KALPATHARU KRANTHI

ತಿಪಟೂರಿನಲ್ಲಿ ಹಳೇ ದ್ವೇಷದ ಹಿನ್ನೆಲೆ ಎರಡು ಗುಂಪುಗಳ ನಡುವೆ ಗಲಾಟೆ ಚಾಕುವಿಂದ ಇರಿದು ಕೊಲೆ ಯತ್ನ

Spread the love

ತಿಪಟೂರು ನಗರದಅರಸುನಗರದಲ್ಲಿ ಹಳೇ ದ್ವೇಷದ ಹಿನ್ನೆಲೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು ಯುವಕನೋರ್ವನ ಕುತ್ತಿಗೆಗೆ ಚಾಕುವಿಂದ ಇರಿದು ಕೊಲೆ ಯತ್ನನಡೆಸಲಾಗಿದೆ.

ತಿಪಟೂರು ನಗರದ ಅರಸು ನಗರದ ವಾಸಿ ಮುಬಾರಕ್ ಪಾಷ ಹಾಗೂ ಸುಹೇಲ್ ನಡುವೆ ಆಗಿಂದಾಗ್ಗೆ ಗಲಾಟೆಗಳು ನಡೆಯುತ್ತಲೇ ಇದ್ದು ಈ ಹಿಂದೆ ಸುಹೇಲ್ ಸಂಬಂದಿ ಗೋವರ್ ಎಂಬುವವನಿಗೆ ಮುಬಾರಕ್ ಗುಂಪು ಚಾಕುವಿನಿಂದ ಹಲ್ಲೆ ನಡೆಸಿತ್ತು, ಇದೇ ದ್ವೇಷದ ಹಿನ್ನೆಲೆ ಇಂದು ಎರಡು ಗುಂಪುಗಳ ನಡುವೆ ಗಲಾಟೆ ನಡೆದು.ತಿಪಟೂರು ನಗರದ ಅರಸು ನಗರವಾಸಿ ಮುಬಾರಕ್ ಎನ್ನುವವನಿಗೆ ಸುಹೇಲ್ ಚಾಕುವಿನಿಂದ ಇರಿದಿದ್ದು, ಮುಬಾರಕ್ ಕುತ್ತಿಗೆ ಭಾಗಕ್ಕೆ ಕುಯ್ದಿದ್ದು
ಚಿಕಿತ್ಸೆಗಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ, ಸ್ಥಳಕ್ಕೆ ತಿಪಟೂರು ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಿಪಟೂರು ನಗರದ ಕೋಮು ಸೂಕ್ಷ್ಮ ಪ್ರದೇಶವಾದ ಗಾಂಧಿ ನಗರದಲ್ಲಿ ಗೋಮರ್ ಗುಂಪು ಹಾಗೂ ಮುಬಾರಕ್ ಗುಂಪುಗಳು, ಪ್ರಾಬಲ್ಯ ಸ್ಥಾಪನೆಗಾಗಿ ಗಲಾಟೆ ಹೊಡೆದಾಟಗಳು ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದು,ಪೊಲೀಸ್ ಇಲಾಖೆ ಸ್ಥಳೀಯರ ಆರೋಪದಂತೆ ರೌಡಿಗ್ಯಾಂಗ್ ಗಳು ತಲೆ ಎತ್ತದಂತೆ ಕಾನೂನಿನ ಅಂಕುಶ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ.

Exit mobile version