ಫೆಬ್ರವರಿ 13 ರಿಂದ 16 ವರೆಗೆ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಸ್ಪಂದನಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪುರುಷರು ಹಾಗೂ ಮಹಿಳೆಯರ ಕ್ರೀಡಾಕೂಟ ನಡೆಯಲಿದೆ.3 ದಿನಗಳ ಕಾಲ ಕ್ರೀಡಾಕೂಟ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲಿದ್ದು,ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ವಾಲಿಬಾಲ್ ಆಟಗಾರರು ಹಾಗೂ ತಂಡಗಳು ಭಾಗವಹಿಸಲಿವೆ,ಕ್ರೀಡಾಕೂಟಕ್ಕೆ ಕಲ್ಪತರು ಕ್ರೀಡಾಗಣ ಸಕಲ ರೀತಿ ಸಜ್ಜಾಗುತ್ತಿದೆ.
ತಿಪಟೂರಿನ ಕಲ್ಪತರು ಕ್ರೀಡಾಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಸ್ಪಂದನಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸದಸ್ಯ ನವೀನ್ ಮಾತನಾಡಿ ತಿಪಟೂರು ಕಲ್ಪತರು ಕ್ರೀಡಾಂಗಣದಲ್ಲಿ ಫೆಬ್ರವರಿ 13ರಿಂದ 16 ರ ವರೆಗೆ ನಡೆಯಲಿದ್ದು,13 ರಂದು ಸಂಜೆ ತಿಪಟೂರು ನಗರದ ಕ್ರೀಡಾಂಗಣದಲ್ಲಿ ಶಾಸಕ ಕೆ.ಷಡಕ್ಷರಿ ಕ್ರೀಡಾಕೂಟ ಉದ್ಘಾಟನೆ ನೆರವೇರಿಸಲಿದ್ದು.ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಕ್ರೀಡಾಜ್ಯೋತಿ ಸ್ವೀಕರಿಸಲಿದ್ದಾರೆ.ಫೆಬ್ರವರಿ 14ರಂದು ಕ್ರೀಡಾ ಸಾಧಕರಿಗೆ ಸನ್ಮಾನ 15ರಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭ 16 ರಂದು ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಸಲಿದ್ದು, ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ಸಿ ನಾಗೇಶ್ ಮಾಜಿ ಶಾಸಕ ಬಿ ನಂಜಾಮರಿ,ಕೆಪಿಸಿಸಿ ಸದಸ್ಯ ವಿ.ಯೋಗೇಶ್.ಎಸಿಪಿ ಹೇಮಂತ್ ನಿಂಬಾಳ್ಕರ್ ಐಪಿಎಸ್,ಚೇತನ್ ಐಪಿಎಸ್ ಸೇರಿದಂತೆ ಅನೇಕ ಗಣ್ಯರು ರಾಜಕೀಯ ನಾಯಕರು.ಕ್ರೀಡಾಪಟುಗಳು,ಭಾಗವಹಿಸುತ್ತಿದ್ದು ಕ್ರೀಡಾಭಿಮಾನಿಗಳಿಗೆ ಕ್ರೀಡೆಯ ರಸದೌತಣ ನೀಡಲಿದೆ.ರಾಷ್ಟ್ರೀಯ ಅಂತರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸುವ ಈ ಕ್ರೀಡಾಕೂಟಕ್ಕೆ ವಿದ್ಯಾರ್ಥಿಗಳು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ನಿಜಗುಣ, ಮಾದಿಹಳ್ಳಿ ರೇಣು.ಫಲ್ಲಾಗಟ್ಟಿ ವಿಜಯ್ ಕುಮಾರ್.ಸಿದ್ದರಾಮಣ್ಣ.ಸಂಗಮೇಶ್ ಕಳ್ಳಿಹಾಳ್.ತೋಂಟಾರಾಧ್ಯ.ಒಇಹಿಲಾ ಗಂಗಾಧರ್.ಹೇಂಮತ್ .ದೈಹಿಕ ನಿರ್ದೇಶಕರಾದ ನಂಜೆಗೌಡ.ಅಪ್ಪೆಗೌಡ,ಮುಂತ್ತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ