು, ಕಲ್ಲು ಗಣಿ, ಗಾರ್ಮೇಂಟ್ಸ್ನಲ್ಲಿ ಕೂಲಿ ಕಾರ್ಮೀಕರು ಹೆಚ್ಚಳವಿರುವುದರಿಂದ ತಾಲ್ಲೂಕು ಆಸ್ವತ್ರೆಗೆ ಚರ್ಮ ರೋಗ ತಜ್ಞರ ಹುದ್ದೆ ಅವಶ್ಯಕತೆಯಿರುತ್ತದೆ ಆದರೆ ಇಲ್ಲಿ ಮುಂಚೂರು ಆಗಿರುವುದಿಲ್ಲ ತುರ್ತಾಗಿ ಬೇಕಾಗಿರುತ್ತದೆ ಎಂದು ಮನವಿ ಮಾಡಿದರು ತಿಪಟೂರು ಸಾರ್ವಜನಿಕ ಆಸ್ಪತ್ರೆ ಮೂರ್ನಾಲ್ಕು ಜಿಲ್ಲೆಗಳ ಗಡಿಭಾಗಕ್ಕೆ ಪ್ರಮುಖ ಆಸ್ಪತ್ರೆಯಾಗಿದ್ದು, ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಹೊರರೋಗಿಗಳ ಚಿಕಿತ್ಸೆಗಾಗಿ ಬರುವ ಕಾರಣ,ವೈದ್ಯರೂ ಹಾಗೂ ವೈದ್ಯಕೇತರ ಸಿಬ್ಬಂದಿಯ ಕೊರತೆಇದೆ, ತಿಪಟೂರು ಉಪವಿಭಾಗ ಕೇಂದ್ರವಾಗಿರುವ ಕಾರಣ ಉಪವಿಭಾಗ ಆಸ್ಪತ್ರೆಯಾಗಿ ಮೆಲ್ದಾರ್ಜೆಗೇರಿಸಲು,ಶಾಸಕರು ಹಾಗೂ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿಗಳ ಮನವಿಗೆ ಸಚಿವ ಉತ್ತರ ಮಾತ್ರನಿರಾಶಾಧಾಯಕವಾಗಿತ್ತು, ತಿಪಟೂರು ಸಾರ್ವಜನಿಕ ಆಸ್ಪತ್ರೆ ಚೆನ್ನಾಗಿನಡೆಯುತ್ತಿದೆ,ಹೊರರೋಗಿಗಳು ಹೆಚ್ಚಾಗಿರುವ ಕಾರಣ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚೆ ಮಾಡಿ ಮೆಡಿಕಲ್ ಕಾಲೇಜು ಆರಂಭಿಸಲು ಪ್ರಯತ್ನಿಸಿದರೆ ಸಹಕಾರ ನೀಡುವುದ್ದಾಗಿ ತಿಳಿಸಿದರು.
.ಶಾಸಕ ಕೆ.ಷಡಕ್ಷರಿ ಮಾತ್ರ ನಮ್ಮ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆಸ್ಪತ್ರೆಯಷ್ಟೇ ಒತ್ತಡವಿದೆ,ನಾವೂ ಆಸ್ಪತ್ರೆಗೆ ಅಗತ್ಯವಿರುವ ಜಾಗ ಕೊಡುತ್ತೇವೆ,ಗಣಿ ಪ್ರದೇಶ ಪುನರ್ ಅಭಿವೃದ್ದಿ ಹಣವೂ ಸಹ ಇದೆ ಈ ಭಾಗದ ಜನ ತುರ್ತು ಸಂದರ್ಭಗಳಲ್ಲಿ 70ಕಿಲೋ ಮೀಟರ್ ಪ್ರಯಾಣಿಸಬೇಕು,ಆದರಿಂದ 70ರಿಂದ 80ಕಿಲೋ ಮೀಟರ್ ವ್ಯಾಪ್ತಿಯ ಜನರಿಗೆ ಅನುಕೂಲವಾಗುವಂತೆ ಆಸ್ಪತ್ರೆ ಮುಂಜೂರು ಮಾಡಲು ಮನವಿ ಮಾಡಿದರು,ಆಡಳಿತಾಧಿಕಾರಿ ಶಿವಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಧಿಕಾ, ಇಒ ಸುದರ್ಶನ್, ತಹಶೀಲ್ದಾರ್ ಪವನ್‌ಕುಮಾರ್, ಡಿವೈಎಸ್‌ಪಿ ವಿನಾಯಕ ಶೆಟಗೇರಿ, ನಗರ ಪೋಲೀಸ್ ವೃತ್ತ ನಿರೀಕ್ಷಕ ವೆಂಕಟೇಶ್, ಗ್ಯಾರಂಟಿ ಯೋಜನೆಯ ತಾ ಅಧ್ಯಕ್ಷ ಕಾಂತರಾಜು ಮತ್ತಿತ್ತರು ಹಾಜರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ