KALPATHARU KRANTHI

ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ, ತಿಪಟೂರಿನಲ್ಲಿ ವಿಜಯೋತ್ಸವ ಸಿಹಿ ವಿತರಿಸಿ ಸಂಭ್ರಮಾಚರಣೆ

Spread the love

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಜಯಭೇರಿಗಳಿಸಿದ ಹಿನ್ನೆಲೆ ತಿಪಟೂರು ನಗರದ ನಗರಸಭಾ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.

ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತರನ್ನ ಉದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ಸಿ ನಾಗೇಶ್ ದೆಹಲಿ ಸರ್ಕಾರ ಭ್ರಷ್ಟಚಾರ ಹಾಗೂ ಜನವಿರೋಧ ಆಡಳಿತಕ್ಕೆ ಜನ ತಕ್ಕ ಉತ್ತರ ನೀಡಿದ್ದಾರೆ, ಇಬ್ಬರು ಮುಖ್ಯಮಂತ್ರಿಗಳಿಗೆ ಸೋಲು ನೀಡುವ ಮೂಲಕ,ಬಿಜೆಪಿ ಹೋರಾಟಕ್ಕೆ ಮನ್ನಣೆ ನೀಡಿದ್ದಾರೆ,ಅಭ್ಕಾರಿ ಹಗರಣ ಸೇರಿದಂತೆ ಹಲವಾರು ಹಗರಣದಲ್ಲಿ ಭಾಗಿಯಾದ ಎಲ್ಲರಿಗೂ ಮನೆದಾರಿತೋರಿದ್ದಾರೆ,ಬಿಜೆಪಿ ಕಾರ್ಯಕರ್ತರರು ಪಕ್ಷ ಸಂಘಟನೆಯಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿ ಉತ್ತಮ ಫಲಿತಾಂಶ ಬಂದೇಬರುತ್ತದೆ.ಕರ್ನಾಟಕದಲ್ಲಿಯೂ ಸಹ ಸರ್ಕಾರ ಇದೆಯೋ ಇಲ್ಲವೋ ಎನ್ನುವುದೇ,ಜನಕ್ಕೆ ಗೊತ್ತಾಗದಂತ್ತಾಗಿದೆ,ರಾಜ್ಯಸರ್ಕಾರದ ಜನವಿರೋಧಿ ಆಡಳಿತಕ್ಕೆ ಜನ ತಕ್ಕಪಾಠ ಕಲಿಸುವ ಕಾಲದೂರವಿಲ್ಲ,ಎಂದು ತಿಳಿಸಿದರು
ಸಂಭ್ರಮಾಚರಣೆಯಲ್ಲಿ ಬಿಜೆಪಿ ಅಧ್ಯಕ್ಷ ಸತೀಶ್, ನಗರಾಧ್ಯಕ್ಷ ಜಗದೀಶ್,ಮುಖಂಡರಾದ ಗಂಗರಾಜು,ಪ್ರಸನ್ನ ಕುಮಾರ್,ಹರಿಸಮುದ್ರ ಗಂಗಾಧರ್,ಬಿಸ್ಲೇಹಳ್ಳಿ ಜಗದೀಶ್,ಕರಡಿದೇವರಾಜು,ಬಳ್ಳೆಕಟ್ಟೆ ಸುರೇಶ್,ಗುಲಾಬಿ ಸುರೇಶ್,ಹಾಲ್ಕುರಿಕೆ ನಾಗರಾಜು,ನಗರಸಭಾ ಸದಸ್ಯರಾದ ಪದ್ಮತಿಮ್ಮೆಗೌಡ,ಮುಂತ್ತಾದವರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version