KALPATHARU KRANTHI

ಪಲ್ಲಾಗಟ್ಟಿ ಅಡವಪ್ಪ ಟ್ರಸ್ಟ್ ಅಕ್ರಮ ತಡೆಯಲು ಲೋಕಾಯುಕ್ತ ಮೊರೆಹೋದ ಭದ್ರಪುರ ಗ್ರಾಮಸ್ಥರು

IMG-20250206-WA0062
Spread the love

ತಿಪಟೂರು ತಾಲ್ಲೋಕಿನ ಭದ್ರಪುರ ತಿಪಟೂರು ತಾಲ್ಲೋಕಿನ ಸಮಾಜಸೇವಕರಾದ ಪಲಾಘಟ್ಟಿ ಅಡವಪ್ಪ ಮತ್ತು 9ಜನ ಸೇರಿ ಫಲಾಗಟ್ಟಿ ಅಡವಪ್ಪ ಟ್ರಸ್ಟ್ ರಿಜಿಸ್ಟರ್ ಮಾಡಿದ್ದು ಈ ಟ್ರಸ್ಟ್ ಹೆಸರಿಗೆ ಸುಮಾರು 180 ಎಕರೆ ಜಮೀನು ಮಂಜೂರು ಮಾಡಿಸಿ,ಕಲ್ಪತರು ವಿದ್ಯಾ ಸಂಸ್ಥೆ ಸೇರಿದಂತೆ ಸಾರ್ವಜನಿಕ ಉಪಯೋಗಕ್ಕೆ ಮೀಸಲಿರಸಲಾಗಿತ್ತು 1966 ರಲ್ಲಿ ಆರಂಭವಾದ ಟ್ರಸ್ಟ್ ನ್ನು,ನಕಲಿ ದಾಖಲೆ ಸೃಷ್ಠಿಮಾಡಿ ಜಮೀನು ಕಬಳಿಸಲು ಸಂಚುರೂಪಿಸಲಾಗಿದೆ, ಎಂದು ಆರೋಪಿಸಿ ಭದ್ರಪುರ ಸುತ್ತಮುತ್ತಲ ಗ್ರಾಮಸ್ಥರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು.


ತಿಪಟೂರು ನಗರದ ತಾಲ್ಲೋಕು ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ ತುಮಕೂರು ಲೋಕಾಯುಕ್ತರ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ದೂರು ನೀಡಿದ ಭದ್ರಪುರ ಅರಳಗುಪ್ಪೆ ಸುತ್ತಮುತ್ತಲ ಗ್ರಾಮಸ್ಥರು 1966 ರಲ್ಲಿ ಫಲ್ಲಾಗಟ್ಟಿ ಚೆನ್ನವೀರಪ್ಪ ಅಡವಪ್ಪ ನವರು 9ಜನ ಆರಂಭಿಸಿದ ಫಲ್ಲಾ ಗಟ್ಟಿ ಅಡವಪ್ಪ ಟ್ರಸ್ಟ್, ಸಾರ್ವಜನಿಕರ ಉಪಯೋಗಕ್ಕಾಗಿ ಹಲವಾರು ಕಾರ್ಯಕ್ರಮ ರೂಪಿಸಿತ್ತು, ಆದರೇ ಟ್ರಸ್ಟ್ ನ ಎಲ್ಲಾ ಸದಸ್ಯರೂ ಮರಣಹೊಂದಿದರೂ,ಒಂದೇ ಕುಟುಂಬದ 9ಜನ ಸೇರಿ ಟ್ರಸ್ಟ್ ಜಮೀನು ಕಬಳಿಸುವ ದೃಷ್ಟಿಯಿಂದ ನಕಲಿ ದಾಖಲೆ ಸೃಷ್ಟಿ ಮಾಡಿ,ತಿದ್ದುಪಡಿ ಮಾಡಲಾಗಿದ್ದು, ತಿದ್ದುಪಡಿ ಕಾನೂನು ಬಾಹಿರವಾಗಿದೆ, ಅಲ್ಲದೆ ತಿಪಟೂರು ಸಬ್ ರಿಜಿಸ್ಟರ್ ಅಕ್ರಮದಲ್ಲಿ ಶಾಮೀಲಾಗಿರುತ್ತಾರೆ, ತಿಪಟೂರು ತಾಲ್ಲೋಕಿನ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟ ಜಮೀನು ಕಬಳಿಸಲು ಸಂಚುರೂಪಿಸಲಾಗಿದ್ದು ಕೂಡಲೇ ಟ್ರಸ್ಟ್‌ ರಿನಿವಲ್ ವಜಾಗೊಳಿಸಬೇಕು, ಫಲ್ಲಾಗಟ್ಟಿ. ಅಡವಪ್ಪ ಟ್ರಸ್ಟ್ ಹೆಸರಿನಲ್ಲಿ ಇರುವ ಜಮೀನನ್ನು ಶಾಲಾಕಾಲೇಜು, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ದೂರು ನೀಡಿದ ಮುಖಂಡರಾದ ರೇಣುಕಮೂರ್ತಿ ಮಾತನಾಡಿ 1966 ರಲ್ಲಿ ನೋಂದಣಿಯಾದ ಮೂಲ ಟ್ರಸ್ಟ್ ಮೂಲ ಉದೇಶ ಮರೆಮಾಚಲಾಗಿದೆ, ಹಾಲಿ ರಿನಿವಲ್ ಮಾಡಿಕೊಂಡಿರುವ ಆರ್ ಎಸ್ ಉಮಮಹೇಶ್, ಹಾಗೂ ಅವರ ಧರ್ಮಪತ್ನಿ ಮಧು ಎಸ್,ಆರ್ ರವರ ಕುಟುಂಬಕ್ಕೂ ಫಲ್ಲಾಗಟ್ಟಿ ಅಡವಪ್ಪ ನವರ ಕುಟುಂಬಕ್ಕು ಯಾವುದೇ ಸಂಬಂದವಿರುವುದಿಲ್ಲ ಆದರೂ ಸಹ ಟ್ರಸ್ಟ್ ತಿದ್ದುಪಡಿ ಮಾಡಿರುವುದು, ಕಾನೂನು ಭಾಹಿರವಾಗಿದೆ,ಕೂಡಲೇ ತಿದ್ದುಪಡಿ ರದ್ದುಗೊಳಿಸಿ, 180ಎಕರೆ ಜಮೀನನ್ನ ಸಾರ್ವಜನಿಕ ಉದೇಶಕ್ಕೆ ಬಳಸಬೇಕು, ಹಾಗೂ ಪಲ್ಲಾಗಟ್ಟಿ ಅಡವಪ್ಪ ಕೆರೆಯನ್ನ ಸಾರ್ವಜನಿಕ ಬಳಕೆಗೆ ಅನುಕೂಲವಾಗಬೇಕು ಎಂದು ಒತ್ತಾಯಿಸಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version