ತಿಪಟೂರು ನಗರದ ಶಂಕರಪ್ಪ ಲೇಹೌಟ್ ನಲ್ಲಿ ದಿನಾಂಕ 28.01.2025 ರಂದು ಶ್ರೀಮತಿ ಅನಸೂಯ ರಾಜ್ ರವರು ತಿಪಟೂರು ಟೌನಿನಲ್ಲಿ ನಡೆದುಕೊಂಡು
ಹೋಗುತ್ತಿರುವಾಗ ಹಿಂದಿನಿಂದ ಮೋಟಾರ್ ಸೈಕಲ್ ನಲ್ಲಿ ಬಂದಇಬ್ಬರು ವ್ಯಕ್ತಿಗಳು, ಅನಸೂಯ ರಾಜ್ ರವರ ಕೊರಳಿಗೆ ಕೈ ಹಾಕಿ
ಕೊರಳಿನಲ್ಲಿದ್ದ ಸುಮಾರು 80 ಗ್ರಾಂ ತೂಕದ 4 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದರೆಂದು ನೀಡಿದ ದೂರಿನ ಮೇರೆಗೆ,ತಿಪಟೂರು ನಗರ ಪೊಲೀಸ್ ಠಾಣಾ ಮೊಕದ್ದಮೆ ಸಂಖ್ಯೆ 20/2025 ಕಲಂ 309(4) BNS ರೀತ್ಯಪ್ರಕರಣದಾಖಲಿಸಿರುತ್ತೆ.
ಮೇಲ್ಕಂಡ ಪ್ರಕರಣವನ್ನು ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ವಿ.ಮರಿಯಪ್ಪಹಾಗೂಬಿ.ಎಸ್.ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ ತಿಪಟೂರು ಉಪ – ವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ವಿನಾಯಕ ಶೆಟಗೇರಿ ರವರ ಮಾರ್ಗಸೂಚನೆ
ಮೇರೆಗೆ ತಿಪಟೂರು ನಗರ ಪೊಲೀಸ್ ಠಾಣೆಯ ವೆಂಕಟೇಶ್ ಸಿ, ಪೊಲೀಸ್ ಇನ್ಸ್ ಪೆಕ್ಟರ್, ಡಿ.ಕೃಷ್ಣಪ್ಪ, ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಸಹಾಯಕ
ಪೊಲೀಸ್ ಉಪ ನಿರೀಕ್ಷಕರಾದ ಚಿಕ್ಕಲಕ್ಕೇಗೌಡ & ಉಸ್ಮಾನ್ ಸಾಬ್ ಮತ್ತು ಸಿಬ್ಬಂದಿಯವರಾದ ಮೋಹನ್ ಕುಮಾರ್, ಮೋಹನ್,
ಲೋಕೇಶ್, ಯತೀಶ್, ಸಾಗರ್ ಅಂಬಿಗೇರ್, ಮಂಜುನಾಥ ಕುಪ್ಪಾಡ, ಮನೋಜ್ ರವರು ಕಾರ್ಯಾಚರಣೆ ಮಾಡಿ ಪ್ರಕರಣ ದಾಖಲಾದ ಕೇವಲ10 ದಿನಗಳ ಒಳಗೆ ದಿನಾಂಕ 07.02.2025 ರಂದು ಆರೋಪಿಗಳಾದಇರ್ಪಾನ್ @ ಡಿಚ್ಚಿ ಇರ್ಫಾನ್ ಬಿನ್ ಲೇಟ್ ಅನ್ವರ್ ಖಾನ್, 35ವರ್ಷ,ವೆಲ್ಡಿಂಗ್ ಕೆಲಸ & ಆಟೋ ಚಾಲಕ, ಮಾಡಲ್ ಸ್ಕೂಲ್ ಮುಂಬಾಗ, ಉಪ್ಪಳಿ, ಚಿಕ್ಕಮಂಗಳೂರು ನಗರ
ಅಸ್ಪಾನ್ @ ಆಸ ಬಿನ್ ಮೊಹಮದ್ ಅಲಿ, 23 ವರ್ಷ, ಚಿಕನ್ ಶಾಪ್ ಕೆಲಸ, 1 ನೇ ಕ್ರಾಸ್, ಟಿಪ್ಪು ನಗರ, ಚಿಕ್ಕಮಂಗಳೂರು ನಗರ ಆಖಿಬ್ ಶರೀಫ್ ಬಿನ್ ಚಾಂದ್ ಶರೀಪ್, 24 ವರ್ಷ, ವೆಲ್ಡಿಂಗ್ ಕೆಲಸ, ಮುದಿಗೆರೆ, ಬೇಲೂರು ತಾಲ್ಲೋಕ್, ಹಾಸನ ಜಿಲ್ಲೆರವರುಗಳನ್ನು ಬಂಧಿಸಿ ಸದರಿಯವರು ಕಡೂರು ರೈಲ್ವೆ ಸ್ಟೇಷನ್ ಬಳಿ ಕಳ್ಳತನ ಮಾಡಿದ್ದ ಕೆ.ಎ 04 ಜೆಡ್-5346 ನೇ ಮಾರುತಿ 800 ಕಾರನ್ನುವಶಕ್ಕೆ ಪಡೆದಿರುತ್ತದೆ. 67,00 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಚಿನ್ನದ ಸರ ಕೀಳಲು ತಿಪಟೂರು ಟೌನಿನಲ್ಲಿ ಕಳ್ಳತನ ಮಾಡಿಉಪಯೋಗಿಸಿದ ಕೆ.ಎ. 66 ಜೆಡ್- 9490 ನೇ ಡಿಸ್ಕವರ್ ಬೈಕನ್ನು ಹಾಗೂ ಮೇಲ್ಕಂಡ ಮೂರು ಜನ ಆರೋಪಿಗಳು ಚಿತ್ರದುರ್ಗ ಜಿಲ್ಲೆ
ಹಿರಿಯೂರು ಟೌನ್ ನಲ್ಲಿರುವ ವಾಸವಿ ಜ್ಯೂಯಲರ್ಸ್ ಚಿನ್ನಾಭರಣ ಅಂಗಡಿಯನ್ನು ದರೋಡೆ ಮಾಡಲು ಸಂಚು ರೂಪಿಸಿ ಅದನ್ನು ಕಾರ್ಯಗತ
ಗೊಳಿಸಲು ಒಂದು ಗ್ಯಾಸ್ ಸಿಲಿಂಡರ್, ಒಂದು ಗ್ಯಾಸ್ ಕಟ್ಟರ್ ಸಲಕರಣೆ & ಒಂದು ಹರಿತವಾದ ಹಾಗೂ ಚೂಪಾದ ಕಬ್ಬಿಣದ ಹಾರೆಯನ್ನುಕಾರಿನಲ್ಲಿ ಕೊಂಡೊಯ್ಯುವಾಗ ತಿಪಟೂರು ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ವಾಸವಿ ಜ್ಯೂಯಲರ್ಸ್ ಚಿನ್ನಾಭರಣ ಅಂಗಡಿಯದರೋಡೆಯನ್ನುವಿಫಲಗೊಳಿಸಿರುತ್ತಾರೆ.ಮೇಲ್ಕಂಡ ಆರೋಪಿಗಳಿಂದ ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ್ದ ರೂ 5,40,000 ಮೌಲ್ಯದ ಕಾರು, ಬೈಕು,
ಚಿನ್ನಾಭರಣಗಳನ್ನು ಅಮಾನತ್ತು ಪಡಿಸಿಕೊಂಡುಘನನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಿ, ಆರೋಪಿಗಳು ನ್ಯಾಯಾಂಗ
ಬಂಧನದಲ್ಲಿರುತ್ತಾರೆ.ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ,ಐ.ಪಿ.ಎಸ್ ರವರು ಪ್ರಶಂಶಿಸಿದ್ದಾರೆ.
ವರದಿ :ಮಂಜುನಾಥ್ ಹಾಲ್ಕುರಿಕೆ