KALPATHARU KRANTHI

ರಾಷ್ಟ್ರೀಯ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟದ 3ನೇ ದಿನದ ಪಂದ್ಯಾವಳಿ ಉದ್ಘಾಟಿಸಿದ ಜೆಡಿಎಸ್ ಮುಖಂಡ ಎನ್ .ಆರ್ ಸಂತೋಷ್

Spread the love

ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೊನಲು ಬೆಳಕಿನ ಪುರುಷ ಮಹಿಳೆಯರ ವಾಲಿಬಾಲ್ ಕ್ರೀಡಾಕೂಟದ 3ನೇ ದಿನದ ಪಂದ್ಯಾವಳಿಯನ್ನ ಜೆಡಿಎಸ್ ಮುಖಂಡ ಎನ್.ಆರ್ ಸಂತೋಷ್ ಉದ್ಘಾಟಿಸಿದರು


ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಎನ್.ಆರ್ ಸಂತೋಷ್ ಕ್ರೀಡೆ ಮನುಷ್ಯನ ಆರೋಗ್ಯಕ್ಕೆ ಸಹಕಾರಿ,ದೇಹ ಸದೃಡವಾಗಿದರೆ,ಮನಸ್ಸು,ಆರೋಗ್ಯವಾಗುತ್ತದೆ ಆದರಿಂದ ಕ್ರೀಡೆಗಳಿಗೆ ಹೆಚ್ಚು ಆಸಕ್ತ ಬೆಳಸಿಕೊಳ್ಳಬೇಕು.ತಿಪಟೂರು ಕ್ರೀಡೆಗೆ ಪ್ರೋತ್ಸಹ ನೀಡುತ್ತಾ ಬಂದಿರುವ ಊರು. ನಮ್ಮ ಜನ್ಮ ಭೂಮಿ ತಿಪಟೂರು ಕರ್ಮಭೂಮಿ ಅರಸೀಕೆರೆ,ಜನರ ಜೀವನಾಡಿ ಕೊಬ್ಬರಿ,ಕೊಬ್ಬರಿಗೆ ಜೀಯೋ ಟ್ಯಾಗ್ ದೊರೆಯುವಂತೆ ಹೋರಾಟ ಮಾಡಬೇಕು, ನಮ್ಮ ಕೊಬ್ಬರಿಗೆ ಜಿಯೋ ಟ್ಯಾಗ್ ದೊರೆತರೆ ಬೆಲೆ ಸ್ಥಿರತೆ ದೊರೆಯುತ್ತದೆ, ಈ ನಿಟ್ಟಿನಲ್ಲಿ ನಾವೂ ಕೆಲಸ ಮಾಡೋಣ,ನಮ್ಮ ಸಹಕಾರ ಯಾವಾಲೂ ನಿಮ್ಮ ಜೊತೆಇರುತ್ತೆ,ತಿಪಟೂರು ಜಿಲ್ಲಾ ಕೇಂದ್ರವಾಗುವ ಅರ್ಹತೆಯಿಂದು.ಕೆಲವೇ ವರ್ಷಗಳಲ್ಲಿ ತಿಪಟೂರು ಜಿಲ್ಲಾಕೇಂದ್ರವಾಗುವ ಸಂಶವಿಲ್ಲ,ನಮ್ಮ ಜನನಾಯಕರ ಇಚ್ಚಾಶಕ್ತಿಯ ಕೊರತೆಯಿಂದ ಅರ್ಹತೆಇದ್ದರೂ ಜಿಲ್ಲಾಸ್ಥಾನಮಾನ ದೊರೆಯಲು ಸಾಧ್ಯವಾಗಿಲ್ಲ.ತಿಪಟೂರು ಅರಸೀಕೆರೆಯಲ್ಲಿ ಹೆಚ್ಚು ಹೆಚ್ಚು ಉನ್ನತ ವ್ಯಾಸಂಗದ ಶಾಲಾಕಾಲೇಜುಗಳು ಸ್ಥಾಪನೆತಾಗಬೇಕು, ನಮ್ಮ ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಹೆಚ್ಚು ಐಎಎಸ್.ಕೆಎಎಸ್ ಸ್ಥಾನಗಳನ್ನ ಪಡೆಯುವಂತ್ತಾದಲಿ ಎಂದು ತಿಳಿಸಿದರು


ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾ ಧರಣೇಶ್,ಅಖಿಲ ಭಾರತೀಯ ವೀರಶೈವ ಮಹಾಸಭಾ ಹಾಸನ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್.ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ,ನಗರಸಭಾ ಸದಸ್ಯರಾದ ರಾಮ್ ಮೋಹನ್.ಶಶಿಕಿರಣ್.ಮುಖಂಡರಾದ, ವೋಡೊ ಪೋನ್ ಚಂದ್ರು,ರೈತ ಸಂಘದ ಮುಖಂಡ ಯೋಗನಂದಮೂರ್ತಿ ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version