KALPATHARU KRANTHI

ಬಗರ್ ಹುಕ್ಕುಂ ಮುಂಜೂರಾತಿಯಲ್ಲಿ ಅಕ್ರಮ ಬಡ ರೈತರಿಗೆ ಮಂಜೂರಾಗಬೇಕಾದ ಜಮೀನು ಬೆಂಗಳೂರಿನ ಮಂದಿಗೆ ಮಂಜೂರು ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ ಆಕ್ರೋಶ.

IMG-20250211-WA0002
Spread the love

ತುರುವೇಕೆರೆ ತಾಲ್ಲೂಕಿನ ಬಗರ್ ಹುಕ್ಕು ಸಾಗುವಳಿ ಚೀಟಿ ನೀಡುವಲ್ಲಿ ಅಕ್ರಮವಾಗಿದೆ,ಬಡವರಿಗೆ ಸಿಗಬೇಕಾದ ಭೂಮಿ ಬೆಂಗಳೂರಿನ ಶ್ರೀಮಂತರ ಪಾಲಾಗಿದ್ದು ಸರ್ಕಾರ ಸೂಕ್ತ ತನಿಖೆ ನಡೆಸಿ ಉಳ್ಳವರಿಗೆ ಮುಂಜೂರಾಗಿರುವ ಭೂಮಿ ವಾಪಾಸ್ ಪಡೆದು ಅರ್ಹಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


ತುರುವೇಕೆರೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಕರ್ಮಕಾಂಡ ಬಯಲಿಗೆಳೆದ ಶಾಸಕ ಎಂ.ಟಿ ಕೃಷ್ಣಪ್ಪ,ತುರುವೇಕೆರೆ ಕ್ಷೇತ್ರದ ವ್ಯಾಪ್ತಿಯಲ್ಲೇ ಸಾವಿರಾರು ಎಕರೆ ಜಮೀನು ಮಂಜೂರಾತಿಯಲ್ಲಿ ಅವ್ಯವಹಾರ ಆಗಿದೆ.ಒಂದು ಎಕರೆಗೆ 5 ಲಕ್ಷ ರೂ.ನಂತೆ ಲಂಚ ಪಡೆದು ಜಮೀನು ಮಂಜೂರು ಮಾಡಿದ್ದಾರೆ.ಸಾವಿರಾರು ಎಕರೆ ಮಂಜೂರಾತಿ ಜಮೀನು ಅವ್ಯವಹಾರ ನಡೆದಿದ್ದು, ಮೇಲ್ನೋಟಕ್ಕೆ 50 ಕೋಟಿ ಅಂತಾ ಗೊತ್ತಾಗಿದೆ.ಸುಮಾರು 350-400 ಎಕರೆ ಜಮೀನನ್ನ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿದ್ದಾರೆ.ತಹಶೀಲ್ದಾರ್‌ರಿಂದ ಗ್ರಾಮ ಸಹಾಯಕರವರೆಗೂ ಈ ಅವ್ಯವಹಾರದಲ್ಲಿ ಭಾಗ ಆಗಿದ್ದಾರೆ.
ಈಗಾಗಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ. ಇನ್ನೂ, ಕ್ರಮ ಆಗಿಲ್ಲ.
ಈ ಬಗ್ಗೆ ಲೋಕಾಯುಕ್ತಗೆ ದೂರು ನೀಡ್ತೇನೆ. ಸಮಗ್ರ ತನಿಖೆ ಆಗಬೇಕು ಅಂತಾ ಒತ್ತಾಯಿಸುತ್ತೇನೆ ಎಂದು ಎಂ.ಟಿ ಕೃಷ್ಣಪ್ಪ.ತಿಳಿಸಿದರು

ವರದಿ : ಸಂಪಿಗೆ ಮೂರ್ತಿ ತುರುವೇಕೆರೆ

Exit mobile version