KALPATHARU KRANTHI

ತುಮಕೂರು ಲೋಕಾಯುಕ್ತರಿಂದ ಸಾರ್ವಜನಿಕರ ಅಹವಾಲು ಸ್ವೀಕಾರಸಭೆ,ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲು ಲೋಕಾಯುಕ್ತರ ಸೂಚನೆ.

Spread the love

ತುಮಕೂರು ಜಿಲ್ಲೆ ತಿಪಟೂರು ನಗರದ ತಾಲ್ಲೋಕು ಪಂಚಾಯ್ತಿ ಸಭಾಂಗಣದಲ್ಲಿ ತುಮಕೂರು ಲೋಕಾಯುಕ್ತ ಪೊಲೀಸ್ ವರೀಷ್ಠಾಧಿಕಾರಿ ಲಕ್ಷ್ಮಿನಾರಾಯಣ್ ಹಾಗೂ ಲೋಕಾಯುಕ್ತ ಡಿವೈಎಸ್ಪಿ ರಾಮಕೃಷ್ಣ ನೇತೃತ್ವದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಲಾಯಿತು

. ಸಭೆಯಲ್ಲಿ ಮಾತನಾಡಿದ ಲೋಕಾಯುಕ್ತ ಎಸ್.ಪಿ ಲಕ್ಷ್ಮೀನಾರಾಯಣ್, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಕೆಲಸ ಮಾಡಬೇಕು,ನಿಮ್ಮ ಹಂತದಲ್ಲಿ ಆಗುವಂತಹ ಕೆಲಸಗಳಿಗೆ,ಕಚೇರಿಗೆ ಅಲೆಸಬೇಡಿ,ಎಂದು ಸೂಚನೆ ನೀಡಿದರು, ತಿಪಟೂರು ನಗರಕ್ಕೆ ಕುಡಿಯುವ ನೀರುಪೂರೈಸುವ ಈಚನೂರು ಕೆರೆಗೆ ಯುಜಿಡಿ ನೀರು ಸೇರಿ ಕಲೂಷಿತವಾಗಿರುವ ಬಗ್ಗೆ ಪತ್ರಕರ್ತರ ಗಮನಸೆಳೆದಾಗ ಕಳವಳ ವ್ಯಕ್ತಪಡಿಸಿದ ಲೋಕಾಯುಕ್ತರು,ಸಾರ್ವಜನಿಕರು ಕುಡಿಯುವ ನೀರು ಜನರ ಜೀವದ ಜೊತೆ ಚೆಲ್ಲಾಟವಾಡಬೇಡಿ,ಅಡ್ವಾನ್ಸ್ ಟೆಕ್ನಾಲಜಿ ಬಳಸಿ,ಜಲಶುದ್ದಿಕರಣಕ್ಕೆ ಸೂಕ್ತ ಕ್ರಮಕೈಗೊಳ್ಳ ಬೇಕಾಗಿ ಪೌರಾಯುಕ್ತರಿಗೆ ಸೂಚನೆ ನೀಡಿದರು, ತಿಪಟೂರು ಉಪವಿಭಾಗ ಜೈಲು ನವೀಕರಣ ಮಾಡಲು ಸ್ಥಳಾಂತರ ಮಾಡಿದ್ದು,2018 ರಲ್ಲಿ ಆರಂಭವಾದ ನವೀಕರಣ ಕಾಮಗಾರಿ,ಇನ್ನೂ ಮುಗಿದಿಲ್ಲ ಎನ್ನುತ್ತಿದ್ದಾರೆ,ಲಕ್ಷಾಂತರ ರೂಪಾಯಿ ಸರ್ಕಾರಿ ಖಜಾನೆಹಣ ಸದುಪಯೋಗವಾಗಿಲ್ಲ,ತಿಪಟೂರಿನಿಂದ ಕೈದಿಗಳನ್ನ ಜೈಲಿಗೆ ಕರೆದುಕೊಂಡು ಹೋಗಲು,ಮತ್ತು ಜೈಲಿನಿಂದ ಕೋರ್ಟ್ ಗೆ ಕರೆತರಲು,ಕೊರತೆ ಸಿಬ್ಬಂದಿ ನಡುವೇ,ಪೊಲೀಸರು ಹರೆಸಾಹಸ ಪಡುವಂತ್ತಾಗಿದು,ಪೊಲೀಸರು ಅಪಾಯ ಹಾಗೂ ಆತಂಕದಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ,ಎಂದು ಪತ್ರಕರ್ತರು ಪ್ರಶ್ನೆ ಮಾಡಿದ್ದಾಗ, ತುರ್ತಾಗಿ ಸಂಭಂದಿಸಿದ ಇಲಾಖೆಗೆ ಪತ್ರಬರೆದು ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದರು.


ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಭದ್ರಾಪುರ ಬಳಿ ಪಲ್ಲಾಗಟ್ಟಿ ಅಡವಪ್ಪ ಟ್ರಸ್ಟ್ ಗೆ ಸೇರಿದ ಸುಮಾರು 180ಎಕರೆ ಜಮೀನನ್ನು ಕೆಲಪಟ್ಟಭದ್ರ ವ್ಯಕ್ತಿಗಳು ಕಬಳಿಸಲು ಸಂಚುರೂಪಿಸಿದ್ದು,1966 ರಲ್ಲಿ ಪಲ್ಲಾಗಟ್ಟಿ ಅಡವಪ್ಪನವರು 9ಜನ ಸೇರಿ ಟ್ರಸ್ಟ್ ನೋಂದಣಿ ಮಾಡಿಸಿದ್ದು ಸಾರ್ವಜನಿಕರ ಉಪಯೋಗಕ್ಕಾಗಿ ಭೂಮಿಯನ್ನ ಸಹ ಮಂಜೂರು ಮಾಡಿಸಿದರು, ಆದರೆ ಪಲ್ಲಾಗಟ್ಟಿ ಅಡವಪ್ಪನವರ ಕುಟುಂಬಕ್ಕೆ ಸಂಬಂದವಿಲ್ಲದ ಕೆಲವು ವ್ಯಕ್ತಿಗಳು ಅಕ್ರಮವಾಗಿ ಟ್ರಸ್ಟ್ ರಿನಿವಲ್ ಮಾಡಿಸಲು ಹೊರಟಿದ್ದಾರೆ, ಸಂಪೂರ್ಣವಾಗಿ ಮೂಲಬೈಲ ಉಲಂಗನೆ ಮಾಡಿದ್ದು, ನಿಯಮಬಾಹಿರ ಟ್ರಸ್ಟ್ ರಿನಿವಲ್ ನಲ್ಲಿ ತಿಪಟೂರು ಸಬ್ ರಿಜಿಸ್ಟರ್ ಶಾಮೀಲಾಗಿದ್ದು,ಕೂಡಲೇ ಟ್ರಸ್ಟ್ ರಿನಿವಲ್ ವಜಾಗೊಳಿಸಬೇಕು ಎಂದು ಭದ್ರಾಪುರ,ಸುತ್ತಮುತ್ತಲ ಗ್ರಾಮಸ್ಥರು ಲೋಕಾಯುಕ್ತರಿಗೆ ದೂರು ನೀಡಿದರು
ತಿಪಟೂರು ನಗರದ ವಿವೇಕಾನಂದ ನಗರದಲ್ಲಿ ಅಕ್ರಮ ಮದ್ಯಮಾರಾಟ ರಾಜಾರೋಷವಾಗಿ ನಡೆಯುತ್ತಿದೆ ಪೊಲೀಸ್ ಹಾಗೂ ಅಬ್ಕಾರಿ ಇಲಾಖೆಗೆ ಮಾಹಿತಿ ನೀಡಿದರು ಕ್ರಮಕೈಗೊಂಡಿಲ್ಲ ಎಂದು ಲೋಕಾಯುಕ್ತರ ಮುಂದೆ ಚಂದ್ರಶೇಖರ್ ಎಂಬುವವರು ದೂರು ನೀಡಿ ತುರ್ತು ಕ್ರಮಕ್ಕೆ ಒತ್ತಾಯಿಸಿದರು.ಬೆಸ್ಕಾಂ ಇಲಾಖೆ ಯಿಂದ ರಾತ್ರಿವೇಳೆ ತೋಟದ ಮನೆಗಳಿಗೆ ಕರಂಟ್ ನೀಡುತ್ತಿಲ್ಲ,ಇದರಿಂದ ತೋಟದಮನೆವಾಸಿಗಳಿಗೆ ತೊಂದರೆಯಾಗುತ್ತಿದ್ದು ,ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಲಾಯಿತು. ಸಾರ್ವಜನಿಕರಿಂದ ಹಲವಾರು ಸಮಸ್ಯೆಗಳ ಕುರಿತು ಅಹವಾಲು ಸ್ವೀಕರಿಸಲಾಯಿತು.ಸಭೆಯಲ್ಲಿ ತಿಪಟೂರು ಡಿವೈಎಸ್ಪಿ ವಿನಾಯಕ ಶೇಟ್ಟಿಗೇರಿ,ತಹಸೀಲ್ದಾರ್ ಪವನ್ ಕುಮಾರ್.ಇಒ ಸುದರ್ಶನ್,ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಸೇರಿದಂತೆ ಲೋಕಾಯುಕ್ತರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version