KALPATHARU KRANTHI

ಮನುಕುಲವನು ಜಾಗೃತಗೊಳಿಸಿದ ಶ್ರೀ ಮಡಿವಾಳ ಮಾಚಿದೇವ

DSC_9514

ಕಾರ್ಯಕ್ರಮದಲ್ಲಿ ಜಗದ್ಗುರು ಡಾ. ಶ್ರೀ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿಗಳವರು, ಯಡೆಯೂರು ಶ್ರೀ ಮೂಡಲಗಿರಿಯವರು, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಮುದಿಮುಡು ರಂಗಸ್ವಾಮಯ್ಯ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯರಾದ ಸಂ.ಕೃ. ಶ್ರೀಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಲಿಂಗಮೂರ್ತಿ, ನಿಟ್ಟೂರು ಸಮಾಜ ಸೇವಕರಾದ ಎನ್. ಗಂಗಾಧರ್ ಮಡಿವಾಳ್ , ಸಂಪಿಗೆ ಶ್ರೀ ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷರು , ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಜಿಲ್ಲಾ ಶ್ರೀ ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷರು , ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು, ಉಪಸ್ಥಿತರಿದ್ದರು. ಮಡಿವಾಳ ಸಮುದಾಯದವರು ಮತ್ತು ಸಾರ್ವಜನಿಕರ ಸದರಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

Spread the love

ತುರುವೇಕೆರೆ: ಮಡಿವಾಳ ಮಾಚಿದೇವ ಕೇವಲ ಮಡಿವಾಳ ಸಮುದಾಯಕ್ಕೆ ಸೀಮಿತವಾಗದೆ ಇಡೀ ಮನುಕುಲವನ್ನು ಜಾಗೃತಗೊಳಿಸಿದ ಸಾಕ್ಷಾತ್ ಭಗವಂತನು ಮೆಚ್ಚುವ ಕಾರ್ಯನಿಷ್ಠೆ ಅವರಲ್ಲಿ ಇತ್ತು ಎಂದು ಚಿತ್ರದುರ್ಗದ ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿಗಳವರು ಮಾತನಾಡಿದರು, ತಾಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಮಡಿವಾಳ ಶ್ರೀ ಮಾಚಿದೇವರ ಸಂಘ ಆಯೋಜಿಸಿದ್ದ ವಚನ ಸಾಹಿತ್ಯ ಸಂರಕ್ಷಕ ವೀರಗಣಾಚಾರಿ ಶ್ರೀ ಮಡಿವಾಳ ಮಾಚಿದೇವರ ಪ್ರಥಮ ವರ್ಷದ ಜಯಂತೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಅಂದು ಮಡಿವಾಳ ಮಾಚಯ್ಯನು ಶರಣರ ಬಟ್ಟೆಗಳನ್ನ ಶುಭ್ರಗೊಳಿಸಲು ಐದು ನಿರ್ಬಂಧಗಳನ್ನು ವಿಧಿಸದ್ದನು, ಅವುಗಳಲ್ಲಿ ಮಧ್ಯಪಾನ ಮಾಡದ ಭ್ರಷ್ಟರಾಗಿರದ ಶರಣರ ಬಟ್ಟೆಯನ್ನು ಶುಭ್ರಗೊಳಿಸುತ್ತಿದ್ದನು. ಜಯಂತಿಯ ಉದ್ದೇಶ ಜಾಗೃತಿ ಅಂತಹ ಜಾಗೃತಿ ಬದುಕಿನಲ್ಲಿ ಬಂದರೆ ಸಹಜವಾಗಿ ಬದುಕಿನಲ್ಲಿ ಬದಲಾವಣೆ ಬರುತ್ತದೆ ನಮ್ಮ ಸಮುದಾಯದ ಬಗ್ಗೆ ಕಾಳಜಿ ಅಭಿಮಾನ ಗೌರವ ನಾವು ಬೆಳೆಸಿಕೊಳ್ಳದಿದ್ದರೆ ಸಮುದಾಯ ಸರ್ವನಾಶವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ದೇವರಿಗೆ ಗುರುಗಳಿಗೆ ಪಂಜು ಹಿಡಿದು ನೆಲಮಡಿ ಮಾಡುವ ನಮ್ಮ ಸಂಸ್ಕೃತಿ ಪರಂಪರೆ ಬೆಲೆ ಕಟ್ಟಲಾಗದು ಆದರೆ ನಮ್ಮ ಮಕ್ಕಳಿಗೆ ನಿಮ್ಮ ವೃತ್ತಿಯನ್ನು ಕೊಡಬೇಡಿ ಬದಲಾಗಿ ಅವರನ್ನು ಅಧಿಕಾರಿ ವಿದ್ಯಾವಂತರನ್ನಾಗಿ ಮಾಡಿ ನಮ್ಮ ಸಮುದಾಯಕ್ಕೆ ಆಸ್ತಿಯನ್ನಾಗಿ ಮಾಡಿ ಎಂದರು. ಇಡೀ ಜಗತ್ತಿನಲ್ಲಿ ಸೂತಕವಿಲ್ಲದ ಸಮಾಜ ನಮ್ಮದು ಬದಲಾಗಿ ಸೂತಕ ತೆಗೆಯುವುದು ನಮ್ಮ ಸಮುದಾಯದ ನಾವೇ ನಾವೆಲ್ಲರೂ ಸೇರಿ ಸಮಾಜವನ್ನು ಕಟ್ಟಬೇಕು, ಕೆಲವು ವರ್ಷಗಳಲ್ಲಿ ಮಡಿವಾಳ ಸಮಾಜ ಮುಖ್ಯ ವಾಹಿನಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ವಿಶೇಷ ಉಪನ್ಯಾಸ ಮಾಡಿದ ಪ್ರವಚನಕಾರ ಯಡಿಯೂರು ಶ್ರೀ ಮೂಡಲಗಿರಿಯವರು ಶ್ರೀ ಮಡಿವಾಳ ಮಾಚಿದೇವರ ವೃತ್ತಾಂತವನ್ನು ತಿಳಿಸಿ 12ನೇ ಶತಮಾನದ ಕಲ್ಯಾಣದ ಕ್ರಾಂತಿಗೆ ಶ್ರೀ ಮಾಚಿದೇವರ ಕೊಡುಗೆಯನ್ನ ವೈಭವಿಕರಿಸಿದರು. ನಾನು 2,796 ವೇದಿಕೆಯಲ್ಲಿ ಶ್ರೀ ಮಾಚಿದೇವರ ಉಪನ್ಯಾಸವನ್ನು ಮಾಡಿದ್ದೇನೆ ಅಂದಿನ ನಮ್ಮ ವೃತ್ತಿಗಿಂತ ಇಂದು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯ ವಾಹಿನಿಗೆ ನಾವು ಬರಬೇಕು ಎಂದರು.ಕಾರ್ಯಕ್ರಮದಲ್ಲಿ ಮಾಜಿ ತುಮಕೂರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಮುದಿಮುಡು ರಂಗಸ್ವಾಮಯ್ಯನವರು ಮಾತನಾಡಿ ನಮ್ಮ ಸಮಾಜ ಹಿಂದುಳಿದಿದೆ ವಿದ್ಯಾವಂತರ ಸಂಖ್ಯೆ ಕಡಿಮೆ ಇದೆ ಎಂಬ ಉದ್ದೇಶದಿಂದ ಹಲವಾರು ಸಮಾವೇಶಗಳನ್ನ ಕೈಗೊಳ್ಳಲಾಗುತ್ತಿದೆ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಾವು ಹಿಂದುಳಿದಿದ್ದೇವೆ ನಮ್ಮ ಜಾತಿಯನ್ನ ಪರಿಶಿಷ್ಟ ಜಾತಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ನಿಟ್ಟೂರು ಸಮಾಜ ಸೇವಕರಾದ ಎನ್. ಗಂಗಾಧರ್ ಮಡಿವಾಳ್ ಅವರಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ 80% ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಗದ್ಗುರು ಡಾ. ಶ್ರೀ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿಗಳವರು, ಯಡೆಯೂರು ಶ್ರೀ ಮೂಡಲಗಿರಿಯವರು, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಮುದಿಮುಡು ರಂಗಸ್ವಾಮಯ್ಯ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯರಾದ ಸಂ.ಕೃ. ಶ್ರೀಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಲಿಂಗಮೂರ್ತಿ, ನಿಟ್ಟೂರು ಸಮಾಜ ಸೇವಕರಾದ ಎನ್. ಗಂಗಾಧರ್ ಮಡಿವಾಳ್ , ಸಂಪಿಗೆ ಶ್ರೀ ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷರು , ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಜಿಲ್ಲಾ ಶ್ರೀ ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷರು , ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು, ಉಪಸ್ಥಿತರಿದ್ದರು. ಮಡಿವಾಳ ಸಮುದಾಯದವರು ಮತ್ತು ಸಾರ್ವಜನಿಕರ ಸದರಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

Exit mobile version