ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಕೆರಗೋಡಿರಂಗಾಪುರ,ಚಿಕ್ಕರಂಗಾಪುರ
ಕೆಂಕೆರೆ,ತಡಸೂರ,ನಾಗರಘಟ್ಟ,ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಸುಮಾರ ಹತ್ತಕ್ಕೂ ಹೆಚ್ಚು ರೈತರ ತೋಟಗಳಲ್ಲಿ ಪಂಪ್ ಸೆಟ್ ಕೇಬಲ್ ಹಾಗೂ ಸ್ಟಟರ್ ಕಳವು ಮಾಡಲಾಗಿದೆ,
ರಾತ್ರಿವೇಳೆ ತೋಟಗಳಲ್ಲಿ ಕಳ್ಳರು,ಕೇಬಲ್ ಹಾಗೂ ಸ್ಟಟರ್ ಕಳವು ಮಾಡಿದ್ದಾರೆ ಸುಮಾರು 3ಲಕ್ಷ ಕ್ಕೂ ಹೆಚ್ಚು ಮೌಲ್ಯದ ಕೇಬಲ್ ಸ್ಟಟರ್ ಕಳವು ಮಾಡಿದ್ದಾರೆ,ರಂಗಾಪುರ ಗ್ರಾಮದ ಚಂದ್ರಶೇಖರಯ್ಯ.ಮಂಜುನಾಥ್,ರೇಣುಕಾರಾಧ್ಯ,ರೂಪ.ದೇವರಾಜು,ರಾಜಶೇಖರಯ್ಯ,ಶಂಕರಮೂರ್ತಿ,ಸೇರಿದಂತೆ ಅನೇಕ ರೈತರ ತೋಟಗಳಲ್ಲಿ ರಾತ್ರಿ ಕಳ್ಳರು ಕೇಬಲ್,ಹಾಗೂ ಸ್ಟಟರ್ ಕಳವುಮಾಡಲಾಗಿದ್ದು, ರೈತರಲ್ಲಿ ತೀವ್ರ ಆತಂಕ ಉಂಟುಮಾಡಿದೆ,
ತಿಪಟೂರು ತಾಲ್ಲೂಕಿನ ಕಸಬಾಹೋಬಳಿ,ಕಿಬ್ಬನಹಳ್ಳಿ ಹೋಬಳಿ .ನೊಣವಿನಕೆರೆ ಹೋಬಳಿ,ಹೊನ್ನವಳ್ಳಿ ಹೋಬಳಿ ಭಾಗದ ರೈತರ ತೋಟಗಳಲ್ಲಿ ಪಂಪ್ ಸೆಟ್ ಕೇಬಲ್ ಹಾಗೂ ಮೋಟರ್ ಸ್ಟಟರ್ ಕಳ್ಳತನವಾಗುತ್ತಿವೆ,ಬೇಸಿಗೆ ಕಾಲವಾದ ಕಾರಣ,ರೈತರು,ವಿದ್ಯುತ್ ಸಮಸ್ಯೆ ನೀರಿನ ಆಭಾವದಿಂದ ತೀವ್ರ ಸಮಸ್ಯೆಗೆ ಸಿಲುಕಿರುವ,ರೈತರು ಕಳ್ಳರ ಹಾವಳಿಯಿಂದ ಕಂಗೆಟ್ಟಿದ್ದಾರೆ,ಪೊಲೀಸ್ ಇಲಾಖೆ ಕೂಡಲೇ ಕಳ್ಳರ ಹಾವಳಿಗೆ ಕಡಿವಾಣಹಾಕಬೇಕು ಒತ್ತಾಯಿಸಿ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ರವಿಕುಮಾರ್ ರವರಿಗೆ ರಂಗಾಪುರ.ಚಿಕ್ಕರಂಗಾಪುರ,ಕೆರಗೋಡಿ ಸುತ್ತಮುತ್ತಲ ರೈತರು, ಮನವಿ ಪತ್ರಸಲ್ಲಿಸಿ ಕಾನೂನು ಕ್ರಮಕೈಗೊಳ್ಳಲು ಒತ್ತಾಯಿಸಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ