ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ,ಕರಡಾಳು ಗ್ರಾಮದಲ್ಲಿ 14ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ 110/11ಕೆ.ವಿ ಉಪವಿದ್ಯುತ್ ಸ್ಥಾವರವನ್ನ ತಿಪಟೂರು ಶಾಸಕ ಕೆ.ಷಡಕ್ಷರಿ ಉದ್ಘಾಟಿಸಿದರು.
ಉಪವಿದ್ಯುತ್ ಸ್ಥಾವರ ಉದ್ಘಾಟಿಸಿ ಮಾತನಾಡಿದ ಕೆ.ಷಡಕ್ಷರಿ ತಿಪಟೂರು ತಾಲ್ಲೋಕಿನಲ್ಲಿ ವಿದ್ಯುತ್ ಅಭಾವ ಸರಿಪಡಿಸಲು ಯೋಜನೆ ರೂಪಿಸಿದ್ದು ತಾಲ್ಲೋಕಿನ ಮೀಸೆತಿಮ್ಮನಹಳ್ಳಿ ಬಳಿ 220 ಕೆ.ವಿ ವಿದ್ಯುತ್ ಸ್ಥಾವರ ಹಾಗೂ ಬಿದಿರೆಗುಡಿ, ಬಳುವನೇರಲು,ತಡಸೂರು ಬಳಿ 110ಕೆ.ವಿ ಉಪವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ,ಸರ್ಕಾರದಿಂದ ಅನುಮೋದನೆಯಾಗಿದ್ದು, ಶೀಘ್ರವಾಗಿ ಕೆಲಸ ಕೈಗೊಳ್ಳಲಾಗುವುದು, ತಾಲ್ಲೋಕಿನ ವಿದ್ಯುತ್ ನಿಲುಗಡೆ ಸಮಸ್ಯೆ ಪರಿಹಾರ ಮಾಡಲು ಕ್ರಮಕೈಗೊಳ್ಳಲಾಗುತ್ತಿದ್ದು, ರೈತರಿಗೆ ಕನಿಷ್ಟ 8 ಗಂಟೆ ವಿದ್ಯುತ್ ನೀಡಲು ಕ್ರಮಕೈಗೊಳ್ಳಲಾಗಿದೆ, ರೈತರಿಗೆ ನೀರು ,ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ನೀಡಬೇಕು ಎನ್ನುವುದು, ನಮ್ಮ ಮೊದಲ ಆಧ್ಯತೆಯಾಗಿದೆ ಇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ತಿಪಟೂರು ತಾಲ್ಲೋಕಿಗೆ ಹೇಮಾವತಿ ಹಾಗೂ ತುಂಗಭದ್ರ ಯೋಜನೆಯಿಂದ ನೀರು ತರುವ ಪ್ರಯತ್ನ ನಡೆಯುತ್ತಿದೆ. ತಾಲ್ಲೋಕಿನ 110 ಕೆರೆಗಳಿಗೆ ನೀರು ತುಂಬಿಸಲು ಎತ್ತಿನ ಹೊಳೆಯೋಜನೆಯಿಂದ ಅನುಮೋದನೆ ಪಡೆಯಲಾಗಿದೆ.
ತಿಪಟೂರು ನಗರವು ಸಹ ದಿನೇ ದಿನೇ ವೇಗವಾಗಿ ಬೆಳೆಯುತ್ತಿದ್ದು ನಗರಸಭೆನ್ನ ನಗರಪಾಲಿಕೆ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ, ಅಭಿವೃದ್ದಿ ವಿಚಾರದಲ್ಲಿ ನಗರದಷ್ಟೆ ಆಧ್ಯತೆಯನ್ನ ಗ್ರಾಮೀಣ ಭಾಗಕ್ಕೂ ನೀಡಲಾಗುವುದು,ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಹಾಗೂ ಸಾಮಾನ್ಯ ಜನರ ಜೀವನ ಸುಧಾರಣೆಗೆ ಕ್ರಮಕೈಗೊಂಡಿದೆ.ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ವಿಚಾರದಲ್ಲಿ ಮಲತಾಯಿಧೋರಣೆ ಅನುಸರಿಸುತ್ತಿದ್ದು, ಈ ಭಾರೀಯ ಬಜೆಟ್ ನಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯ ಮಾಡಿದ್ದಾರೆ, ನಾನು 100ರೂಪಾಯಿ ತೆರಿಗೆ ಹಣ ನೀಡಿದರೆ ಕೇವಲ 18 ರೂಪಾಯಿ ಹಣವನ್ನ ನಮ್ಮ ರಾಜ್ಯದ ಅಭಿವೃದ್ದಿಗೆ ನೀಡುತ್ತಿದ್ದಾರೆ, ನಮ್ಮ ರಾಜ್ಯದ ಪಾಲನ್ನ ಉತ್ತರ ಭಾರತದ ರಾಜ್ಯಗಳಿಗೆ ನೀಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದ್ದು, ನಮ್ಮ ಎಲ್ಲಾ ನಾಯಕರು ಒಗ್ಗಟಿನಿಂದ ನಮ್ಮ ಪಾಲನ್ನು ಪಡೆಯಲು ಹೋರಾಟ ಮಾಡಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಬೆಸ್ಕಾಂ ಮುಖ್ಯ ಇಂಜಿನಿಯರ್ ಬಿ.ಎನ್ ಸತ್ಯನಾರಾಯಣ್ ಮಾತನಾಡಿ ಸರ್ಕಾರದ ಯೋಜನೆಗಳು ಶೀಘ್ರವಾಗಿ ಕಾರ್ಯಗತವಾಗಲು ರೈತರ ಸಹಕಾರ ಅಗತ್ಯ, ರೈತರು ಯೋಜನೆಗಳಿಗೆ ಭೂಮಿ ಅಗತ್ಯವಿದ್ದಾಗ ಭೂಮಿ ನೀಡಿ ಸೂಕ್ತ ಪರಿಹಾರ ಪಡೆಯುವ ಮೂಲಕ ಸರ್ಕಾರದ ಯೋಜನೆಗಳಿಗೆ ನೆರವಾಗ ಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಅಧೀಕ್ಷಕ ಇಂಜಿನಿಯರ್ ಶಿವಕುಮಾರ್, ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ತಹಸೀಲ್ದಾರ್ ಪವನ್ ಕುಮಾರ್ ,ಇಒ ಸುದರ್ಶನ್ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ, ಎಇಇ ಸೋಮನಗೌಡ, ಎಇ ಮನೋಹರ್. ಬೆಸ್ಕಾಂ ಇಂಜಿನಿಯರ್ ನರಸಿಂಹಮೂರ್ತಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮುದ್ದಪ್ಪ ಕುಪ್ಪಾಳು ಗ್ರಾಮಪಂಚಾಯ್ತಿ ಅಧ್ಯಕ್ಷೆ ಗಾಯಿತ್ರಿ ಉಪಾಧ್ಯೆಕ್ಷೆ ಮಂಜುಳ ಮುಂತ್ತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ
